ಪಾಟ್ನಾ: ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ಅವರ ಭರ್ಜರಿ ರೈಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ಗೆಲುವಿನ ಓಟ ಮುಂದುವರಿಸಿದೆ.
ತೆಲುಗು ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು 47-26 ಅಂಕಗಳ ಅಂತರದಿಂದ ಜಯಸಾಧಿಸಿತು. ಎಂದಿನಂತೆ ಭರ್ಜರಿ ರೈಡಿಂಗ್ ನಡೆಸಿದ ಪವನ್ 8 ರೈಡಿಂಗ್ , 3 ಟ್ಯಾಕಲ್ ಹಾಗೂ 6 ಬೋನಸ್ ಸೇರಿದಂತೆ 17 ಅಂಕ ಪಡೆದರು. ರೋಹಿತ್ ಕುಮಾರ್ 8 ಅಂಕ ಪಡೆದು ಉತ್ತಮ ಸಾಥ್ ನೀಡಿದರು. ಡಿಫೆಂಡರ್ ಮಣಿಂದರ್ ಸಿಂಗ್ 7 ಅಂಕ ಪಡೆದರೆ, ವಿಜಯ್ ಕುಮಾರ್ 3 ಅಂಕ ಗಳಿಸಿದರು.
-
🕺 - @BengaluruBulls after winning their 3rd consecutive match
— ProKabaddi (@ProKabaddi) August 8, 2019 " class="align-text-top noRightClick twitterSection" data="
🤕 - @Telugu_Titans, still searching for their 1st win of the season
Keep watching the Panga, LIVE on Star Sports & Hotstar. #IsseToughKuchNahi pic.twitter.com/G969x44jXZ
">🕺 - @BengaluruBulls after winning their 3rd consecutive match
— ProKabaddi (@ProKabaddi) August 8, 2019
🤕 - @Telugu_Titans, still searching for their 1st win of the season
Keep watching the Panga, LIVE on Star Sports & Hotstar. #IsseToughKuchNahi pic.twitter.com/G969x44jXZ🕺 - @BengaluruBulls after winning their 3rd consecutive match
— ProKabaddi (@ProKabaddi) August 8, 2019
🤕 - @Telugu_Titans, still searching for their 1st win of the season
Keep watching the Panga, LIVE on Star Sports & Hotstar. #IsseToughKuchNahi pic.twitter.com/G969x44jXZ
ತೆಲುಗು ಟೈಟನ್ಸ್ ಪರ ಸಿದ್ದಾರ್ಥ್ ದೇಸಾಯಿ 11, ವಿಶಾಲ್ ಭಾರಧ್ವಾಜ್ 6 ಅರ್ಮಾನ್ 4 ಅಮಿತ್ ಕುಮಾರ್ 2 ಅಂಕ ಪಡೆದರು.
ಈ ಗೆಲುವಿನೊಂದಿಗೆ 5 ಪಂದ್ಯಗಳಲ್ಲಿ 4 ಗೆಲುವು ಪಡೆದ ಬುಲ್ಸ್ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.