ಅಕಾಪುಲ್ಕೋ: ವಿಶ್ವದ ನಂಬರ್ 1 ಟೆನಿಸ್ ಪ್ಲೇಯರ್ ರಷ್ಯಾದ ಡೇನಿಯಲ್ ಮೆಡ್ವೆಡೆವ್ ವಿರುದ್ಧ 6-3, 6-3ರ ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿದ 21 ಗ್ರ್ಯಾಂಡ್ ಸ್ಲಾಮ್ ವಿಜೇತ ರಾಫೆಲ್ ನಡಾಲ್, ಮೆಕ್ಸಿಕೊ ಓಪನ್ ಫೈನಲ್ ತಲುಪಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್ಗಳಿಬ್ಬರು ಮತ್ತೊಮ್ಮೆ ಮುಖಾಮುಖಿಯಾಗಿದ್ದರು. ಆದರೆ, ರಷ್ಯನ್ ಸ್ಟಾರ್ ಮೆಡ್ವೆಡೆವ್ ಅನುಭವಿ ನಡಾಲ್ ಆಟಕ್ಕೆ ತಲೆಬಾಗಿದರು. ಕಳೆದ ತಿಂಗಳು 35 ವರ್ಷದ ನಡಾಲ್ 2 ಸೆಟ್ಗಳ ಸೋಲಿನ ನಂತರವೂ ಸತತ 3 ಸೆಟ್ಗಳಲ್ಲಿ ಮೆಡ್ವೆಡೆವ್ ಮಣಿಸಿ 21ನೇ ಗ್ರ್ಯಾಂಡ್ಸ್ಲಾಮ್ ತಮ್ಮದಾಗಿಸಿಕೊಂಡಿದ್ದರು.
ಇನ್ನು ಈ ಋತುವಿನಲ್ಲಿ ಸತತ 14 ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿರುವ ನಡಾಲ್ ಭಾನುವಾರ ಫೈನಲ್ನಲ್ಲಿ ಇಂಗ್ಲೆಂಡ್ನ ಕ್ಯಾಮರೂನ್ ನಾರೀ ವಿರುದ್ಧ ಸೆಣಸಾಡಲಿದ್ದಾರೆ. ಈ ಪಂದ್ಯವನ್ನು ಗೆದ್ದರೆ ನಡಾಲ್ 4ನೇ ಟ್ರೋಫಿ ಗೆದ್ದಂತಾಗಲಿದೆ. ನಾರೀ ಸೆಮಿಫೈನಲ್ಸ್ನಲ್ಲಿ 3ನೇ ಶ್ರೇಯಾಂಕದ ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧ 6-4,6-4ರಲ್ಲಿ ಮಣಿಸಿದ್ದರು.
ಇದನ್ನೂ ಓದಿ:ಪ್ರೊ ಕಬಡ್ಡಿ ಫೈನಲ್: ರೋಚಕ ಹಣಾಹಣಿಯಲ್ಲಿ ಪಾಟ್ನಾ ವಿರುದ್ಧ ಗೆದ್ದು ಚಾಂಪಿಯನ್ ಆದ ಡೆಲ್ಲಿ ದಬಾಂಗ್