ETV Bharat / sports

ಪೌಷ್ಟಿಕ ಆಹಾರಕ್ಕೆ ಸುಶೀಲ್‌ಕುಮಾರ್​ ಬೇಡಿಕೆ: ತೀರ್ಪು ಕಾಯ್ದಿರಿಸಿದ ರೋಹಿಣಿ ಕೋರ್ಟ್​ - ಸಾಗರ್​ ರಾಣಾ ಕೊಲೆ ಪ್ರಕರಣದ ಆರೋಪಿ

ಸುಶೀಲ್ ಕುಮಾರ್​ ಈಗಾಗಲೇ ಜೈಲಿನಲ್ಲಿ ವ್ಯಾಯಾಮ ಮತ್ತು ಕುಸ್ತಿಗೆ ಸಂಬಂಧಿಸಿದ ಮೂವ್​​ಗಳ ಅಭ್ಯಾಸ ಆರಂಭಿಸಿದ್ದಾರೆ. ತಮ್ಮ ದೇಹದ ಸ್ಥಿತಿ ಕಾಪಾಡಿಕೊಳ್ಳಲು ಜೈಲಿನೊಳಗೂ 38 ವರ್ಷದ ಕುಸ್ತಿಪಟು ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿದ್ದಾರೆ..

ಪೌಷ್ಟಿಕ ಆಹಾರಕ್ಕೆ ಸುಶೀಲ್ ಕುಮಾರ್
ಪೌಷ್ಟಿಕ ಆಹಾರಕ್ಕೆ ಸುಶೀಲ್ ಕುಮಾರ್
author img

By

Published : Jun 8, 2021, 5:51 PM IST

ನವದೆಹಲಿ : ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಭಾರತದ ಸ್ಟಾರ್​ ಕುಸ್ತಿಪಟು ಸುಶೀಲ್‌ಕುಮಾರ್​ ಹೆಚ್ಚಿನ ಪ್ರೊಟೀನ್​ಯುಕ್ತ ಆಹಾರಕ್ಕಾಗಿ ಸಲ್ಲಿಸಿದ್ದ ಮನವಿಯನ್ನು ಆಲಿಸಿರುವ ದೆಹಲಿಯ ರೋಹಿಣಿ ಕೋರ್ಟ್​ ತೀರ್ಪು ಕಾಯ್ದಿರಿಸಿದೆ.

ಭಾರತಕ್ಕೆ 2 ಒಲಿಂಪಿಕ್ಸ್ ಪದಕ ತಂದುಕೊಟ್ಟಿರುವ ಸುಶೀಲ್ ಕುಮಾರ್​, ಕುಸ್ತಿಪಟು ಸಾಗರ್ ರಾಣಾ ಧಂಕರ್​ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅವರನ್ನು ಜೂನ್​ 2ರಂದು ಜೈಲು ಸೇರಿದ್ದರು. ಪೊಲೀಸ್​ ಕಸ್ಟಡಿಯಲ್ಲಿ ವಿಚಾರಣೆಯ ನಂತರ ಮಂಡೋಲಿ ಜೈಲಿನ 15ನೇ ನಂಬರ್​ ಕೋಣೆಯಲ್ಲಿ ಇರಿಸಲಾಗಿದೆ.

ವರದಿಯಂತೆ ಜೈಲಿನಲ್ಲಿ ಸುಶೀಲ್ ಕುಮಾರ್ ಅವರ ಆಹಾರ ಪದ್ಧತಿ ಕುಂಠಿತವಾಗಿದೆ. ಅವರಿಗೆ ರೋಟಿ, ತರಕಾರಿ ಹಾಗೂ ಹಾಲಿನ ಜೊತೆ ಹಣ್ಣುಗಳನ್ನು ನೀಡಲಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿರುವ ಅವರು, ತಮ್ಮ ದೇಹದ ತೂಕ ಮತ್ತು ಫಿಟ್​ನೆಸ್​ ಕಾಪಾಡಿಕೊಳ್ಳಲು ಹೆಚ್ಚಿನ ಪ್ರೊಟೀನ್ ಯುಕ್ತ ಆಹಾರ ಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.​

ಅಲ್ಲದೇ ಸುಶೀಲ್ ಕುಮಾರ್​ ಈಗಾಗಲೇ ಜೈಲಿನಲ್ಲಿ ವ್ಯಾಯಾಮ ಮತ್ತು ಕುಸ್ತಿಗೆ ಸಂಬಂಧಿಸಿದ ಮೂವ್​​ಗಳ ಅಭ್ಯಾಸವನ್ನು ಆರಂಭಿಸಿದ್ದಾರೆ. ತಮ್ಮ ದೇಹದ ಸ್ಥಿತಿ ಕಾಪಾಡಿಕೊಳ್ಳಲು ಜೈಲಿನೊಳಗೂ 38 ವರ್ಷದ ಕುಸ್ತಿಪಟು ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿದ್ದಾರೆ.

ಮೇ 23ರಂದು ದೆಹಲಿ ಪೊಲೀಸರು ಮಾಜಿ ಒಲಿಂಪಿಕ್ ಚಾಂಪಿಯನ್​ ಆಗಿರುವ ಸುಶೀಲ್‌ಕುಮಾರ್‌ ಮತ್ತು ಆತನ ಸಹಚರನನ್ನ ಬಂಧಿಸಿದ್ದರು. ಮೇ 4ರಂದು ಛತ್ರಶಾಲಾದ ಸ್ಟೇಡಿಯಂನಲ್ಲಿ ಮಧ್ಯರಾತ್ರಿ 23 ವರ್ಷದ ಸಾಗರ್​ ರಾಣಾ ಎಂಬ ಕುಸ್ತಿಪಟುವನ್ನು ಸುಶೀಲ್ ಮತ್ತು ಆತನ ಸಹಚರರು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಕೂಡ ವೈರಲ್​ ಆಗಿದೆ.

ಇದನ್ನು ಓದಿ: ಇಷ್ಟು ಸಾಕಾಗದು, ಇನ್ನಷ್ಟು ಊಟ ಕೊಡಿ; ಜೈಲು ಆಧಿಕಾರಿಗಳಿಗೆ ಸುಶೀಲ್ ಕುಮಾರ್ ಮೊರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.