ETV Bharat / sports

ಮಿಂಚಿದ ಚೌದರಿ, ಚಿಲಾರ್​: ಟೈಟನ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ತಮಿಳ್​ ತಲೈವಾಸ್

ತಮಿಳ್​ ತಲೈವಾಸ್​ ತನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್​ ವಿರುದ್ದ 39-26 ರಲ್ಲಿ ಜಯ ಸಾಧಿಸಿದೆ.

ಕಬಡ್ಡಿ
author img

By

Published : Jul 21, 2019, 10:43 PM IST

ಹೈದರಾಬಾದ್​: ರಾಹುಲ್​ ಚೌದರಿ ಹಾಗೂ ಮಂಜೀತ್ ಚಿಲಾರ್​ರ ಅದ್ಭುತ ಪ್ರದರ್ಶನದಿಂದ ತಮಿಳ್​ ತಲೈವಾಸ್​ 39-26 ಅಂತರದಲ್ಲಿ ತೆಲುಗು ಟೈಟನ್ಸ್​ ಭರ್ಜರಿ ಜಯ ಸಾಧಿಸಿದ್ದಾರೆ.

ಕಳೆದ ಬಾರಿ ತೆಲುಗು ಟೈಟಾನ್ಸ್​ ವಿರುದ್ಧ ಆಡಿದ್ದ ರಾಹುಲ್​ ಚೌದರಿ ಈ ಬಾರಿ ಅದೇ ತಂಡದ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿದರು. ಆಲ್​ರೌಂಡರ್​ ಆಟ ಪ್ರದರ್ಶಿಸಿದ ಚೌದರಿ 12 ಅಂಕ ಪಡೆದು ಪಂದ್ಯದ ಗರಿಷ್ಠ ಅಂಕದ ಪಡೆದ ಆಟಗಾರ ಎನಿಸಿದರು. ಇನ್ನು ಹಿರಿಯ ಆಲ್​ರೌಂಡರರರ ಮಂಜೀತ್ ತಮ್ಮ 6 ಡಿಫೆಂಡಿಗ್​ ಯತ್ನಿಸಿ 5 ಬಾರಿ ಯಶಸ್ವಿಯಾಗಿ ಎದುರಾಳಿ ರೈಡರ್​ಗಳನ್ನು ಔಟ್​ ಮಾಡಿದರು.

ಮೊದಲಾರ್ಧದಲ್ಲಿ 20-10 ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ತಲೈವಾಸ್​​ ದ್ವಿತೀಯಾರ್ಧದಲ್ಲೂ ತನ್ನ ಅಬ್ಬರವನ್ನು ಮುಂದುವರಿಸಿತು. ತೆಲುಗು ಟೈಟನ್ಸ್​ ಕೂಡ ದ್ವಿತೀಯಾರ್ದದಲ್ಲಿ 16 ಅಂಕ ಪಡೆಯುವ ಮೂಲಕ ಉತ್ತಮ ಪೈಪೋಟಿ ನಡೆಸಿತರಾದರೂ ಕೊನೆಗೆ 26-39 ರಲ್ಲಿ ತನ್ನ ಎರಡನೇ ಸೋಲುಕಂಡಿತು.

ಡಿಫೆಂಡರ್​ ಮೋಹಿತ್​ ಚಿಲಾರ್​ 4 , ರೈಡರ್​ ಅಜಯ್​ ಟಾಕೂರ್​ 4, ಶಬೀರ್​ ಬಾಪು 3, ವಿಜಯ್​ ಕುಮಾರ್​ 3 ಅಜೀತ್​ 2 ಅಂಕಪಡೆದರು.

​ತೆಲುಗು ಟೈಟಾನ್ಸ್​ ಪರ ರೈಡರ್​ಗಳಾದ ಸಿದ್ದಾರ್ಥ್​ ದೇಸಾಯಿ 6, ರಜನೀಶ್​ ದಲಾಲ್​4, ಫರ್ಹಾದ್​ ಮಿಲಘರ್ದನ್​ 3 ಹಾಗೂ ಡಿಫೆಂಡರ್​ಗಳಾದ ಕಮಲ್​ ಸಿಂಗ್​ 2, ವಿಶಾಲ್​ ಸಿಂಗ್​ 2, ಮೊಹಜೆರ್ಮಿಂಘಾನಿ 2 ಅಂಕ ಪಡೆದು ಉತ್ತಮ ಪೈಪೋಟಿ ನೀಡಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.