ETV Bharat / sports

ಜೂನಿಯರ್ ಮಹಿಳಾ ವಿಶ್ವ ಚಾಂಪಿಯನ್: 10 ಮೀಟರ್ ಏರ್ ರೈಫಲ್​ನಲ್ಲಿ ರಮಿತಾಗೆ ಚಿನ್ನ

ಈಜಿಪ್ಟ್​ನ ಕೈರೋದಲ್ಲಿ ನಡೆದ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಶೂಟಿಂಗ್​ನಲ್ಲಿ ನಿನ್ನೆ ಒಂದೇ ದಿನ 6 ಪದಕ ಪಡೆದಿದೆ. 10 ಮೀಟರ್​ ರೈಫಲ್​ನಲ್ಲಿ ಭಾರತದ ರಮಿತಾ ಚಿನ್ನಕ್ಕೆ ಗುರಿಯಿಟ್ಟರು.

ramita-crowned-10m-air-rifle-junior-womens-world-champion
ಜೂನಿಯರ್ ಮಹಿಳಾ ವಿಶ್ವ ಚಾಂಪಿಯನ್
author img

By

Published : Oct 20, 2022, 9:19 AM IST

ನವದೆಹಲಿ: ಈಜಿಪ್ಟ್​ನ ಕೈರೋದಲ್ಲಿ ನಡೆದ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತದ ರಮಿತಾ ಅವರು 10 ಮೀಟರ್​ ರೈಫಲ್​ ಸ್ಪರ್ಧೆಯ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಚೀನಾದ ಯಿಂಗ್ ಶೆನ್​ರನ್ನು 16- 12 ಅಂಕಗಳ ಅಂತರದಿಂದ ಸೋಲಿಸಿದರು.

ಈಜಿಪ್ಟ್ ಇಂಟರ್ನ್ಯಾಷನಲ್ ಒಲಿಂಪಿಕ್ ಸಿಟಿ ಶೂಟಿಂಗ್ ರೇಂಜ್‌ನಲ್ಲಿ ನಡೆದ ಏಳನೇ ದಿನದ ಸ್ಪರ್ಧೆಯಲ್ಲಿ 50 ಮೀ ಪಿಸ್ತೂಲ್ ಮಹಿಳಾ ಜೂನಿಯರ್ ಸ್ಪರ್ಧೆಯಲ್ಲಿ ಭಾರತ 1-2-3 ಫಿನಿಶ್‌ ಕಂಡಿದೆ. ಈ ಮೂಲಕ 10 ಚಿನ್ನ, 5 ಬೆಳ್ಳಿ 10 ಕಂಚು ಸೇರಿದಂತೆ 25 ಪದಕಗಳನ್ನು ಕೊಳ್ಳೆ ಹೊಡೆಯಿತು. ಪದಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ಫೈನಲ್​ ಸುತ್ತಿನ ಹಣಾಹಣಿಯಲ್ಲಿ ಯಿಂಗ್ ಶೆನ್​ ಮತ್ತು ರಮಿತಾ ಸಮಬಲದ ಸ್ಪರ್ಧೆ ನೀಡಿದ್ದರು. ಬಳಿಕ ಪುಟಿದೆದ್ದ ರಮಿತಾ ಕೊನೆಯಲ್ಲಿ ನಿಖರ ಗುರಿ ಇಟ್ಟು 16-12 ರಲ್ಲಿ ಚಿನ್ನ ಗೆದ್ದರು. 629 ಅಂಕಗಳೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದ್ದ ರಮಿತಾ ಅಂತಿಮ ಪಂದ್ಯದಲ್ಲಿ 262.8 ಅಂಕ ಸಂಪಾದನೆಯೊಂದಿಗೆ ಚಾಂಪಿಯನ್​ ಆದರು.

ಇನ್ನೊಬ್ಬ ಶೂಟರ್​ ತಿಲೋತ್ತಮಾ ಸೇನ್ ದಿನದಾಟದಲ್ಲಿ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ತಂದರು. 261.0 ಪಾಯಿಂಟ್ಸ್​ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದರು.

50 ಮೀಟರ್ ಪಿಸ್ತೂಲ್ ಮಹಿಳಾ ಜೂನಿಯರ್ ಸ್ಪರ್ಧೆಯಲ್ಲಿ ಭಾರತ ಪಾರಮ್ಯ ಸಾಧಿಸಿತು. ದಿವಾನ್ಶಿ 547 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ವರ್ಷಾ ಸಿಂಗ್ 539 ಪಾಯಿಂಟ್ಸ್​ಗಳೊಂದಿಗೆ 2ನೇ ಸ್ಥಾನ ಮತ್ತು ತಿಯಾನಾ 523 ಅಂಕ ಜೊತೆಗೆ ಮೂರನೇ ಸ್ಥಾನ ಪಡೆದರು. ಇದಲ್ಲದೇ, ಖುಷಿ ಕಪೂರ್ 521 ಪಾಯಿಂಟ್ಸ್​​ ಪಡೆದು ನಾಲ್ಕನೇ ಸ್ಥಾನವನ್ನು ಪಡೆಯಿತು. 25 ಮೀ ಸ್ಟ್ಯಾಂಡರ್ಡ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿ ರಿದಂ ಸಾಂಗ್ವಾನ್​ ಬೆಳ್ಳಿ ಸಾಧನೆ ಮಾಡಿದರು.

ಪುರುಷರ ವಿಭಾಗ: ಇನ್ನು 50 ಮೀ ಪಿಸ್ತೂಲ್ ಪುರುಷರ ಜೂನಿಯರ್ ಸ್ಪರ್ಧೆಯಲ್ಲಿ ಭಾರತದ ಅಭಿನವ್ ಚೌಧರಿ ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಗೆದ್ದರು. ಅಭಿನವ್​ ಕೊರಿಯಾದ ಸಾಂಗ್ ಸಿಯುಂಘೋ ವಿರುದ್ಧ ಜಯ ಸಾಧಿಸಿದರು. 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ಶೂಟಿಂಗ್​ನಲ್ಲಿ ವಿಜಯವೀರ್ ಸಿಧು ಮೂರನೇ ಸ್ಥಾನ ಪಡೆದು ಕಂಚು ಗೆದ್ದರು.

ಓದಿ: ಸಾಧನೆಯ ಬೌಂಡರಿ..! ಕೊಹ್ಲಿ, ರೋಹಿತ್​, ಬಾಬರ್​ ಹಿಂದಿಕ್ಕಿದ ಐರ್ಲೆಂಡ್‌ ಆಟಗಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.