ETV Bharat / sports

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ ಮಣಿಸಿ ಸತತ 2ನೇ ಜಯ ದಾಖಲಿಸಿದ ಯುಪಿ ಯೋಧಾಸ್ - ​ ETV Bharat Karnataka

Pro Kabaddi-UP Yodhas wins: ಸುರೇಂದರ್ ಗಿಲ್ ಅವರ ಅದ್ಭುತ ರೈಡ್ ಯುಪಿ ಯೋಧಾಸ್ ಗೆಲುವಿನಲ್ಲಿ ಮಹತ್ವರ ಪಾತ್ರವಹಿಸಿತು.

ಯುಪಿ ಯೋಧಾಸ್
ಯುಪಿ ಯೋಧಾಸ್
author img

By ETV Bharat Karnataka Team

Published : Dec 10, 2023, 6:40 AM IST

ಬೆಂಗಳೂರು: ತೆಲುಗು ಟೈಟಾನ್ಸ್ ತಂಡವನ್ನು 48-33 ಅಂಕಗಳಿಂದ ಮಣಿಸಿದ ಯುಪಿ ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಎರಡನೇ ಜಯ ದಾಖಲಿಸಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಯೋಧಾಸ್‌ನ ಸುರೇಂದರ್ ಗಿಲ್ (14) ಮತ್ತು ಟೈಟಾನ್ಸ್‌ ಸ್ಟಾರ್ ಆಟಗಾರ ಪವನ್ ಶೆಹ್ರಾವತ್ (11) ಇಬ್ಬರೂ ಸೂಪರ್ 10 ಅಂಕ ಗಳಿಸಿ ಮಿಂಚಿದರು.

ಪಿಕೆಎಲ್‌ನ ಕಳೆದ ನಾಲ್ಕು ಆವೃತ್ತಿಗಳಲ್ಲಿ ಹೆಚ್ಚು ಅಂಕ ಗಳಿಸಿದ್ದ ರೈಡರ್‌ಗಳಾದ ಪರ್ದೀಪ್ ನರ್ವಾಲ್ ಮತ್ತು ಪವನ್ ಶೆಹ್ರಾವತ್ ನಡುವಿನ ಕಾಳಗವೆಂದೇ ಬಿಂಬಿತವಾಗಿದ್ದ ಪಂದ್ಯ ಇದಾಗಿತ್ತು. ಮೊದಲ ದಾಳಿಯಲ್ಲೇ ಶೆಹ್ರಾವತ್ ಅವರನ್ನು ಟ್ಯಾಕಲ್ ಮಾಡಿದ ಯೋಧಾಸ್ ತಂಡ ಟೈಟಾನ್ಸ್ ಸಮನ್ವಯತೆಯ ಕೊರತೆಯನ್ನು ಚಾಕಚಕ್ಯತೆಯಿಂದ ಬಳಸಿಕೊಂಡಿತು.

ಅಂಕಿತ್ ಮತ್ತು ಮಿಲಾದ್ ಜಬ್ಬಾರಿ ಅವರನ್ನು ಗಿಲ್ ತಮ್ಮ ಸೂಪರ್ ರೈಡ್ ಮೂಲಕ ಔಟ್ ಮಾಡಿದ್ದು, ಯೋಧಾಸ್​ಗೆ ದೊಡ್ಡ ಮುನ್ನಡೆ ಸಾಧಿಸಲು ನೆರವಾಯಿತು. ಈ ಸಂದರ್ಭದಲ್ಲಿ ಗಿಲ್‌ರನ್ನು ಸೂಪರ್ ಟ್ಯಾಕಲ್ ಮಾಡಿದ ಮಿಲಾದ್, ಟೈಟಾನ್ಸ್‌ಗೆ ಕೊಂಚ ಚೇತರಿಕೆ ನೀಡಿದರು. ಟೈಟಾನ್ಸ್‌ನ ಮೋಹಿತ್ ಮತ್ತು ಮಿಲಾದ್ ಜೋಡಿಯ ಕಠಿಣ ರಕ್ಷಣಾತ್ಮಕ ಆಟದ ಹೊರತಾಗಿಯೂ ಯೋಧಾಸ್ ಎರಡನೇ ಬಾರಿ ಆಲೌಟ್ ಅಂಕ ಗಳಿಸಿತು. ಹೀಗಾಗಿ ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ ಯೋಧಾಸ್ ಒಂಬತ್ತು ಅಂಕಗಳ ಮುನ್ನಡೆಯಲ್ಲಿತ್ತು.

ನಂತರದ ಯಾವುದೇ ಹಂತಗಳಲ್ಲಿಯೂ ಯೋಧಾಸ್ ತಂಡ ಟೈಟಾನ್ಸ್‌ಗೆ ಕಮ್‌ಬ್ಯಾಕ್ ಅವಕಾಶ ಸಿಗದಂತೆ ನೋಡಿಕೊಂಡಿತು. ಪಂದ್ಯ ಮುಗಿಯಲು ಎರಡು ನಿಮಿಷಗಳು ಬಾಕಿ ಇರುವಾಗ ಟೈಟಾನ್ಸ್ ಮೂರನೇ ಬಾರಿ ಆಲೌಟ್ ಆದ ಪರಿಣಾಮ ಯೋಧಾಸ್ ಮತ್ತಷ್ಟು ಮುನ್ನಡೆಯೊಂದಿಗೆ ಅರ್ಹ ಜಯ ಪಡೆಯಿತು.

ಇಂದಿನ ಪಂದ್ಯಗಳು:

ಪಂದ್ಯ 1: ಬೆಂಗಾಲ್ ವಾರಿಯರ್ಸ್ vs ತಮಿಳ್ ತಲೈವಾಸ್ - ರಾತ್ರಿ 8ಕ್ಕೆ

ಪಂದ್ಯ 2: ದಬಾಂಗ್ ಡೆಲ್ಲಿ vs ಹರಿಯಾಣ ಸ್ಟೀಲರ್ಸ್ - ರಾತ್ರಿ 9ಕ್ಕೆ

ಇದನ್ನೂ ಓದಿ: ಸಿದ್ಧಾರ್ಥ್ ದೇಸಾಯಿ, ವಿನಯ್ ಮಿಂಚಿನಾಟ ; ನಾಲ್ಕನೇ ಸೋಲು ಕಂಡ ಬೆಂಗಳೂರು ಬುಲ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.