ಬೆಂಗಳೂರು: ಪ್ರೊ ಕಬಡ್ಡಿ ಲೀಗ್ನಲ್ಲಿ ಅದ್ಭುತ ಆಟ ತೋರಿದರೂ ಸೆಮಿಫೈನಲ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರೂ ಬೆಂಗಳೂರು ಬುಲ್ಸ್ ತಂಡದ ರೈಡರ್ ಟೂರ್ನಿಯಲ್ಲಿ ಶ್ರೇಷ್ಠ ರೈಡರ್ ಪಟ್ಟಗಿಟ್ಟಿಸಿಕೊಂಡಿದ್ದಾರೆ.
ಟೂರ್ನಿಯಲ್ಲಿ ಬುಲ್ಸ್ ಪರ ಏಕಾಂಗಿ ಹೋರಾಟ ನಡೆಸಿದ ಪವನ್ ಶೇರಾವತ್ 24 ಪಂದ್ಯಗಳಲ್ಲಿ ಒಟ್ಟು 360 ಅಂಕಗಳಿಸಿದ್ದಾರೆ. ಇದರಲ್ಲಿ 346 ರೈಡಿಂಗ್ ಅಂಕ ಸೇರಿದೆ. ಈ ಮೂಲಕ ಟೂರ್ನಿಯ ಶ್ರೇಷ್ಠ ರೈಡರ್ ಎನಿಸಿಕೊಂಡಿದ್ದಾರೆ. ಹರಿಯಾಣ ಸ್ಟೀಲರ್ಸ್ ವಿರುದ್ಧ 39 ಅಂಕಗಳಿಸಿ ದಾಖಲೆ ನಿರ್ಮಿಸಿದ್ದರು.
ಪವನ್ ಕುಮಾರ್ ಶೆರಾವತ್ ಕಳೆದ ಬಾರಿಯೂ ಟೂರ್ನಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. ಈ ಬಾರಿ ಟೂರ್ನಿಶ್ರೇಷ್ಠ ಅವಾರ್ಡ್ ದಬಾಂಗ್ ಡೆಲ್ಲಿ ರೈಡರ್ ನವೀನ್ ಕುಮಾರ್ ಪಾಲಾಯಿತು.
ಪ್ರೊ ಕಬಡ್ಡಿ ಲೀಗ್ ಅವಾರ್ಡ್ ವಿನ್ನರ್ಸ್
- ಬೆಂಗಾಲ್ ವಾರಿಯರ್ಸ್:ಚಾಂಪಿಯನ್(3 ಕೋಟಿ)
- ದಬಾಂಗ್ ಡೆಲ್ಲಿ: ರನ್ನರ್ ಆಪ್ (1.8 ಕೋಟಿ)
- ಟೂರ್ನಿ ಶ್ರೇಷ್ಠ ಆಟಗಾರ: ನವೀನ್ ಕುಮಾರ್
- ಶ್ರೇಷ್ಠ ರೈಡರ್: ಪವನ್ ಶೆರಾವತ್(15 ಲಕ್ಷ)
- ಶ್ರೇಷ್ಠ ಡಿಫೆಂಡರ್: ಫಜಲ್ ಅಟ್ರಾಚಲಿ(15 ಲಕ್ಷ)
- ಟೂರ್ನಿಯ ಯುವ ಆಟಗಾರ: ಸುಮಿತ್(8 ಲಕ್ಷ)