ಹೈದರಾಬಾದ್: ಬುಧವಾರ ತೆಲುಗು ಟೈಟನ್ಸ್ ವಿರುದ್ಧ ಕೇವಲ ಒಂದು ಅಂಕದಿಂದ ಗೆಲುವು ಸಾಧಿಸಿದ್ದ ದಬಾಂಗ್ ಡೆಲ್ಲಿ ಇಂದು ನಡೆದ ತಮಿಳ್ ತಲೈವಾಸ್ ವಿರುದ್ಧವೂ ಒಂದು ಅಂಕ ಅಂತರದ ರೋಚಕ ಜಯ ಸಾಧಿಸಿದೆ.
ಮೊದಲಾರ್ಧದಲ್ಲಿ ಆರ್ಭಟಿಸಿದ ತಮಿಳ್ ತಲೈವಾಸ್ ದಬಾಂಗ್ ವಿರುದ್ಧ 18-11ರ ಮುನ್ನಡೆ ಕಾಯ್ದುಕೊಂಡಿತು. ಆದರೆ ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ದಬಾಂಗ್ ಡೆಲ್ಲಿ ಕೊನೆಯ ರೈಡ್ನಲ್ಲಿ ತಲೈವಾಸ್ ತಂಡದ ಮಂಜಿತ್ ಚಿಲ್ಲರ್ ಕೋರ್ಟ್ನ ಕೊನೆಯ ಗೆರೆಯನ್ನು ತುಳಿದರು. ಪರಿಣಾಮ ಎದುರಾಳಿಯನ್ನು ಹಿಡಿದರೂ ಅಂಕ ಸಿಗದೆ ಗೆಲ್ಲುವ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತು.
-
One close win after another - @DabangDelhiKC are on a roll after a brilliant last-gasp comeback against @tamilthalaivas in #DELvCHE tonight!
— ProKabaddi (@ProKabaddi) July 25, 2019 " class="align-text-top noRightClick twitterSection" data="
Did you catch all the #VIVOProKabaddi action on Star Sports & Hotstar? #IsseToughKuchNahi pic.twitter.com/Z8Vi1bgaOZ
">One close win after another - @DabangDelhiKC are on a roll after a brilliant last-gasp comeback against @tamilthalaivas in #DELvCHE tonight!
— ProKabaddi (@ProKabaddi) July 25, 2019
Did you catch all the #VIVOProKabaddi action on Star Sports & Hotstar? #IsseToughKuchNahi pic.twitter.com/Z8Vi1bgaOZOne close win after another - @DabangDelhiKC are on a roll after a brilliant last-gasp comeback against @tamilthalaivas in #DELvCHE tonight!
— ProKabaddi (@ProKabaddi) July 25, 2019
Did you catch all the #VIVOProKabaddi action on Star Sports & Hotstar? #IsseToughKuchNahi pic.twitter.com/Z8Vi1bgaOZ
ದಬಾಂಗ್ ಡೆಲ್ಲಿ ಕೊನೆಯ ರೈಡ್ನಲ್ಲಿ ಎದುರಾಳಿಯಿಂದ ಉಡುಗೊರೆಯ ಒಂದು ಅಂಕದ ನೆರವಿನಿಂದ 30-29ರಲ್ಲಿ ಜಯ ಸಾಧಿಸಿತು. ತಂಡದ ರೈಡರ್ ನವೀನ್ ಕುಮಾರ್ 8 ಅಂಕ, ಆಲ್ರೌಂಡರ್ ಮಿರಾಜ್ ಶೇಖ್ 6 , ಜೋಗಿಂದರ್ ಸಿಂಗ್ ನರ್ವಾಲ್ 4 ವಿಶಾಲ್ ಮನೆ 2 ಅಂಕ ಗಳಿಸಿದರು.
ತಮಿಳ್ ತಲೈವಾಸ್ ಪರ ರಾಹುಲ್ ಚೌದರಿ 7, ಅಜಯ್ ಠಾಕೂರ್ 5 ಅಂಕ ಪಡೆದರೆ ಡಿಫೆಂಡರ್ ಮಂಜೀತ್ ಚಿಲ್ಲರ್ 5, ಮೋಹಿತ್ ಚಿಲ್ಲರ್ 2, ಅಜಿತ್ 2 ಅಂಕ ಪಡೆದು ಉತ್ತಮ ಪೈಪೋಟಿ ನೀಡಿದರು.