ಲಂಡನ್: ಸರ್ಬಿಯಾದ ಪ್ರಬಲ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಈ ಬಾರಿಯ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಗ್ರ ಶ್ರೇಯಾಂಕಿತ ಜೊಕೊವಿಕ್ ಪ್ರಸಕ್ತ ವರ್ಷದ 3ನೇ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಅವರನ್ನು 4-6, 6-3, 6-4, 7-6 ಸೆಟ್‌ಗಳಿಂದ ಮಣಿಸಿದರು.
ಮೊದಲ ಸೆಟ್ ಅನ್ನು ಕಿರ್ಗಿಯೋಸ್ ತಮ್ಮ ಅದ್ಭುತ ಸರ್ವ್‌ಗಳ ಮೂಲಕ ಗೆದ್ದರು. ಆದರೆ ಅವರಿಗೆ ಮುಂದೆ ಅದೇ ಲಯವನ್ನು ಕಾಯ್ದುಕೊಳ್ಳಲಾಗಲಿಲ್ಲ. ಜೊಕೊವಿಕ್ ಎರಡು ಮತ್ತು ಮೂರನೇ ಸೆಟ್‌ಗಳನ್ನು ಸುಲಭವಾಗಿ ಗೆದ್ದರು. ಕಿರ್ಗಿಯೊಸ್ ಕೂಡ ಕೊನೆಯ ಸೆಟ್‌ನಲ್ಲಿ ಪ್ರಬಲ ಹೋರಾಟ ನೀಡಿದರೂ ಫಲ ನೀಡಲಿಲ್ಲ.
ಫೆಡರರ್ ಹಿಂದಿಕ್ಕಿದ ಜೊಕೊವಿಕ್: ಇದು ನೊವಾಕ್ ಜೊಕೊವಿಕ್ ಅವರ 7ನೇ ವಿಂಬಲ್ಡನ್ ಮತ್ತು 21ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಇದೀಗ ಇವರು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಿಂದಿಕ್ಕಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಮಾಡಿದ್ದಾರೆ. ಫೆಡರರ್ ಇದುವರೆಗೆ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ: Wimbledon 2022: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ ಎಲೆನಾ ರೈಬಾಕಿನಾ
ನಡಾಲ್‌ಗೆ ಅತಿ ಹೆಚ್ಚು ಪ್ರಶಸ್ತಿ: ಸ್ಪೇನ್‌ನ ರಾಫೆಲ್ ನಡಾಲ್ ಅತಿ ಹೆಚ್ಚು ಅಂದ್ರೆ 22 ಪ್ರಶಸ್ತಿಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಎಲ್ಲಾ ಮೂವರು ಜಗತ್ಪ್ರಸಿದ್ಧ ಆಟಗಾರರು ತಮ್ಮ ಹೆಸರಿಗೆ ತಲಾ 20-20 ಪ್ರತಿಷ್ಠಿತ ಪ್ರಶಸ್ತಿಗಳನ್ನು ಹೊಂದಿದ್ದರು. ನಡಾಲ್ ಆಸ್ಟ್ರೇಲಿಯನ್ ಮತ್ತು ಫ್ರೆಂಚ್ ಓಪನ್ ಗೆದ್ದಿದ್ದು, ವಿಂಬಲ್ಡನ್‌ನಲ್ಲಿ ಕಿಬ್ಬೊಟ್ಟೆ ನೋವಿನಿಂದಾಗಿ ಸೆಮಿಫೈನಲ್‌ನಿಂದ ಹಿಂದೆ ಸರಿದಿದ್ದರು.
ವಿಂಬಲ್ಡನ್ ಪ್ರಶಸ್ತಿಗಳ ರಾಜ ಫೆಡರರ್: ರೋಜರ್ ಫೆಡರರ್ ಅತಿ ಹೆಚ್ಚು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಇದುವರೆಗೆ 8 ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಕಿರ್ಗಿಯೋಸ್ಗಿದು ಮೊದಲ ಫೈನಲ್: ಆಸ್ಟ್ರೇಲಿಯಾದ ಕಿರ್ಗಿಯೋಸ್ ತನ್ನ ಮೊದಲ ಗ್ರ್ಯಾನ್ ಸ್ಲಾಮ್ ಫೈನಲ್ ಆಡಿದ್ದಾರೆ. ಸೆಮಿಫೈನಲ್‌ನಲ್ಲಿ ಗಾಯಗೊಂಡ ಕಾರಣ ಅವರಿಗೆ ನಡಾಲ್ ವಾಕ್‌ಓವರ್ ನೀಡಿದ್ದರು. 2001ರಲ್ಲಿ ಗೊರಾನ್ ಇವಾನಿಸೆವಿಚ್ ಮೊದಲ ಶ್ರೇಯಾಂಕರಹಿತ ಚಾಂಪಿಯನ್ ಆಗಲು ಪ್ರಯತ್ನಿಸಿದ್ದರು. ಈಗ 40ನೇ ಶ್ರೇಯಾಂಕದ ಕಿರ್ಗಿಯೋಸ್ ಕೂಡಾ ಶ್ರೇಯಾಂಕರಹಿತ ಚಾಂಪಿಯನ್ ಆಗಲು ಪ್ರಯತ್ನಿಸಿದ್ದಾರೆ. ಆದರೆ ಜೊಕೊವಿಕ್ ಅವರ ಅನುಭವಕ್ಕೆ ಕಿರ್ಗಿಯೋಸ್ ಹೆಚ್ಚು ಹೋರಾಟ ನಡೆಸಲು ಸಾಧ್ಯವಾಗಲಿಲ್ಲ. ವಿಶೇಷವೆಂದರೆ, ಇವಾನಿಸೆವಿಕ್ ಈಗ ಜೊಕೊವಿಚ್ ಅವರ ಕೋಚ್ ಆಗಿದ್ದು, ಪಂದ್ಯದ ವೇಳೆ ಸೆಂಟರ್ ಕೋರ್ಟ್ಗೆ ಅತಿಥಿಯಾಗಿ ಆಗಮಿಸಿದ್ದರು.