ಪುಣೆ: ಇಲ್ಲಿನ ಬಾಳೇವಾಡಿ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್ ಸೀಸನ್ 9ರ ಭಾನುವಾರದ ಪಂದ್ಯದಲ್ಲಿ ಕೊನೆಯ ಹಂತದ ಆಘಾತದ ನಡುವೆಯೂ ಬೆಂಗಳೂರು ಬುಲ್ಸ್ ತಂಡವು ತಮಿಳು ತಲೈವಾಸ್ ವಿರುದ್ಧ 40-34 ಅಂತರದ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಟೀಂ ಅಂಕಪಟ್ಟಿಯಲ್ಲಿ ಪುಣೇರಿ ಪಲ್ಟಾನ್ ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿತು.
-
Bengaluru hit the bullseye 🎯 in the Southern Derby!
— ProKabaddi (@ProKabaddi) November 13, 2022 " class="align-text-top noRightClick twitterSection" data="
The Bulls win to go top of the #vivoProKabaddi Season 9 standings 👏🏼#CHEvBLR #FantasticPanga pic.twitter.com/4kUNKYXKqE
">Bengaluru hit the bullseye 🎯 in the Southern Derby!
— ProKabaddi (@ProKabaddi) November 13, 2022
The Bulls win to go top of the #vivoProKabaddi Season 9 standings 👏🏼#CHEvBLR #FantasticPanga pic.twitter.com/4kUNKYXKqEBengaluru hit the bullseye 🎯 in the Southern Derby!
— ProKabaddi (@ProKabaddi) November 13, 2022
The Bulls win to go top of the #vivoProKabaddi Season 9 standings 👏🏼#CHEvBLR #FantasticPanga pic.twitter.com/4kUNKYXKqE
ಬುಲ್ಸ್‌ನ ನೀರಜ್ ನರ್ವಾಲ್ ಮತ್ತು ಸೌರಭ್ ನಂದಲ್ ಉತ್ತಮ ಡಿಫೆನ್ಸ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರೈಡರ್ ಭರತ್ (14 ಅಂಕ) ಭರ್ಜರಿ ಪ್ರದರ್ಶನದ ಮೂಲಕ ಬುಲ್ಸ್ಗೆ ಪ್ರಮುಖ ಮೇಲುಗೈ ಒದಗಿಸಿದರು. ಜೊತೆಗೆ ನಿರ್ಣಾಯಕ ಹಂತದ ಅಂತಿಮ ಕ್ಷಣಗಳಲ್ಲಿ ನೀರಜ್ ನರ್ವಾಲ್ ಮತ್ತು ಸೌರಭ್ ನಂದಲ್ ಅವರ ಡಿಫೆಂಡಿಂಗ್ ಎರಡೂ ತಂಡಗಳ ಫಲಿತಾಂಶದಲ್ಲಿ ಭಾರಿ ವ್ಯತ್ಯಾಸ ಉಂಟುಮಾಡಿತು.
ಭರತ್ ಅವರ ಸತತ ಸೂಪರ್ ರೈಡ್‌ಗಳಿಂದ ತಲೈವಾಸ್ ಮೇಲೆ ಸವಾರಿ ಮಾಡಿದ ಬುಲ್ಸ್ ಆರಂಭಿಕ ಐದು ನಿಮಿಷಗಳ ಆಟದಲ್ಲೇ ಮೊದಲ ಆಲೌಟ್ ಶಾಕ್ ನೀಡಿತು. ಈ ಹಂತದಲ್ಲಿ ಬುಲ್ಸ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸುವ ಮುನ್ಸೂಚನೆ ನೀಡಿತ್ತು. ಆದರೆ ತಿರುಗೇಟು ನೀಡಿದ ತಲೈವಾಸ್, ನರೇಂದರ್ ಅವರ ಯಶಸ್ವಿ ರೈಡಿಂಗ್ನಿಂದ ಸಮಬಲದ ಹೋರಾಟ ತೋರಿತು.
ಮೊದಲಾರ್ಧದ ಅಂತಿಮ ಐದು ನಿಮಿಷಗಳಲ್ಲಿ ಬುಲ್ಸ್‌ನ ಮುನ್ನಡೆಗೆ ಟಕ್ಕರ್ ಕೊಟ್ಟ ತಲೈವಾಸ್, 1 ಅಂಕಗಳಿಂದ ಹಿಂದಿಕ್ಕುವ ಮೂಲಕ ವಿರಾಮದ ವೇಳೆಗೆ 19-18ರ ಮುನ್ನಡೆ ಸಾಧಿಸಿತು. ಆದರೆ ಆರಂಭಿಕ ಅಬ್ಬರದ ನಡುವೆಯೂ ತಲೈವಾಸ್ ಕಮ್ಬ್ಯಾಕ್ನಿಂದ ವಿಚಲಿತರಾಗದ ಬುಲ್ಸ್ ಆಟಗಾರರು, ದ್ವಿತೀಯಾರ್ಧದಲ್ಲಿ ಉತ್ತಮ ಆಟ ತೋರಿದರು. ಮೊದಲಾರ್ಧದ ಪುನರಾವರ್ತನೆ ಎಂಬಂತೆ ಮತ್ತೊಮ್ಮೆ ತಲೈವಾಸ್ ತಂಡವನ್ನು ಆಲೌಟ್ ಮಾಡಿದ ಬೆಂಗಳೂರು 28-25ರ ಮುನ್ನಡೆ ಸಾಧಿಸಿತು.
ನೀರಜ್ ಸೂಪರ್ ಟ್ಯಾಕಲ್: ಆದರೆ, ಕೊನೆಯ ಐದು ನಿಮಿಷಗಳ ಆಟವು ಮತ್ತೆ ರೋಚಕತೆ ಹೆಚ್ಚಿಸಿತು. ಮೊದಲಾರ್ಧದಂತೆಯೇ ಮತ್ತೆ ಬುಲ್ಸ್ ತಂಡವನ್ನು ತಲೈವಾಸ್ ಒತ್ತಡಕ್ಕೆ ಸಿಲುಕಿಸಿದರು. ಈ ಹಂತದಲ್ಲಿ ಆಲೌಟ್ ಭೀತಿಯಲ್ಲಿದ್ದ ಬುಲ್ಸ್ಗೆ ನೀರಜ್ ನರ್ವಾಲ್ ಸೂಪರ್ ಟ್ಯಾಕಲ್ ಮೂಲಕ ಮರುಜೀವ ತುಂಬಿದರು. ನೀರಜ್ ಟ್ಯಾಕಲ್ನಿಂದ ಬುಲ್ಸ್ ಮತ್ತೆ ಕಮ್ಬ್ಯಾಕ್ ಮಾಡಿತಲ್ಲದೆ ಕೆಲ ಹೊತ್ತಲ್ಲೇ 6 ಅಂಕಗಳ ಅಂತರದಿಂದ ಗೆಲುವಿನ ಕೇಕೆ ಹಾಕಿತು. ಇದರೊಂದಿಗೆ ಪುಣೇರಿ ಪಲ್ಟಾನ್(44 ಅಂಕ) ತಂಡವನ್ನು ಹಿಂದಿಕ್ಕಿದ ಬುಲ್ಸ್ 46 ಪಾಯಿಂಟ್ಸ್ನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಯು ಮುಂಬಾ ಗೆಲುವು: ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವು ಪಾಟ್ನಾ ಪೈರೇಟ್ಸ್ನ ಸತತ ಐದು ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು. ಪಾಟ್ನಾ ಪೈರೇಟ್ಸ್ಗೆ ಸೋಲುಣಿಸಿದ ಯು ಮುಂಬಾಗೆ ಇದು ಎರಡನೇ ನೇರ ಗೆಲುವಾಗಿದೆ. 36-23 ಅಂಕಗಳ ಅಂತರದ ಜಯ ಸಾಧಿಸಿದ ಮುಂಬಾ(43 ಅಂಕ) ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪುಣೇರಿ ಪಲ್ಟಾನ್ ಎರಡನೇ ಸ್ಥಾನ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್(43 ಅಂಕ) ಮೂರರಲ್ಲಿದೆ.
ಇದನ್ನೂ ಓದಿ: ಇಂಗ್ಲೆಂಡ್ನ ಶ್ಯಾಮ್ ಕರ್ರನ್ ವಿಶೇಷ ದಾಖಲೆ.. ಐಪಿಎಲ್ ಟೂರ್ನಿಯೇ ಇದಕ್ಕೆ ಕಾರಣವಂತೆ!