ETV Bharat / sports

ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಸಪೂರ್ಣ ಬೆಂಬಲ ನೀಡಲು ಪ್ರಧಾನಿ ಮೋದಿ ಸೂಚನೆ - ಕ್ರೀಡಾ ಸಚಿವ ಕಿರಣ್ ರಿಜಿಜು

ನಮ್ಮ ಕ್ರೀಡಾಪಟುಗಳು ಸಂತೋಷವಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಾಗುತ್ತಿದ್ದಾರೆ. ಸಾಂಕ್ರಾಮಿಕ ಹೊರತಾಗಿಯೂ ಭಾರತಕ್ಕೆ ಗೌರವ ತಂದುಕೊಡುವ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರವು ಎಲ್ಲವನ್ನು ಮಾಡುತ್ತಿದೆ..

ಒಲಿಂಪಿಕ್ಸ್ 2021
ನರೇಂದ್ರ ಮೋದಿ
author img

By

Published : May 22, 2021, 8:19 PM IST

ನವದೆಹಲಿ : ಜುಲೈನಲ್ಲಿ ಜಪಾನ್​ನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಅಗತ್ಯವಾದ ಎಲ್ಲಾ ರೀತಿಯ ಬೆಂಬಲ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಶನಿವಾರ ತಿಳಿಸಿದ್ದಾರೆ.

2020ರಲ್ಲಿ ಕೋವಿಡ್​ನಿಂದ ಮುಂದೂಡಲ್ಪಟ್ಟ ಟೋಕಿಯೋ ಗೇಮ್ಸ್​ ಜುಲೈ 23ರಿಂದ ಆಗಸ್ಟ್​ 8ರವರೆಗೆ ನಡೆಯಲಿದೆ. ಈ ಮಹಾ ಕ್ರೀಡಾಕೂಟಕ್ಕೆ ಸುಮಾರು 148 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ.

  • Our athletes are happy and getting ready for Tokyo Olympics. Despite pandemic Govt is doing everything possible to support our athletes to make India proud. Hon'ble PM @narendramodi ji has given clear direction to provide full support to our elite as well as junior athletes. pic.twitter.com/T2DlBSdePo

    — Kiren Rijiju (@KirenRijiju) May 22, 2021 " class="align-text-top noRightClick twitterSection" data=" ">

"ನಮ್ಮ ಕ್ರೀಡಾಪಟುಗಳು ಸಂತೋಷವಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಾಗುತ್ತಿದ್ದಾರೆ. ಸಾಂಕ್ರಾಮಿಕ ಹೊರತಾಗಿಯೂ ಭಾರತಕ್ಕೆ ಗೌರವ ತಂದುಕೊಡುವ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಲು ಸರ್ಕಾರವು ಎಲ್ಲವನ್ನು ಮಾಡುತ್ತಿದೆ.

ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ಕಿರಿಯ ಮತ್ತು ಗಣ್ಯ ಅಥ್ಲೀಟ್​ಗಳಿಗೆ ಸಂಪೂರ್ಣ ಬೆಂಬಲ ನೀಡಲು ಸ್ಪಷ್ಟ ನಿರ್ದೇಶನ ನೀಡಿದ್ದಾರೆ " ರಿಜಿಜು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಟ್ವೀಟ್​ ಜೊತೆಗೆ ಭಾರತ ತಂಡದ ಅಗ್ರಮಾನ್ಯ ಶಟ್ಲರ್​ ಪಿವಿ ಸಿಂಧು, ಚಾಂಪಿಯನ್​ ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಇದೇ ಮೊದಲ ಬಾರಿಗೆ ಕತ್ತಿವರಸೆಯಲ್ಲಿ ಭಾರತಕದ ಪರ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುತ್ತಿರುವ ಭವಾನಿ ದೇವಿ ಅವರು ಟಾಪ್​ ಒಲಿಂಪಿಕ್ಸ್​ ಪೋಟಿಯಮ್ ಸ್ಕೀಮ್​ ಮತ್ತು ಸ್ಪೋರ್ಟ್ಸ್​ ಆಥಾರಿಟಿ ಆಫ್​ ಇಂಡಿಯಾದ ಸಂಪೂರ್ಣ ಬೆಂಬಲಕ್ಕೆ ಧನ್ಯವಾದ ತಿಳಿಸಿರುವು ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಇದನ್ನು ಓದಿ: ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ನನ್ನ ಪಾಲಿನ ವಿಶ್ವಕಪ್ : ಉಮೇಶ್ ಯಾದವ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.