ETV Bharat / sports

ಪುಣೆ ವಿರುದ್ಧ ವಾರಿಯರ್ಸ್​ಗೆ ಭರ್ಜರಿ ಜಯ: ತಮಿಳ್​ ತಲೈವಾಸ್​ಗೆ ಮತ್ತೊಂದು ರೋಚಕ ಸೋಲು

ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್​ ತಲೈವಾಸ್​ ಉತ್ತಮ ಪ್ರದರ್ಶನದ ಹೊರತಾಗಿಯೂ ಪೈರೇಟ್ಸ್​ ವಿರುದ್ಧ 24-23ರಿಂದ ಸೋಲನುಭವಿಸಿದೆ.

PKL 2019 news
author img

By

Published : Jul 30, 2019, 11:54 AM IST

ಮುಂಬೈ: ತಮಿಳ್​ ತಲೈವಾಸ್​ ತಂಡ ಮತ್ತೊಂದು ರೋಚಕ ಹಣಾಹಣಿಯಲ್ಲಿ ಪಾಟ್ನಾ ಪೈರೇಟ್ಸ್​ ವಿರುದ್ಧ ಒಂದು ಅಂಕದಿಂದ ಸೋಲನುಭವಿಸಿ ನಿರಾಸೆಯನುಭವಿಸಿದರೆ, ಪುಣೇರಿ ಪಲ್ಟನ್​ ವಿರುದ್ಧ ಬೆಂಗಾಲ್​ ವಾರಿಯರ್ಸ್​ 43-23 ರ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್​ ತಲೈವಾಸ್​ ಉತ್ತಮ ಪ್ರದರ್ಶನದ ಹೊರತಾಗಿಯೂ ಕೇವಲ ಒಂದೇ ಒಂದು ಅಂಕದ ಅಂತರದಿಂದ ಪೈರೇಟ್ಸ್​ ವಿರುದ್ಧ 24-23ರಿಂದ ಸೋಲನುಭವಿಸಿದೆ.

ಪಾಟ್ನಾ ಪೈರೇಟ್ಸ್​ ಪರ ಡಿಫೆಂಡರ್​ ಜೈದೀಪ್​ 7, ರೈಡರ್​ ಮೋನು ಗೋಯಟ್​ 5 ಪಾಯಿಂಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಲೈವಾಸ್​ ಪರ ರಾಹುಲ್​ ಚೌದರಿ 5 ರೈಡಿಂಗ್​ ಪಾಯಿಂಟ್​, ಅಜಯ್​ ಠಾಕೂರ್​ 3, ಮಂಜಿತ್​ ಚಿಲ್ಲರ್​ 4 ಟ್ಯಾಕಲ್​ ಪಾಯಿಂಟ್​ ಪಡೆದು ಉತ್ತಮ ಪೈಪೋಟಿ ನಡೆಸಿದರು.

ಸೋಮವಾರ ನಡೆದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ತಂಡ ಪುಣೇರಿ ಪಲ್ಟಾನ್ಸ್​ ತಂಡವನ್ನು 43-23ರಿಂದ ಸೋಲಿಸಿತು. ವಾರಿಯರ್ಸ್​ ತಂಡದ ರೈಡರ್​ಗಳಾದ ಮಣಿಂದರ್​ ಸಿಂಗ್​ 14, ಇಸ್ಮಾಯಿಲ್​ ನಬೀಬಕ್ಷ್​ 8​ ಅಂಕ ಗಳಿಸಿದರೆ, ಡಿಫೆಂಡರ್​ಗಳಾದ​ ರಿಂಕು ನರ್ವಾಲ್​ 5, ವಿರಾಜ್​ ವಿಷ್ಣು 3, ಬಲ್ದೇವ್​ ಸಿಂಗ್​ 3 ಅಂಕ ಪಡೆದು ಮಿಂಚಿದರು.

ಪುಣೆ ಪರ ರೈಡರ್​ ಪಂಕಜ್​ 6, ಸುಶಾಂತ್​ 3, ಮಂಜೀತ್​ 3, ಅಮಿತ್​ ಕುಮಾರ್​ 3, ಗಿರೀಶ್​ ಎರ್ನಕ್​ 3 ಅಂಕ ಪಡೆದರೂ ಬೆಂಗಾಲ್ ವಾರಿಯರ್ಸ್​​ ಆರ್ಭಟದ ಎದುರು ನಿಲ್ಲಲಾರದೆ ಹೀನಾಯ ಸೋಲು ಕಂಡರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.