ETV Bharat / sports

ನಾಳೆಯಿಂದ ಪ್ರೊ ಕಬಡ್ಡಿ ಲೀಗ್ ಹರಾಜು: ಯಾರ ಪಾಲಾಗ್ತಾರೆ ಬುಲ್ಸ್​ನ ಪವನ್​ ಶೆರಾವತ್? - Etv bharat kannada

9ನೇ ಆವೃತ್ತಿ ಪ್ರೊ ಕಬಡ್ಡಿಗೋಸ್ಕರ ನಾಳೆ ಮತ್ತು ನಾಡಿದ್ದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

Pro kabaddi auction
Pro kabaddi auction
author img

By

Published : Aug 4, 2022, 7:45 PM IST

ಮುಂಬೈ: ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್​​ಗೋಸ್ಕರ ಆಟಗಾರರ ಹರಾಜು ಪ್ರಕ್ರಿಯೆ ನಾಳೆ ಮತ್ತು ನಾಡಿದ್ದು ನಡೆಯಲಿದ್ದು, ಪ್ರಮುಖ ಆಟಗಾರರ ಮೇಲೆ 12 ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಪ್ರಮುಖವಾಗಿ ಬೆಂಗಳೂರು ಬುಲ್ಸ್ ತಂಡದಿಂದ ರಿಲೀಸ್ ಆಗಿರುವ ಕ್ಯಾಪ್ಟನ್ ಪವನ್​ ಶೆರಾವತ್ ಯಾವ ತಂಡ ಸೇರಿಕೊಳ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಆಗಸ್ಟ್​​ 5 ಮತ್ತು 6ರಂದು ಮುಂಬೈನ ಖಾಸಗಿ ಹೋಟೆಲ್​​ನಲ್ಲಿ ಹರಾಜು ನಡೆಯಲಿದೆ ಎಂದು ಪಿಕೆಎಲ್​​ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ 500ಕ್ಕೂ ಅಧಿಕ ಆಟಗಾರರು​ ಭಾಗಿಯಾಗುವ ಸಾಧ್ಯತೆ ಇದೆ. ಪ್ರತಿ ತಂಡಕ್ಕೆ 24 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಹರಾಜು ಪ್ರಕ್ರಿಯೆಯಲ್ಲಿ ದೇಶೀಯ, ಸಾಗರೋತ್ತರ ಮತ್ತು ಹೊಸ ಯುವ ಆಟಗಾರರು ಎಂಬ ನಾಲ್ಕು ವಿಭಾಗ ಮಾಡಲಾಗಿದೆ. ನಾಳೆ ಸಂಜೆ 6:30ಕ್ಕೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್​​​ 9ನೇ ಆವೃತ್ತಿ.. ಹರಾಜು ಪ್ರಕ್ರಿಯೆಗೆ ದಿನಾಂಕ ಪ್ರಕಟ

ಆಲ್​ರೌಂಡರ್​​, ಡಿಫೆಂಡರ್​, ರೈಡರ್​​ ಎಂಬ A,B,C,D ಯಂತೆ ವಿಭಾಗಿಸಲಾಗಿದೆ. A ವಿಭಾಗಕ್ಕೆ 30 ಲಕ್ಷ ರೂ. B ವಿಭಾಗದಲ್ಲಿ 20 ಲಕ್ಷ ರೂ. C ವಿಭಾಗದಲ್ಲಿ 10 ಲಕ್ಷ ರೂ ಹಾಗೂ D ಕೆಟಗರಿಯಲ್ಲಿ 6 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಪ್ರತಿ ಫ್ರಾಂಚೈಸಿಗಳು ಒಟ್ಟು 4.4 ಕೋಟಿ ರೂ ಹಣ ಹೊಂದಿವೆ.

ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ನ ಯುವ ಪ್ರತಿಭೆ ಭಾಗಿಯಾಗಲಿದ್ದು, ತಮ್ಮ ಪ್ರದರ್ಶನ ಹೊರಹಾಕಲು ಉತ್ತಮ ವೇದಿಕೆಯಾಗಲಿದೆ. ಪಿಕೆಎಲ್​ ಲೀಗ್ ನೀತಿ ಪ್ರಕಾರ ಪ್ರತಿ ಫ್ರಾಂಚೈಸಿ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಬಿಡುಗಡೆಯಾಗಿರುವ ಪ್ರಮುಖ ಆಟಗಾರರು​: ಪವನ್ ಶೆರವಾತ್​(ಬೆಂಗಳೂರು ಬುಲ್ಸ್​), ಪ್ರದೀಪ್ ನರ್ವಾಲ್(ಯುಪಿ ಯೋಧಾ), ಅಭಿಷೇಕ್ ಸಿಂಗ್​(ಯು ಮುಂಬಾ), ವಿಕಾಸ್(ಹರಿಯಾಣ ಸ್ಟೀಲರ್ಸ್) ದೀಪಕ್ ಹೂಡಾ(ಜೈಪುರ್ ಪಿಂಕ್ ಪ್ಯಾಂಥರ್ಸ್‌​) ಸುರ್ಜಿತ್ ಸಿಂಗ್​(ತಮಿಳ್ ತಲೈವಾಸ್)​, ಜೋಗಿಂದರ್ ನರ್ವಾಲ್​​(ದಬಾಂಗ್​ ಡೆಲ್ಲಿ), ರೋಹಿತ್ ಕುಮಾರ್​(ತೆಲುಗು ಟೈಟನ್ಸ್​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.