ಬೆಂಗಳೂರು:ಯು ಮುಂಬಾದ ಬಲಿಷ್ಠ ಡಿಫೆಂಡಿಂಗ್ ಬಲೆಗೆ ಬಿದ್ದ ಬೆಂಗಳೂರು ಬುಲ್ಸ್ 45-34 ಅಂತರದಲ್ಲಿ ಸೋಲು ಕಂಡು ನಿರಾಶೆಯನುಭವಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲಾರ್ಧದ ಆರಂಭದಲ್ಲಿ ಪವನ್ ಶೆರಾವತ್ ಅವರ ಭರ್ಜರಿ ರೈಡಿಂಗ್ ನೆರವಿನಿಂದ 12-11ರಲ್ಲಿ ಮುನ್ನಡೆ ಸಾಧಿಸಿಕೊಂಡಿತ್ತು. ಆದರೆ ರಾಹುಲ್ ಸೆತ್ಪಾಲ್ ಬುಲ್ಸ್ ರೈಡರ್ಗಳನ್ನು ಬೇಟಿಯಾಡಿ ಮುಂಬೈಗೆ ಅಲ್ಪ ಮುನ್ನಡೆ ತಂದುಕೊಟ್ಟರು.
-
War of the Stars they said, well said 💯
— ProKabaddi (@ProKabaddi) January 26, 2022 " class="align-text-top noRightClick twitterSection" data="
Fazel and co. demolish the Bulls' fortress, second time this season 😲#MUMvBLR #VIVOProKabaddi #SuperhitPanga @umumba pic.twitter.com/V4EtCBMsdZ
">War of the Stars they said, well said 💯
— ProKabaddi (@ProKabaddi) January 26, 2022
Fazel and co. demolish the Bulls' fortress, second time this season 😲#MUMvBLR #VIVOProKabaddi #SuperhitPanga @umumba pic.twitter.com/V4EtCBMsdZWar of the Stars they said, well said 💯
— ProKabaddi (@ProKabaddi) January 26, 2022
Fazel and co. demolish the Bulls' fortress, second time this season 😲#MUMvBLR #VIVOProKabaddi #SuperhitPanga @umumba pic.twitter.com/V4EtCBMsdZ
ಆದರೂ ಒಂದು ಹಂತದಲ್ಲಿ 13-17ರ ಹಿನ್ನಡೆಯಲ್ಲಿದ್ದ ಬುಲ್ಸ್ ಮೊದಲಾರ್ಧ ಅಂತ್ಯದ ವೇಳೆಗೆ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಹಿನ್ನಡೆಯ ಅಂತರವನ್ನು 20-22 ಕ್ಕೆ ನಿಯಂತ್ರಿಸಿಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪವನ್ ಶೆರಾವತ್ರನ್ನು ಹೆಚ್ಚು ಸಮಯ ಹೊರಹಾಕುವಲ್ಲಿ ಮುಂಬೈ ಡಿಫೆಂಡರ್ಗಳು ಯಶಸ್ವಿಯಾದರು. ಇದರ ಜೊತೆಗೆ ಬೆಂಗಳೂರು ಡಿಫೆಂಡರ್ಗಳು ಎದುರಾಳಿ ರೈಡರ್ಗಳನ್ನ ಹಿಡಿಯುವ ಯತ್ನದಲ್ಲಿ ಸುಖಾ ಸುಮ್ಮನೆ ಅಂಕಗಳನ್ನು ಬಿಟ್ಟು ತಾವಾಗಿಯೇ ಒತ್ತಡವನ್ನು ಮೈಮೇಲೇಳೆದುಕೊಂಡರು. ಇತ್ತ ಪವನ್ ವೈಫಲ್ಯ, ಡಿಫೆಂಡರ್ಗಳ ಕಳಪೆ ಆಟದಿಂದ ದ್ವಿತೀಯಾರ್ಧದಲ್ಲಿ ಬುಲ್ಸ್ 2 ಬಾರಿ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.
ಅಂಕಗಳ ವಿವರ:
ಮೊದಲಾರ್ಧದಲ್ಲಿ ಎರಡು ತಂಡಗಳು ತಲಾ 13 ರೈಡಿಂಗ್ ಅಂಕ ಪಡೆದರೆ, ಮುಂಬೈ 7 ಟ್ಯಾಕಲ್ ಅಂಕ ಪಡೆದು ಪ್ರಾಬಲ್ಯ ಸಾಧಿಸಿತ್ತು. ಬುಲ್ಸ್ ಡಿಫೆಂಡರ್ಗಳು ಕೇವಲ 3 ಅಂಕ ಮಾತ್ರ ಪಡೆದರು. ದ್ವಿತೀಯಾರ್ಧದಲ್ಲಿ ಮುಂಬೈ ಸಂಪೂರ್ಣ ಪ್ರಾಬಲ್ಯ ಸಾಧಿಸಿ 23 ಅಂಕಪಡೆದರೆ, ಬುಲ್ಸ್ ಕೇವಲ 14 ಅಂಕ ಪಡೆಯಿತು. ಈ ಅವಧಿಯಲ್ಲೂ ಮುಂಬೈ 10 ಟ್ಯಾಕಲ್ ಅಂಕ ಪಡೆದರೆ, ಬುಲ್ಸ್ ಕೇವಲ 4 ಅಂಕ ಮಾತ್ರ ಪಡೆಯಿತು.
ಬೆಂಗಳೂರು ಪರ ಪವನ್ 14, ಭರತ್ 7, ಸೌರಭ್ ನಂಡಲ್ 4 ಅಂಕ ಪಡೆದರು. ಮುಂಬೈ ಪರ ಅಭಿಷೇಕ್ ಸಿಂಗ್ 11, ವಿ. ಅಜಿತ್ ಕುಮಾರ್ 8, ರಾಹುಲ್ ಸತ್ಪಾಲ್ 8, ರಿಂಕು ನರ್ವಾಲ್ 4, ಹರೇಂದರ್ ಕುಮಾರ್ 3, ಫಜಲ್ ಅಟ್ರಾಚಲಿ 3 ಅಂಕ ಪಡೆದು ಗೆಲುವಿನ ರೂವಾರಿಗಳಾದರು.
ಇದನ್ನೂ ಓದಿ:Australian open 2022: ಮೊದಲ 2 ಸೆಟ್ ಸೋತರೂ, ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಮೆಡ್ವೆಡೆವ್