ನನ್ನಲ್ಲಿ ಇಚ್ಛಾಶಕ್ತಿ ಕುಂದುವವರೆಗೂ ನೂರಕ್ಕೆ ನೂರರಷ್ಟು ಕಾಲ್ಚೆಂಡಿನೊಂದಿಗೆ ಪ್ರಯಾಣ ಮುಂದುವರೆಸುತ್ತೇನೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್ಗೆ ವರ್ಗಾವಣೆಯಾಗಿರುವ ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಹೇಳಿದರು.
ಪೋರ್ಚುಗಲ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ, ವಿಶ್ವದ ದುಬಾರಿ ಆಟಗಾರ ಎಂದೇ ಖ್ಯಾತರಾದ ಕ್ರಿಸ್ಟಿಯಾನೋ ರೊನಾಲ್ಡೊ ಇಂದು ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಫುಟ್ಬಾಲ್ ದಂತಕತೆ ವಿಶ್ವದಾದ್ಯಂತ ಫುಟ್ಬಾಲ್ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳು ಮಹಾಪೂರವನ್ನೇ ಹರಿಸಿದ್ದಾರೆ.
ಓದಿ: UP Polls: ನಾಮಪತ್ರ ಸಲ್ಲಿಕೆಗೆ 'ಕಸರತ್ತು'.. ಓಡೋಡಿ ಬಂದು ಯುಪಿ ಸಚಿವನ ನಾಮಿನೇಷನ್
37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಫುಟ್ಬಾಲ್ ಆಟಗಾರ ರೊನಾಲ್ಡೊ ಫೆಬ್ರವರಿ 5, 1985 ರಂದು ಪೋರ್ಚುಗಲ್ನ ಮಡೈರಾದ ಫಂಚಲ್‌ನಲ್ಲಿ ಜನಿಸಿದರು. ಅವರಿಗೆ 16 ವರ್ಷದವರಾಗಿದ್ದಾಗಲೇ ಮ್ಯಾಂಚೆಸ್ಟರ್ ಯುನೈಟೆಡ್ ಟೀಮ್ 12 ಮಿಲಿಯನ್ ಡಾಲರ್ ತೆತ್ತು ರೊನಾಲ್ಡೊರನ್ನ ಖರೀದಿ ಮಾಡಿತ್ತು. 2003ರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಪೋರ್ಚುಗಲ್ ಪರ ತಮ್ಮ ಮೊದಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನಾಡಿದ್ರು.
2008ರಲ್ಲಿ ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕನಾದ ರೊನಾಲ್ಡೊ ಅವರು 2016 UEFA ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು 2019 UEFA ನ್ಯಾಷನಲ್ ಲೀಗ್ನಲ್ಲಿ ಪೋರ್ಚುಗಲ್, ಕಪ್ ಗೆಲ್ಲುವಲ್ಲಿ ಶ್ರಮವಹಿಸಿದರು. ಪುಟ್ಬಾಲ್ ಮೈದಾನದ ಹೊರತುಪಡಿಸಿ ರೊನಾಲ್ಡೊ ಅವರಿಗೆ ವಿಶ್ವದಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರ ಪೈಕಿ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ದೀಪಿಕಾ ಮತ್ತು ಸ್ಮೃತಿ ಮಂಧಾನ ಸೇರಿದಂತೆ 399 ಮಿಲಿಯನ್ ಜನರು ರೊನಾಲ್ಡೊರನ್ನು ಇನ್ಸ್ಟಾಗ್ರಾಂನಲ್ಲಿ ಅನುಸರಿಸುತ್ತಿದ್ದಾರೆ.
ಓದಿ: ಮುರುಘಾ ಮಠ ಜಾತ್ರೆ: ನಸುಕಿನ ಜಾವ ನಡೆದ ಸಾಂಪ್ರದಾಯಿಕ ರಥೋತ್ಸವ
ಕ್ರಿಸ್ಟಿಯಾನೋ ರೊನಾಲ್ಡೊ ಫುಟ್ಬಾಲ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿರುವ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದುವರೆಗೂ 1,100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ರೊನಾಲ್ಡೊ 803 ಗೋಲುಗಳನ್ನು ಬಾರಿಸಿದ್ದಾರೆ. ಈ ಮೂಲಕ ಫುಟ್ಬಾಲ್ ಇತಿಹಾಸದಲ್ಲೇ ಅತೀ ಹೆಚ್ಚು ಗೋಲ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇದುವರೆಗೂ ಕ್ರಿಸ್ಟಿಯಾನೋ ಅವಿವಾಹಿತರು. ಆದರೆ ತಮ್ಮ ಗೆಳತಿಯರ ಮೂಲಕ 4 ಮಕ್ಕಳನ್ನು ಪಡೆದುಕೊಂಡಿದ್ದು, ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಅವಳಿ ಮಕ್ಕಳು ಜನಿಸಿದ್ರೆ ಅವರು ಆರು ಮಕ್ಕಳ ತಂದೆಯಾಗುತ್ತಾರೆ. ಪ್ರಸ್ತುತ ಸ್ಪೇನ್ ಮೂಲದ ಜಾರ್ಜಿಯಾ ಜೊತೆ ಡೇಟಿಂಗ್ ನಡೆಸುತ್ತಿರುವ ರೊನಾಲ್ಡೊ, ಕಳೆದ ವಾರವಷ್ಟೇ 50 ಲಕ್ಷಕ್ಕೂ ಅಧಿಕ ಹಣ ಖರ್ಚುಮಾಡಿ ಗೆಳತಿಯ ಹುಟ್ಟುಹಬ್ಬ ಆಚರಿಸಿದ್ದರು.