ETV Bharat / sports

PKL 8ನಲ್ಲಿ ಇಂದು ಕೊನೆಯ 3 ಪಂದ್ಯ : ಬುಲ್ಸ್​ ಪ್ಲೇ ಆಫ್ ತಲುಪಬೇಕಾದರೆ ಈ 3 ತಂಡಗಳಲ್ಲಿ ಒಂದು ಸೋಲಲೇಬೇಕು! - ಪಿಕೆಎಲ್ ಪ್ಲೇ ಆಫ್​ ನಿರ್ಧಾರ

ಬೆಂಗಳೂರು ಬುಲ್ಸ್​ 22 ಪಂದ್ಯಗಳಿಂದ 66 ಅಂಕ ಪಡೆದಿದ್ದು, ಇಂದು ನಡೆಯುವ ಮೂರು ಪಂದ್ಯಗಳ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಶನಿವಾರದ ತ್ರಿಬಲ್ ಪಂಗಾದಲ್ಲಿ ಪ್ಲೇ ಆಫ್​ ರೇಸ್​ನಲ್ಲಿರುವ ಹರಿಯಾಣ, ಜೈಪುರ್ ಮತ್ತು ಗುಜರಾತ್​ ತಂಡಗಳು ತಮ್ಮ ಕೊನೆಯ ಪಂದ್ಯವನ್ನಾಡಲಿದ್ದು, ಈ ಮೂರರಲ್ಲಿ ಯಾವುದೇ ಒಂದು ಸೋತರೆ ಅಥವಾ ಟೈ ಮಾಡಿಕೊಂಡರೆ ಬುಲ್ಸ್ ಪ್ಲೇ ಆಫ್​ ಪ್ರವೇಶಿಸಲಿದೆ..

PKL 8  Playoff Qualification
PKL 8 Playoff Qualification
author img

By

Published : Feb 19, 2022, 3:19 PM IST

ಬೆಂಗಳೂರು : ಪ್ರೊ ಕಬಡ್ಡಿ ಲೀಗ್​ನ ಕೊನೆಯ ಮೂರು ಲೀಗ್ ಪಂದ್ಯಗಳು ಶನಿವಾರ ನಡೆಯಲಿವೆ. ಬೆಂಗಳೂರು ಬುಲ್ಸ್​ ಸೇರಿದಂತೆ ಒಟ್ಟು 5 ತಂಡಗಳ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಈಗಾಗಲೇ ಪಾಟ್ನಾ ಪೈರೇಟ್ಸ್​, ದಬಾಂಗ್ ಡೆಲ್ಲಿ ಮತ್ತು ಯುಪಿ ಯೋಧಾ ತಂಡಗಳು ಪ್ಲೇ ಆಫ್​ಗೆ ಪ್ರವೇಶಿಸಿವೆ. ಪಾಟ್ನಾ ಮತ್ತು ಡೆಲ್ಲಿ ಅಗ್ರ 2 ಸ್ಥಾನ ಖಚಿತಪಡಿಸಿಕೊಂಡಿರುವುದರಿಂದ ನೇರ ಸೆಮಿಫೈನಲ್​ ಪ್ರವೇಶಿಸಿವೆ. ಇನ್ನು ಇಂದು ನಡೆಯುವ ಕೊನೆಯ 3 ಪಂದ್ಯಗಳು ನಡೆಯಲಿವೆ.

ಇದರಲ್ಲಿ ಬೆಂಗಳೂರು ಬುಲ್ಸ್​, ಜೈಪುರ ಪಿಂಕ್​​ ಪ್ಯಾಂಥರ್ಸ್​, ಪುಣೇರಿ ಪಲ್ಟನ್ಸ್​, ಹರಿಯಾಣ ಸ್ಟೀಲರ್ಸ್​ ಮತ್ತು ಗುಜರಾತ್ ಜೈಂಟ್ಸ್​ ತಂಡಗಳು ಕೊನೆಯ 3 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ.

ಬೆಂಗಳೂರು ಬುಲ್ಸ್​ 22 ಪಂದ್ಯಗಳಿಂದ 66 ಅಂಕ ಪಡೆದಿದ್ದು, ಇಂದು ನಡೆಯುವ ಮೂರು ಪಂದ್ಯಗಳ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಶನಿವಾರದ ತ್ರಿಬಲ್ ಪಂಗಾದಲ್ಲಿ ಮೊದಲ ಪಂದ್ಯದಲ್ಲಿ ಜೈಪುರ್ vs ಪುಣೇರಿ ಪಲ್ಟನ್ಸ್​ ಮುಖಾಮುಖಿಯಾಗಲಿದ್ದುವೆ. ಈ ಪಂದ್ಯದಲ್ಲಿ ಪುಣೆ ಗೆದ್ದರೆ ಬುಲ್ಸ್​ ಪ್ಲೇ ಆಫ್​ ಪ್ರವೇಶಿಸಲಿದ್ದು, ಆ 2 ತಂಡಗಳು ಟೂರ್ನಿಯಿಂದ ಹೊರ ಬೀಳಲಿದೆ.

ಒಂದು ವೇಳೆ ಜೈಪುರ ಗೆದ್ದರೆ ಪ್ಲೇ ಆಫ್​ ಪ್ರವೇಶಿಸಲಿದೆ. ಯು ಮುಂಬಾ ವಿರುದ್ಧ 2ನೇ ಪಂದ್ಯವನ್ನಾಡುವ ಗುಜರಾತ್ ಜೈಂಟ್ಸ್​ ಈ ಪಂದ್ಯದಲ್ಲಿ ಗೆದ್ದರೆ 67 ಅಂಕಗಳಾಗಲಿದ್ದು, ಪ್ಲೇ ಆಫ್​ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ ಪ್ಲೇ ಆಫ್​ ರೇಸ್​ನಿಂದ ಹೊರ ಬೀಳಲಿದ್ದು, ಬುಲ್ಸ್​ ನಾಕೌಟ್​ ಪ್ರವೇಶಿಸಲಿದೆ.

ಕೊನೆಯ ಪಂದ್ಯ ಹರಿಯಾಣ ಮತ್ತು ಪಾಟ್ನಾ ಪೈರೇಟ್ಸ್ ನಡುವೆ ನಡೆಯಲಿದ್ದು, ಈ ಪಂದ್ಯದಲ್ಲಿ ಹರಿಯಾಣ ಗೆದ್ದರೆ 68 ಅಂಗಳವಾಗಲಿದ್ದು, ಪ್ಲೇ ಆಫ್​ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ ಬುಲ್ಸ್​ ಸುಲಭವಾಗಿ 5 ಅಥವಾ 6ನೇ ಸ್ಥಾನ ಪಡೆಯಲಿದೆ.

ಒಂದು ವೇಳೆ ಇಂದು ಹರಿಯಾಣ, ಜೈಪುರ್ ಮತ್ತು ಗುಜರಾತ್​ ಗೆದ್ದದ್ದೇ ಆದರೆ ಬೆಂಗಳೂರು ಬುಲ್ಸ್ 7ನೇ ಸ್ಥಾನಕ್ಕೆ ಕುಸಿಯಲಿದ್ದು, ಪ್ಲೇ ಆಫ್​ ಕನಸು ನುಚ್ಚುನೂರಾಗಲಿದೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿ, ರಿಷಭ್​ ಪಂತ್​ಗೆ 10 ದಿನಗಳ ವಿಶ್ರಾಂತಿ.. ಶ್ರೀಲಂಕಾ ವಿರುದ್ಧದ ಟೆಸ್ಟ್​ಗೆ ವಾಪಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.