ಕೌಲಾಲಂಪುರ (ಮಲೇಷ್ಯಾ): ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಹೆಚ್‌ಎಸ್ ಪ್ರಣಯ್ ಚೀನಾದ ವೆಂಗ್ ಹಾಂಗ್ ಯಾಂಗ್ ಅವರನ್ನು 45 ನಿಮಿಷಗಳ ಸುದೀರ್ಘ ಆಟದಲ್ಲಿ ಸೋಲಿಸಿ, ಆರು ವರ್ಷಗಳ ಕಾಲದ ಪ್ರಶಸ್ತಿ ಬರವನ್ನು ನೀಗಿಸಿದ್ದಾರೆ. 2022ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಚೀನಾದ ವಿಶ್ವದ 34 ನೇ ಶ್ರೇಯಾಂಕಿತ ವೆಂಗ್ ಹಾಂಗ್ ಯಾಂಗ್ ವಿರುದ್ಧ 21-19 13-21 21-18ರಿಂದ ಪ್ರಣಯ್ ಗೆಲುವು ಸಾಧಿಸಿದರು.
ಪ್ರಣಯ್ ಅವರ ಮೊದಲ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಭಾರತಕ್ಕೆ ಈ ವರ್ಷ ಬ್ಯಾಡ್ಮಿಂಟನ್ನ ಸಿಂಗಲ್ಸ್ನಲ್ಲಿ ಸಿಕ್ಕ ಮೊದಲ ಪ್ರಶಸ್ತಿಯೂ ಇದಾಗಿದೆ. ಕಳೆದ ವರ್ಷ ಥಾಮಸ್ ಕಪ್ ಗೆಲುವಿನಲ್ಲಿ ಪ್ರಣಯ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, 2017ರ ಯುಎಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ನಂತರ ವೈಯಕ್ತಿಕ ಪ್ರಶಸ್ತಿಯನ್ನು ಪ್ರಣಯ್ ಗೆದ್ದಿರಲಿಲ್ಲ. ಕಳೆದ ವರ್ಷ ಸ್ವಿಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದಾಗ ಮತ್ತು ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೂಪರ್ 1000ರಲ್ಲಿ ಸೆಮಿಫೈನಲ್ ಹಂತದಲ್ಲಿ ಎಡವಿದ್ದರು. ಇದರಿಂದ ಅವರು ಸುಮಾರು ನಾಲ್ಕು ವರ್ಷ ಪ್ರಶಸ್ತಿ ಬರವನ್ನು ಎದುರಿಸಿದ್ದರು.
-
Ladies & Gentlemen, It's such a joy bringing this news...
— India_AllSports (@India_AllSports) May 28, 2023 " class="align-text-top noRightClick twitterSection" data="
☀️ H.S Prannoy wins his maiden BWF World Tour title (Malaysian Masters)☀️
Prannoy beat WR 34 Weng Hong Yang 21-19, 13-21, 21-18 in Final.
Well done @PRANNOYHSPRI#MalaysiaMasters2023 pic.twitter.com/4YXA7B4oFI
">Ladies & Gentlemen, It's such a joy bringing this news...
— India_AllSports (@India_AllSports) May 28, 2023
☀️ H.S Prannoy wins his maiden BWF World Tour title (Malaysian Masters)☀️
Prannoy beat WR 34 Weng Hong Yang 21-19, 13-21, 21-18 in Final.
Well done @PRANNOYHSPRI#MalaysiaMasters2023 pic.twitter.com/4YXA7B4oFILadies & Gentlemen, It's such a joy bringing this news...
— India_AllSports (@India_AllSports) May 28, 2023
☀️ H.S Prannoy wins his maiden BWF World Tour title (Malaysian Masters)☀️
Prannoy beat WR 34 Weng Hong Yang 21-19, 13-21, 21-18 in Final.
Well done @PRANNOYHSPRI#MalaysiaMasters2023 pic.twitter.com/4YXA7B4oFI
ಪ್ರಣಯ್ 2021ರ ಕೊನೆಯವರೆಗೂ ಗಾಯ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು. ನಂತರ ಕಮ್ ಬ್ಯಾಕ್ ಮಾಡಿದ ಪ್ರಣಯ್ ಭಾರತಕ್ಕಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದರು. ಇಂದು ನಡೆದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಿಯ ಫೈನಲ್‌ನಲ್ಲಿ ಸಕಲ ಪ್ರಯತ್ನಗಳ ಫಲವಾಗಿ ಯಶಸ್ಸು ಸಾಧಿಸಿದ್ದಾರೆ. ಈ ವಾರ ಅವರು ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಿಶ್ವದ ಐದನೇ ಶ್ರೇಯಾಂಕದ ಚೌ ಟಿಯೆನ್ ಚೆನ್, ಆಲ್ ಇಂಗ್ಲೆಂಡ್ ಚಾಂಪಿಯನ್ ಲಿ ಶಿ ಫೆಂಗ್ ಮತ್ತು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಸೋಲಿಸಿದ್ದರು. ಇಂಡೋನೇಷ್ಯಾದ ಕ್ರಿಶ್ಚಿಯನ್ ಆದಿನಾಟಾ ಸೆಮಿಫೈನಲ್‌ನಲ್ಲಿ ಗಾಯಗೊಂಡು ಕಾರಣ ಪ್ರಣಯ್ ಅವರನ್ನು ಮಣಿಸದೇ ಫೈನಲ್‌ಗೆ ಪ್ರವೇಶಿಸಿದರು.
ಫೈನಲ್‌ನಲ್ಲಿ ವೆಂಗ್ ಹಾಂಗ್ ಯಾಂಗ್ ಪ್ರಣಯ್ ಕಠಿಣ ಪೈಪೋಟಿ ನೀಡಿದರು. ಮೊದಲ ಸೆಟ್ನ್ನು ಪ್ರಣಯ್ ಬಿಗಿಯಾದ ಹೊಡೆಯಗಳಿಂದ 21-19 ರ ಅಂತರದಲ್ಲಿ ವಶಪಡಿಸಿಕೊಂಡರು. ಆದರೆ ಎರಡನೇ ಸೆಟ್ನಲ್ಲಿ ಚೀನಾದ ಯಾಂಗ್ ಪುಟಿದೆದ್ದು ಪ್ರಣಯ್ 13 ಅಂಕ ಗಳಿಸುವಷ್ಟರಲ್ಲಿ ಗೆದ್ದುಕೊಂಡಿದ್ದರು. ಇದರಿಂದ ನಿರ್ಣಾಯಕ ಮೂರನೇ ಸೆಟ್ ಆಡಬೇಕಾಯಿತು. ಇದರಲ್ಲಿ ಬಿಗಿ ಹೋರಾಟ ತೋರಿದ್ದು, 21-18ರಿಂದ ಗೆಲುವು ದಾಖಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸೆಮೀಸ್ನಿಂದ ಹೊರ ಬಿದ್ದ ಸಿಂಧು: ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ 14-21, 17-21ರಿಂದ ಸೆಮಿಪೈನಲ್ನಲ್ಲಿ ಸೋಲನುಭವಿಸಿದರು. ಇದರಿಂದ ಮಹಿಳೆಯರ ಸಿಂಗಲ್ಸ್ನ ಪ್ರಶಸ್ತಿ ನಿರೀಕ್ಷೆ ಹುಸಿಯಿತು. ಇಂಡೋನೇಷ್ಯಾದ ಆಟಗಾರ್ತಿ ವಿರುದ್ಧ ಇದುವರೆಗೂ ಸಿಂಧು ಸತತ ಏಳು ಗೆಲುವು ಕಂಡಿದ್ದರು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.
ಇದನ್ನೂ ಓದಿ: ಮಲೇಷ್ಯಾ ಮಾಸ್ಟರ್ಸ್: ಪುರುಷರ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ ಪ್ರಣಯ್, ಸೆಮೀಸ್ನಲ್ಲಿ ಸೋತ ಸಿಂಧು