ETV Bharat / sports

ಪವನ್​ ಸೂಪರ್​ 10.. ಯು ಮುಂಬಾಗೆ ಗುದ್ದಿದ ಬೆಂಗಳೂರು ಬುಲ್ಸ್​.. - ಯು ಮುಂಬಾಗೆ ಸೋಲುಣಿಸಿದ ಬೆಂಗಳೂರು ಬುಲ್ಸ್​

7ನೇ ಆವೃತ್ತಿಯಲ್ಲಿ ತನ್ನ 3ನೇಪಂದ್ಯದಲ್ಲಿ ಬೆಂಗಳೂರು ಬುಲ್ಸ್​ , ಯು ಮುಂಬಾ ತಂಡವನ್ನು 30-25ರ ಅಂತರದಲ್ಲಿ ಮಣಿಸಿದೆ.

PKL 2019
author img

By

Published : Jul 29, 2019, 7:59 AM IST

ಮುಂಬೈ: ಪ್ರೋ ಕಬಡ್ಡಿ ಲೀಗ್​ 7ನೇ ಆವೃತ್ತಿಯ 15ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ 30-25ರಲ್ಲಿ ಬಲಿಷ್ಠ ಯು ಮುಂಬಾ ತಂಡವನ್ನು ಮಣಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ಪವನ್​ ಶೆರಾವತ್ ಅವರ ಅದ್ಭುತ ರೈಡಿಂಗ್ ನೆರವಿನಿಂದ ​30-25ರ ಅಂತರದಿಂದ ಗೆಲುವು ಸಾಧಿಸಿ ಲೀಗ್​ನಲ್ಲಿ ತನ್ನ ಎರಡನೇ ಜಯ ಸಾಧಿಸಿತು. ಪವನ್​ 11 ಅಂಕ ಪಡೆದು ಮಿಂಚಿದರು.

ಮೊದಲಾರ್ಧದಲ್ಲಿ ಎರಡೂ ತಂಡಗಳಿಂದಲೂ ಉತ್ತಮ ಪೈಪೋಟಿ ಕಂಡರೂ, ಬೆಂಗಳೂರು ಬುಲ್ಸ್​ 13-11ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ 37ನೇ ನಿಮಿಷದಲ್ಲಿ ಪವನ್​ ರೈಡಿಂಗ್​ ಹೋಗುವ ಮುನ್ನ ಮುಂಬೈ 23-22ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ಪವನ್​ ಚಾಣಾಕ್ಷ ರೈಡಿಂಗ್​ನಿಂದ ಬುಲ್ಸ್​ ಮುಂಬೈ ತಂಡವನ್ನು ಆಲ್​ಔಟ್​ ಮಾಡುವ ಮೂಲಕ ಮುನ್ನಡೆ ಸಾಧಿಸಿದ್ದಲ್ಲದೆ, ಕೊನೆಯವರೆಗೂ ಪ್ರದರ್ಶನ ಮಟ್ಟವನ್ನು ಉತ್ತಮಪಡಿಸಿಕೊಂಡು ಗೆಲುವಿನ ನಗೆ ಬೀರಿತು.

ಬೆಂಗಳೂರು ಬುಲ್ಸ್​ ಪರ ಪವನ್​ 11,ಮಹೇಂದ್ರ ಸಿಂಗ್​ 4, ಸೌರಭ್​ ನಂದಲ್​ 2, ಮೋಹಿತ್​ ಶೆರಾವತ್​ 3 ಅಂಕ ಪಡೆದರು. ಅರ್ಜುನ್​ ದೆಶ್ವಾಲ್​ 6 ಅಂಕ, ಅಭಿಶೇಕ್​ ಸಿಂಗ್​ 5, ರೋಹಿತ್​ ಬಲಿಯಾನ್​ 3, ಫಜಲ್​ ಅಟ್ರಾಚಲಿ 3 ಹಾಗೂ ಸುರಿಂದರ್​ ಸಿಂಗ್​ 2 ಅಂಕ ಪಡೆದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.