ETV Bharat / sports

ಒಂದು ಕಾಲಿಲ್ಲದಿದ್ದರೂ ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಚಿನ್ನ ಗೆದ್ದ ಮಾನಸಿ ಜೋಷಿ !

30 ವರ್ಷದ ಮಾನಸಿ ಫೈನಲ್​ ಪಂದ್ಯದಲ್ಲಿ ಭಾರತದವರೇ ಆದ ಪಾರುಲ್​ ಪಾರ್ಮರ್​ರನ್ನು 21-12, 21-7 ಗೇಮ್​ಗಳಲ್ಲಿ ಗೆಲುವು ಸಾಧಿಸಿ ತಮ್ಮ ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.​

Para World Badminton
author img

By

Published : Aug 28, 2019, 8:49 AM IST

ನವದೆಹಲಿ: ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ, ಚಲ ಬಿಡದ ಮಾನಸಿ ಜೋಷಿ ಆಗಸ್ಟ್​ 25 ರಂದು ನಡೆದ ಪ್ಯಾರಾ ಬ್ಯಾಡ್ಮಿಂಟನ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಪಿವಿ ಸಿಂಧು ಆಗಸ್ಟ್​ 26 ರಂದು ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಜಪಾನ್​ ಆಟಗಾರ್ತಿಯನ್ನು ಮಣಿಸಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಇಡೀ ದೇಶಕ್ಕೆ ಹೆಮ್ಮೆ ಪಡುವಂತೆ ಮಾಡಿದ್ದರು. ಆದ್ರೆ ಮಾನಸಿ ಜೋಷಿ ಸಿಂಧುಗಿಂತ ಒಂದು ದಿನ ಮೊದಲೆ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವಚಾಂಪಿನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು ಎಂಬುದು ಗಮನಾರ್ಹ. ಅವರ ಹೆಸರು ಎರಡು ದಿನಗಳ ನಂತರ ಟ್ವಿಟರ್​ನಲ್ಲಿ ಟ್ರೆಂಡ್​ಗೆ ಬಂದಿದ್ದು, ಇಡೀ ದೇಶದ ಜನ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

30 ವರ್ಷದ ಮಾನಸಿ ಫೈನಲ್​ ಪಂದ್ಯದಲ್ಲಿ ಭಾರತದವರೇ ಆದ ಪಾರುಲ್​ ಪಾರ್ಮರ್​ರನ್ನು 21-12, 21-7 ಗೇಮ್​ಗಳಲ್ಲಿ ಗೆಲುವು ಸಾಧಿಸಿ ತಮ್ಮ ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.​

ಈ ಹಿಂದಿನ ತಮ್ಮ ಎರಡು ಟೂರ್ನಿಗಳಲ್ಲಿ ಬೆಳ್ಳಿ ಗೆದ್ದಿದ್ದ ಮಾನಸಿ ಈ ಬಾರಿ ಚಿನ್ನದ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ .

ಚಿನ್ನ ಗೆದ್ದವರಿಗೆ 20 ಲಕ್ಷ:

ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಚಿನ್ನ ಗೆದ್ದವರಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು 20 ಲಕ್ಷ, ಬೆಳ್ಳಿ ಗೆದ್ದವರಿಗೆ 14, ಹಾಗೂ ಕಂಚು ಗೆದ್ದವರಿಗೆ 8 ಲಕ್ಷ ಚೆಕ್​ ನೀಡುವ ಮೂಲಕ ಪ್ಯಾರಾ ಕ್ರೀಡಾಪಟುಗಳನ್ನು ಗೌರವಿಸಿದ್ದಾರೆ. ಡಬಲ್ಸ್​ನಲ್ಲಿ ಚಿನ್ನ ಪದಕಕ್ಕೆ 15, ಬೆಳ್ಳಿ ಹಾಗೂ ಕಂಚು ಗೆದ್ದವರಿಗೆ 19.5 ಹಾಗೂ 6 ಲಕ್ಷ ನೀಡಿಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.