ಬುಡಾಪೆಸ್ಟ್(ಹಂಗೇರಿ): ಜೀವಂತವಾಗಿರುವ ಹಿರಿಯ ಒಲಿಂಪಿಕ್ಸ್ ಚಾಂಪಿಯನ್ ಎಂದು ಹೆಸರಾಗಿರುವ ಆಗ್ನೆಸ್ ಕೆಲೆಟಿ ಇಂದು ನೂರನೇ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದ್ದಾರೆ.
ಜಿಮ್ನಾಸ್ಟಿಕ್ಸ್ನಲ್ಲಿ 5 ಚಿನ್ನದ ಪದಕ ಸೇರಿದಂತೆ 10 ಒಲಿಂಪಿಕ್ ಪದಕ ಗೆದ್ದಿರುವ ದಾಖಲೆ ಹೊಂದಿರುವ ಹಂಗೇರಿಯನ್ ಆಗ್ನೆಸ್ ಕೆಲೆಟಿಗೆ ಇಂದು ನೂರರ ಸಂಭ್ರಮ. ಅವರು ಬುಡಾಪೆಸ್ಟ್ನ ತಮ್ಮ ಮನೆಯಲ್ಲಿ ಶನಿವಾರ 100ನೇ ಜನ್ಮದಿನವನ್ನಾಚರಿಸಿಕೊಂಡಿದ್ದಾರೆ. ತಮ್ಮ ಜೀವನದುದ್ದಕ್ಕೂ ಒಮ್ಮೆ ಕಣ್ಣಾಯಿಸಿದ ನೆನೆಪುಗಳು ಒಂದು ಕ್ಷಣ ಕಣ್ಣ ಮುದೆ ಹಾದು ಹೋಗುತ್ತದೆ ಎಂದು ಈ ಸಂಭ್ರಮದ ಕ್ಷಣದಲ್ಲಿ ಹೇಳಿಕೊಂಡಿದ್ದಾರೆ.
' ಈ ನೂರು ವರ್ಷ ನನಗೆ 60 ವರ್ಷಗಳಂತೆ ಭಾಸವಾಗುತ್ತಿದೆ' ಎಂದು ಕೆಲೆಟಿ ತಮ್ಮ 100ನೇ ವರ್ಷದ ಜನ್ಮದಿನಾಚರಣೆ ವೇಳೆ ಹೇಳಿದ್ದಾರೆ.
ಕೆಲೆಟಿ 1921ರಲ್ಲಿ ಆಗ್ನೆಸ್ ಕ್ಲೀನ್ನಲ್ಲಿ ಜನಿಸಿದ್ದರು. 1940 ಮತ್ತು 1944ರ ಒಲಿಂಪಿಕ್ಸ್ಗಳು ಮಹಾಯುದ್ದದ ಕಾರಣ ಅವರ ವೃತ್ತಿಜೀವನದ ಆರಂಭದಲ್ಲೇ ಅಡಚಣೆ ಉಂಟಾಗಿತ್ತು. ನಂತರ 1948ರಲ್ಲಿ ಭಾಗವಹಿಸುವ ಮುಂಚೆ ಹಿಮ್ಮಡಿ ಗಾಯಕ್ಕೆ ತುತ್ತಾಗಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರೂ, ಛಲಬಿಡದ ಕೆಲೆಟಿ ತಮ್ಮ 31 ವಯಸ್ಸಿನಲ್ಲಿ 1952ರ ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದರು.
ನಂತರ 1956ರ ಮೆಲ್ಬೋರ್ನ್ ಒಲಿಂಪಿಕ್ಸ್ನಲ್ಲಿ 6 ಪದಕ ಪಡೆಯುವ ಮೂಲಕ ಅತ್ಯಂತ ಯಶಸ್ವಿ ಕ್ರೀಡಾಪಟು ಮತ್ತು ಸಾರ್ವಕಾಲಿಕ ಅತ್ಯಂತ ಯಶಸ್ವಿ ಯಹೂದಿ ಒಲಿಂಪಿಕ್ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ.
ಆ ರೋಗ್ಯವೇ ಮೂಲತತ್ವ ಅದು ಇಲ್ಲದೇ, ಏನೂ ಇಲ್ಲ " ಎನ್ನುವ ತತ್ವವನ್ನು ಅನುಸರಿಸಿಕೊಂಡು ಬರುತ್ತಿರುವ ಆಗ್ನೆಸ್ ಕೆಲೆಟಿಗೆ ಮತ್ತುಷ್ಟು ವರ್ಷ ಬದುಕಲಿ ಎಂದು ಕ್ರೀಡಾಭಿಮಾನಿಗಳು ಆಶಿಸಿದ್ದಾರೆ.