ಟೋಕಿಯೋ: ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ನೆಲೆಸಿರುವ ಇಬ್ಬರು ಸೇರಿದಂತೆ ಮೂವರು ಅಥ್ಲೀಟ್ಗಳಿಗೆ ಕೊರೊನಾ ದೃಢಪಟ್ಟ ನಂತರ ಸೋಮವಾರ ಒಲಿಂಪಿಕ್ಸ್ಗೆ ಸಂಬಂಧಿಸಿದ ಮೂವರು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚೀಬಾ ಮೂಲದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಒಬ್ಬ ವ್ಯಕ್ತಿ, ಟೋಕಿಯೋ ಗೇಮ್ಸ್ ವರದಿಗಾಗಿ ಬಂದಿದ್ದ ಪತ್ರಕರ್ತ ಮತ್ತು ಸೈತಮಾ ಮೂಲದ ಒಬ್ಬ ಗುತ್ತಿಗೆದಾರನಿಗೆ ಕೊರೊನಾ ಕಾಣಿಸಿಕೊಂಡಿದೆ ಎಂದು ಒಲಿಂಪಿಕ್ಸ್ ಆಯೋಜಕರು ತಮ್ಮ ದೈನಂದಿನ ಕೋವಿಡ್-19 ಅಪ್ಡೇಟ್ನಲ್ಲಿ ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಟ್ಟು 58ಕ್ಕೆ ಏರಿಕೆಯಾಗಿದೆ.
ಭಾನುವಾರ ಕ್ರೀಡಾಗ್ರಾಮದಲ್ಲಿ ತಂಗಿದ್ದ ದಕ್ಷಿಣ ಆಫ್ರಿಕಾ ಫುಟ್ಬಾಲ್ ತಂಡದ ಇಬ್ಬರು ಆಟಗಾರರಿಗೆ ಸೋಂಕು ತಗುಲಿತ್ತು. ಈ ಬಗ್ಗೆ ಆಯೋಜಕರು ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೆ ದ.ಆಫ್ರಿಕಾ ಫುಟ್ಬಾಲ್ ಅಸೋಸಿಯೇಷನ್ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡಿದೆ.
ಮೂರನೇ ಸೋಂಕಿತ ಕ್ರೀಡಾಪಟು ಗೇಮ್ಸ್ ಹೋಟೆಲ್ನಲ್ಲಿದ್ದಾರೆ. ಅವರ ಮಾಹಿತಿಯನ್ನು ಆಯೋಜಕರು ಗೌಪ್ಯವಾಗಿಟ್ಟಿದ್ದಾರೆ. ಮಹಾ ಕ್ರೀಡಾಕೂಟಕ್ಕೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕ್ರೀಡಾ ಗ್ರಾಮದಲ್ಲೇ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವುದು ಆಘಾತ ತಂದಿದೆ.
ಇದನ್ನೂ ಓದಿ: ಕೊರೊನಾ ಸೋಂಕು ದೃಢ: ಯುವ ಟೆನ್ನಿಸ್ ಆಟಗಾರ್ತಿಯ ಒಲಿಂಪಿಕ್ಸ್ ಕನಸು ಭಗ್ನ