ಪಂಚಕುಲ: ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಸತತ ಎರಡನೇ ಬಾರಿಗೆ ಪ್ಲೇ ಆಫ್ಗೆ ಲಗ್ಗೆ ಹಾಕುವ ಮೂಲಕ ಮತ್ತೊಂದು ಆವೃತ್ತಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.
ಇಂದು ಹರಿಯಾಣ ಸ್ಟೀಲರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 59-36 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದು, ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದೆ.
ಆರಂಭದಿಂದಲೂ ಹರಿಯಾಣ ತಂಡ ಪ್ರಬಲ ಪೈಪೋಟಿ ನೀಡಿದ್ದರಿಂದ ಉಭಯ ತಂಡ 5-5 ಅಂಕಗಳಿಸಿದ್ದವು. ತದನಂತರದಲ್ಲಿ ಹರಿಯಾಣ ಮುನ್ನಡೆ ಪಡೆದುಕೊಂಡಿತ್ತು. ಇದಾದ ಬಳಿಕ ತಿರುಗೇಟು ನೀಡಿದ ಬುಲ್ಸ್ ಎದುರಾಳಿ ತಂಡವನ್ನು ಆಲೌಟ್ ಮಾಡಿ ಅಂತರವನ್ನು 17-15ಕ್ಕೆ ಹೆಚ್ಚಳ ಮಾಡಿಕೊಂಡಿತ್ತು. ಈ ವೇಳೆ ಅದ್ಭುತ ಪ್ರದರ್ಶನ ನೀಡಿದ ಪವನ್ ಶೆರಾವತ್ ಎದುರಾಳಿ ತಂಡ ಮತ್ತೊಮ್ಮೆ ಆಲೌಟ್ ಆಗುವಂತೆ ನೋಡಿಕೊಂಡರು. ಹೀಗಾಗಿ ತಂಡ 26 ಅಂಕಗಳಿಸಿತ್ತು.
-
Top Scorers:
— Bengaluru Bulls (@BengaluruBulls) October 2, 2019 " class="align-text-top noRightClick twitterSection" data="
Pawan Sehrawat- 39 points
Mahender Singh- 4 points
Saurabh Nandal- 2 points#FullChargeMaadi #Champions #VivoPKL7 #HARvBLR
">Top Scorers:
— Bengaluru Bulls (@BengaluruBulls) October 2, 2019
Pawan Sehrawat- 39 points
Mahender Singh- 4 points
Saurabh Nandal- 2 points#FullChargeMaadi #Champions #VivoPKL7 #HARvBLRTop Scorers:
— Bengaluru Bulls (@BengaluruBulls) October 2, 2019
Pawan Sehrawat- 39 points
Mahender Singh- 4 points
Saurabh Nandal- 2 points#FullChargeMaadi #Champions #VivoPKL7 #HARvBLR
ಪಂದ್ಯದ ದ್ವಿತಿಯಾರ್ಧದಲ್ಲೂ ಹರಿಯಾಣ ಚೇತರಿಕೆ ಕಾಣಲಿಲ್ಲ. ಅದರ ಪೂರ್ಣ ಪ್ರಯೋಜನ ಪಡೆದುಕೊಂಡ ಬುಲ್ಸ್ ತನ್ನ ಆರ್ಭಟ ಮುಂದುವರಿಸಿತು. ಹೀಗಾಗಿ ಎದುರಾಳಿ ತಂಡವನ್ನು ಮೇಲಿಂದ ಮೇಲೆ ಬುಲ್ಸ್ ಆಲೌಟ್ ಬಲೆಗೆ ಸಿಲುಕಿಸಿ ತನ್ನ ಅಂಕ ಏರಿಕೆ ಮಾಡಿಕೊಂಡಿದೆ. ಕೊನೆಯದಾಗಿ ಬುಲ್ಸ್ 59-36 ಅಂತರದಲ್ಲಿ ಗೆಲುವು ಸಾಧಿಸಿತು.
ಪ್ರೋ ಕಬಡ್ಡಿ ಇತಿಹಾಸದಲ್ಲೇ ಪವನ್ ಶೆರಾವತ್ 39 ಅಂಕಗಳಿಕೆ ಮಾಡಿ ಟಾಪ್ ರೈಡರ್ ಎನಿಸಿಕೊಂಡರು. ಇಲ್ಲಿಯವರೆಗಿನ ಲೀಗ್ಗಳಲ್ಲಿ ಇದು ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ಆಗಿದೆ. ಈ ಹಿಂದೆ ಪ್ರದೀಪ್ ನರ್ವಾಲ್ 34 ಅಂಕಗಳಿಕೆ ಮಾಡಿದ ದಾಖಲೆ ಇತ್ತು.