ಬೆಂಗಳೂರು: ತೆಲುಗು ಟೈಟನ್ಸ್ ಕೊನೆಯ ಕ್ಷಣದಲ್ಲಿ ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ 39-39ರಲ್ಲಿ ರೋಚಕ ಟೈ ಸಾಧಿಸಿದೆ.
ವಿಕಾಶ್ ಕಂಡೋಲಾ ಅವರ ಸೂಪರ್ 10 ನೆರವಿಂದ ಹರಿಯಾಣ ಪಂದ್ಯದ ಆರಂಭದಲ್ಲೇ ಮುನ್ನಡೆ ಪಡೆದುಕೊಂಡಿತ್ತು. ಆದರೆ ಕೊನೆಯ ರೈಡ್ನಲ್ಲಿ ಕೇವಲ ಖಾಲಿ ರೈಡ್ ಮಾಡಲು ವಿಫಲರಾಗಿ ಅವರು ಮಾಡಿದ ತಪ್ಪಿನಿಂದಲಾಗಿಯೇ ಗೆಲ್ಲಬೇಕಿದ್ದ ಪಂದ್ಯವನ್ನು ಕಳೆದುಕೊಳ್ಳುವಂತಾಯಿತು. ಟೈಟನ್ಸ್ ತಂಡದ ಡಿಫೆಂಡರ್ ಸಂದೀಪ್ ಕಂಡೋಲ ಅವರು ವಿಕಾಶ್ ಅವರನ್ನು ಕೊನೆ ಸೆಕೆಂಡ್ಗಳಲ್ಲಿ ಯಶಸ್ವಿಯಾಗಿ ಹಿಡಿಯುವ ಮೂಲಕ ಸೋಲು ತಪ್ಪಿಸಿದರು.
-
There's no separating the might of Steel and the strength Titan-ium tonight! 🤯
— ProKabaddi (@ProKabaddi) January 25, 2022 " class="align-text-top noRightClick twitterSection" data="
WHAT.A.MATCH#SuperhitPanga #HSvTT #VIVOProKabaddi @HaryanaSteelers @Telugu_Titans pic.twitter.com/f150fwuSaf
">There's no separating the might of Steel and the strength Titan-ium tonight! 🤯
— ProKabaddi (@ProKabaddi) January 25, 2022
WHAT.A.MATCH#SuperhitPanga #HSvTT #VIVOProKabaddi @HaryanaSteelers @Telugu_Titans pic.twitter.com/f150fwuSafThere's no separating the might of Steel and the strength Titan-ium tonight! 🤯
— ProKabaddi (@ProKabaddi) January 25, 2022
WHAT.A.MATCH#SuperhitPanga #HSvTT #VIVOProKabaddi @HaryanaSteelers @Telugu_Titans pic.twitter.com/f150fwuSaf
ಪಂದ್ಯಾರಂಭದಲ್ಲಿ ಹರಿಯಾಣ ತ್ರಿವಳಿ ರೈಡರ್ಗಳಾದ ವಿಕಾಶ್, ರೋಹಿತ್ ಗುಲಿಯಾ ಮತ್ತು ವಿನಯ್ ಟೈಟನ್ಸ್ ಮೇಲೆ ಸವಾರಿ ಮಾಡಿದರು. ಟೈಟನ್ಸ್ ತಮ್ಮ ಸ್ಟಾರ್ ರೈಡರ್ ರಜನೀಶ್ ಸೇವೆ ಕಳೆದುಕೊಂಡಿದ್ದು ಒಂದು ಹಿನ್ನಡೆಯಾದರೆ, ಎದುರಾಳಿ ಅನುಭವಿ ಸುರೇಂದರ್ ನಾಡ ಅವರ ಡಿಫೆಂಡಿಗ್ಗೆ ತಬ್ಬಿಬ್ಬಾಗಿ ಕೇವಲ 10ನೇ ನಿಮಿಷಗಳಲ್ಲಿ ಆಲೌಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿತು.
ಆದರೆ 10 ನಿಮಿಷದಲ್ಲಿ 8 ಅಂಕಗಳ ಹಿನ್ನಡೆ ಅನುಭವಿಸಿದ್ದ ಟೈಟನ್ಸ್ ಮೊದಲಾರ್ಧದ ಅಂತ್ಯಕ್ಕೆ ಕೇವಲ ಒಂದು ನಿಮಿಷವಿರುವಾಗ ಸ್ಟೀಲರ್ಸ್ ತಂಡವನ್ನು ಆಲೌಟ್ ಮಾಡಿ ಹಿನ್ನಡೆಯ ಅಂತರನ್ನು ಒಂದು ಅಂಕಕ್ಕೆ ತಂದು ನಿಲ್ಲಿಸಿದರು. ಆದರ್ಶ್ ಮತ್ತು ಡಿಫೆಂಡರ್ ಸಂದೀಪ್ ಇದರಲ್ಲಿ ಪ್ರಮುಖ ಪಾತ್ರವಹಿಸಿದರು.
ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು. ಆದರೂ ಕೊನೆಯ ನಿಮಿಷಗಳಲ್ಲಿ ಲೀಡ್ ಪಡೆದುಕೊಂಡರೂ ವಿಕಾಶ್ ಅವರ ಕೊನೆಯ ಕ್ಷಣದ ತಪ್ಪು ಹರಿಯಾಣದ ಗೆಲುವನ್ನು ಕಸಿದುಕೊಂಡಿತು.
ಹರಿಯಾಣ ಸ್ಟೀಲರ್ಸ್ ವಿಕಾಶ್ ಕಂಡೋಲ 10, ರೋಹಿತ್ ಗುಲಿಯಾ 8, ವಿನಯ್ 8, ಡಿಫೆಂಡರ್ಗಳಾದ ಜೈದೀಪ್ 4, ಮೋಹಿತ್ 3 ಅಂಕ ಪಡೆದರು. ಟೈಟನ್ಸ್ ಪರ ಅಂಕಿತ್ ಬೆನಿವಾಲ್ 10, ರೋಹಿತ್ ಕುಮಾರ್ 8, ಆದರ್ಶ್ 6, ಸಂದೀಪ್ ಕಂಡೋಲ 6 ಟ್ಯಾಕಲ್ ಅಂಕ ಪಡೆದುಕೊಂಡರು.
ಇದನ್ನೂ ಓದಿ:ದೇವೇಂದ್ರ ಜಝಾರಿಯಾಗೆ ಪದ್ಮಭೂಷಣ.. ನೀರಜ್ ಚೋಪ್ರಾ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಗರಿ