ETV Bharat / sports

ಓರ್ಲಿಯನ್ಸ್ ಮಾಸ್ಟರ್ಸ್: ಮೊದಲ ಸುತ್ತಿನಲ್ಲೇ ಹೊರಬಿದ್ದ ಸೈನಾ ನೆಹ್ವಾಲ್​ - ETV Bharath Kannada news

ಓರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ 2023 ರ ಎರಡನೇ ಸುತ್ತಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ತಾನ್ಯಾ ಹೇಮಂತ್ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥ್ ಪ್ರವೇಶ ಪಡೆದರು.

Orleans Masters 2023 Saina Nehwal, Sameer  and Aakarshi ousted
ಓರ್ಲಿಯನ್ಸ್ ಮಾಸ್ಟರ್ಸ್: ಮೊದಲ ಸುತ್ತಿನಲ್ಲೇ ಹೊರ ಬಿದ್ದ ಸೈನಾ ನೆಹ್ವಾಲ್​
author img

By

Published : Apr 5, 2023, 8:07 PM IST

ಓರ್ಲಿಯನ್ಸ್ (ಫ್ರಾನ್ಸ್): ಓರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ 2023 ರನ್ನು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ತಮ್ಮ ಕಮ್​ಬ್ಯಾಕ್ ಎಂದೇ ಕರೆದುಕೊಂಡಿದ್ದರು. ಆದರೆ, ಅವರಿಗೆ ಮೊದಲ ಸುತ್ತಿನಲ್ಲೇ ನಿರಾಸೆಯಾಗಿದೆ. ಟರ್ಕಿಯ ನೆಸ್ಲಿಹಾನ್ ಯಿಗಿತ್ ವಿರುದ್ಧ ಆರಂಭಿಕ ಸುತ್ತಿನಲ್ಲಿ 16-21, 14-21 ರಿಂದ ಸೋಲನುಭವಿಸಿದ್ದಾರೆ. ಪರಿಣಾಮ, ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಬಿಡಬ್ಲ್ಯೂಎಫ್​ ವರ್ಲ್ಡ್ ಟೂರ್ ಸೂಪರ್ 300 ಈವೆಂಟ್‌ನಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶದ ದಿನವಾಗಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ತಾನ್ಯಾ ಹೇಮಂತ್ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥ್ ಎರಡನೇ ಸುತ್ತು ಪ್ರವೇಶಿಸಿದರೆ, ತಸ್ನಿಮ್ ಮಿರ್, ಆಕರ್ಷಿ ಕಶ್ಯಪ್ (ಮಹಿಳೆಯರ ಸಿಂಗಲ್ಸ್) ಮತ್ತು ಸಮೀರ್ ವರ್ಮಾ ಸೋತಿದ್ದಾರೆ. ಮೊದಲ ಸುತ್ತಿನಲ್ಲಿ ಪ್ರಿಯಾಂಶು ರಾಜಾವತ್ 21-18, 21-13 ರಲ್ಲಿ ತನ್ನ ದೇಶದ ಕಿರಣ್ ಜಾರ್ಜ್ ವಿರುದ್ಧ ಸೋಲೊಪ್ಪಿಕೊಂಡರು.

  • Orléans Masters Badminton 2023 presented by VICTOR
    WS - R32
    21 21 🇹🇷Neslihan YIGIT🥇

    16 14 🇮🇳Saina NEHWAL

    🕚 in 39 minutes

    — BWFScore (@BWFScore) April 5, 2023 " class="align-text-top noRightClick twitterSection" data=" ">

ಮಹಿಳೆಯರ ಸಿಂಗಲ್ಸ್‌ನಲ್ಲಿ ತಾನ್ಯಾ ಹೇಮಂತ್ 21-17, 21-18 ರಲ್ಲಿ ಫ್ರಾನ್ಸ್‌ನ ಹುಯೆಟ್ ಲಿಯೊನಿಸ್ ಅವರನ್ನು 40 ನಿಮಿಷಗಳಲ್ಲಿ ಮಣಿಸಿದರು. ಆದರೆ ಆಕರ್ಷಿ ಕಶ್ಯಪ್ ಮೊದಲ ಸುತ್ತಿನ ಪಂದ್ಯದಲ್ಲಿ 8-21, 21-13, 8-21 ರಿಂದ ಜರ್ಮನ್ ಸ್ಪರ್ಧಿ ವಿರುದ್ಧ ಮಂಡಿಯೂರಿದರು. ತಸ್ನಿಮ್ ಮಿರ್ ಮೂರು ಗೇಮ್‌ಗಳಲ್ಲಿ 22-20, 13-21, 5-21 44 ನಿಮಿಷಗಳ ಹಣಾಹಣಿಯಲ್ಲಿ ಜರ್ಮನಿಯ ಯವೊನೆ ಲಿ ವಿರುದ್ಧ ಸೋತು ನಿರಾಶೆ ಅನುಭವಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್‌ ಮಂಜುನಾಥ್‌ 24-22, 25-23ರಲ್ಲಿ ಡೆನ್‌ಮಾರ್ಕ್‌ನ ವಿಕ್ಟರ್‌ ಸ್ವೆಂಡ್‌ಸೆನ್‌ ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದರು. ಇನ್ನೊಂದು ಪಂದ್ಯದಲ್ಲಿ, ಭಾರತದ ಸಮೀರ್ ವರ್ಮಾ ಮೂರು ಗೇಮ್‌ಗಳಲ್ಲಿ ನ್ಯಾಟ್ ನ್ಗುಯೆನ್ ವಿರುದ್ಧ ಸೋತರು. ಸುಮಾರು ಒಂದೂವರೆ ಗಂಟೆಗಳ ಪೈಪೋಟಿಯಲ್ಲಿ 21-19, 19-21, 17-21 ರಿಂದ ಪರಾಭವಗೊಂಡರು.

ಇದನ್ನೂ ಓದಿ: IPL ಎಫೆಕ್ಟ್​: ಫ್ಯಾಂಟಸಿ ಸ್ಪೋರ್ಟ್ಸ್​ ಮಾರುಕಟ್ಟೆ 3,100 ಕೋಟಿ ರೂ.ಗೆ ಬೆಳೆಯುವ ನಿರೀಕ್ಷೆ

ಹೋರಾಡಿ ಸೋತ ಸೈನಾ: ಪಂದ್ಯದಲ್ಲಿ ಸೈನಾ ನೆಹ್ವಾಲ್ ಟರ್ಕಿ ಆಟಗಾರ್ತಿಗೆ ತೀವ್ರ ಪ್ರತಿರೋಧ ತೋರಿದರು. ನೆಸ್ಲಿಹಾನ್ ಯಿಗಿತ್ ಆರಂಭದಲ್ಲೇ ಹಿಡಿತ ಸಾಧಿಸಿ ಮುನ್ನಡೆ ಪಡೆದುಕೊಂಡರು. ಟರ್ಕಿಯ ಯಿಗಿತ್ 5-0ಯ ಮುನ್ನಡೆ ಪಡೆದು ಪಾಯಿಂಟ್‌ ಅನ್ನು 11-4 ಕ್ಕೆ ಹೆಚ್ಚಿಸಿದರು. ಸೈನಾ ಹೋರಾಟ ಬಿಡದೇ ಆಡಿದ ಪರಿಣಾಮ ಒಂದು ಹಂತದಲ್ಲಿ 10-12ಕ್ಕೆ ಅಂಕಗಳು ಬಂದಿದ್ದವು. ನಂತರ ಮತ್ತೆ ಯಿಗಿತ್​ ಹಿಡಿತ ಸಾಧಿಸಿದ್ದು ಮೊದಲ ಗೇಮ್​ 21-16 ರಲ್ಲಿ ಅಂತ್ಯವಾಯಿತು.

ಎರಡನೇ ಗೇಮ್‌ನಲ್ಲೂ ಟರ್ಕಿಶ್ ಆಟಗಾರ್ತಿ 4-0 ಅಂತರದಲ್ಲಿ ಮುನ್ನಡೆ ಪಡೆದರು ಮತ್ತು ಸೈನಾ ಅಂತರವನ್ನು 4-6ಕ್ಕಿಳಿಸಿದರೂ, ನೆಸ್ಲಿಹಾನ್ ಮುಂದಿನ ಆರು ಪಾಯಿಂಟ್‌ಗಳನ್ನು ಗೆದ್ದು 10-4 ರಿಂದ ಮೇಲುಗೈ ಸಾಧಿಸಿ ಕೊನೆಯವರೆಗೂ ಮುನ್ನಡೆಯಲ್ಲೇ ಇದ್ದರು. 21-14 ರಂದಿ ಎರಡನೇ ಗೇಮ್ ವಶಕ್ಕೆ ತೆಗೆದುಕೊಂಡು ಯಿಗಿತ್​ ಎರಡನೇ ಸುತ್ತಿಗೆ ಪ್ರವೇಶ ಪಡೆದರು.

ಇದನ್ನೂ ಓದಿ: ವೇಟ್‌ಲಿಫ್ಟರ್‌ ಸಂಜಿತಾ ಚಾನುಗೆ 4 ವರ್ಷ ನಿಷೇಧ ಶಿಕ್ಷೆ ವಿಧಿಸಿದ ನಾಡಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.