ETV Bharat / sports

ರಷ್ಯಾ-ಉಕ್ರೇನ್​ ಯುದ್ಧದ ಸುದ್ದಿ ನೋಡುವುದು ಅಷ್ಟು ಸುಲಭವಲ್ಲ - ನಂ.1​ ಟೆನಿಸ್​​ ಆಟಗಾರನ ಮಾತು - ರಷ್ಯಾ-ಉಕ್ರೇನ್​ ಯುದ್ಧದ ಬಗ್ಗೆ ಡೇನಿಯಲ್​​ ಮೆಡ್ವೆಡೆವ್

ನಾನೊಬ್ಬ ಟೆನಿಸ್ ಆಟಗಾರನಾಗಿ ಪ್ರಪಂಚದಾದ್ಯಂತ ಶಾಂತಿಯನ್ನು ಬಯಸುತ್ತೇನೆ. ನಾವು ವಿವಿಧ ದೇಶಗಳಲ್ಲಿ ಆಡುತ್ತೇವೆ. ಆದರೆ ಈಗ ಮನೆಯಲ್ಲಿ ಕುಳಿತು ರಷ್ಯಾ - ಉಕ್ರೇನ್​​ ಯುದ್ಧದ ಸುದ್ದಿಗಳನ್ನು ನೋಡುವುದು ಅಷ್ಟು ಸುಲಭವಲ್ಲ ಎಂದು ಡೇನಿಯಲ್​​ ಮೆಡ್ವೆಡೆವ್ ಹೇಳಿದ್ದಾರೆ.

ಡೇನಿಯಲ್​​ ಮೆಡ್ವೆಡೆವ್
ಡೇನಿಯಲ್​​ ಮೆಡ್ವೆಡೆವ್
author img

By

Published : Feb 25, 2022, 4:52 PM IST

ಮೆಕ್ಸಿಕೋ ಓಪನ್​​ಗಾಗಿ ನಡೆದ ದುಬೈ ಚಾಂಪಿಯನ್​ಶಿಪ್ ಕ್ವಾರ್ಟರ್ ಫೈನಲ್​​ನಲ್ಲಿ 2020ರಿಂದ ವಿಶ್ವದ ನಂಬರ್​ ಒನ್​ ಟೆನಿಸ್​ ಆಟಗಾರನಾಗಿದ್ದ ಸರ್ಬಿಯಾದ ನೋವಾಕ್ ಜೊಕೊವಿಕ್ ಸೋಲುಂಡ ಬಳಿಕ ಎಟಿಪಿ ರ‍್ಯಾಕಿಂಗ್​ನಲ್ಲಿ ರಷ್ಯಾದ ಆಟಗಾರ ಡೇನಿಯಲ್​​ ಮೆಡ್ವೆಡೆವ್ ಅಗ್ರಸ್ಥಾನಕ್ಕೇರಿದ್ದಾರೆ.

26 ವರ್ಷದ ಆಟಗಾರ ಡೇನಿಯಲ್​​ ಮೆಡ್ವೆಡೆವ್​ ಅವರು ಜಪಾನ್​ನ ಯೊಶಿಹಜಿಟೊ ನಿಶಿಯೋಕ 6-2, 6-3 ಅಂತರದಲ್ಲಿ ಸೋಲಿಸಿದ ನಂತರ ನಂಬರ್ ಒನ್​ ಪಟ್ಟ ಪಡೆದುಕೊಂಡಿರುವ ಸಂತೋಷ ಒಂದೆಡೆಯಾದರೆ, ತನ್ನ ದೇಶ ಯುದ್ಧ ಸಾರಿರುವುದು ಅವರಿಗೆ ಅಷ್ಟೇ ದುಃಖವಾಗಿದೆ.

ನಂ.1 ಸ್ಥಾನಕ್ಕೆ ತಲುಪಿರುವುದು ಸಂತಸ ತಂದಿದೆ, ಚಿಕ್ಕ ವಯಸ್ಸಿನಿಂದಲೂ ಇದು ನನ್ನ ಗುರಿಯಾಗಿತ್ತು. ಆದರೆ ನಾನೊಬ್ಬ ಟೆನಿಸ್ ಆಟಗಾರನಾಗಿ ಪ್ರಪಂಚದಾದ್ಯಂತ ಶಾಂತಿಯನ್ನು ಬಯಸುತ್ತೇನೆ. ನಾವು ವಿವಿಧ ದೇಶಗಳಲ್ಲಿ ಆಡುತ್ತೇವೆ. ಆದರೆ ಈಗ ಮನೆಯಲ್ಲಿ ಕುಳಿತು ರಷ್ಯಾ - ಉಕ್ರೇನ್​​ ಯುದ್ಧದ ಸುದ್ದಿಗಳನ್ನು ನೋಡುವುದು ಅಷ್ಟು ಸುಲಭವಲ್ಲ ಎಂದು ಡೇನಿಯಲ್​​ ಮೆಡ್ವೆಡೆವ್ ಹೇಳುತ್ತಾರೆ.

ಇದನ್ನೂ ಓದಿ: ಉಕ್ರೇನ್​ ನಡುವಿನ ಯುದ್ಧದಲ್ಲಿ 450 ರಷ್ಯನ್ ಸೈನಿಕರು ಮೃತ : ಬ್ರಿಟನ್ ಮಾಹಿತಿ

ಕಳೆದ ವಾರ ಮಾರ್ಸೆಲ್ಲೆ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಜೋಡಿಯಲ್ಲಿ ಒಬ್ಬ ರಷ್ಯನ್ ಆಟಗಾರ ಹಾಗೂ ಮತ್ತೊಬ್ಬ ಉಕ್ರೇನಿಯನ್ ಆಟಗಾರ ಎಂಬುದನ್ನು ಮೆಡ್ವೆಡೆವ್ ಯುದ್ಧದ ಈ ಸಮಯದಲ್ಲಿ ಸ್ಮರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.