ನವದೆಹಲಿ : ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟಿರುವ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ, ಫೈನಲ್ನಲ್ಲಿ ತಮ್ಮ ಮೊದಲ ಪ್ರಯತ್ನವನ್ನು ಏಕೆ ಆತುರಾತುರವಾಗಿ ಎಸೆದಿದ್ದರೆಂದು ಬಹಿರಂಗ ಪಡಿಸಿದ್ದಾರೆ.
ನೀರಜ್ ಚೋಫ್ರಾ ಫೈನಲ್ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ 87. 03 ಮೀಟರ್ ಎಸೆದಿದ್ದರು. ಆದರೆ, ತಮ್ಮ ಮೊದಲ ಪ್ರಯತ್ನವನ್ನು ತುಂಬಾ ಆತುರದಲ್ಲಿ ಎಸೆದಿದ್ದದ್ದು ಕಂಡು ಬಂದಿತ್ತು. ಆದರೆ, ಏಕೆ ಆತುರವಾಗಿ ಅವರು ಎಸೆದಿದ್ದರೆಂಬುವುದನ್ನು ಇದೀಗ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಜಾವಲಿನ್ ಥ್ರೋ ಫೈನಲ್ ವೇಳೆ ನೀರಜ್ ಚೋಪ್ರಾ ಮೊದಲ ಕ್ರಮಾಂಕದ ಅಥ್ಲೀಟ್ ಆಗಿದ್ದರು. ಆದರೆ, ಅವರು ಎಸೆಯಬೇಕಿದ್ದ ಜಾವಲಿನ್ ಅನ್ನು ಪಾಕಿಸ್ತಾನದ ಜಾವಲಿನ್ ಥ್ರೋವರ್ ಅರ್ಷದ್ ನದೀಮ್ ತೆಗೆದುಕೊಂಡು ಓಡಾಡುತ್ತಿದ್ದರಂತೆ. ತಕ್ಷಣ ಗಮನಿಸಿದ ನೀರಜ್, ನದೀಮ್ ಅವರಿಂದ ವಾಪಸ್ ಪಡೆದುಕೊಂಡು ಆತುರವಾಗಿ ಎಸೆದಿದ್ದಾಗಿ ಹೇಳಿದ್ದಾರೆ.
-
Here we can see Neeraj asking for his Javelin to Arshad #NeerajChopra #Tokyo2020 #ArshadNadeem pic.twitter.com/FTqfGyjlrI
— vishal ghandat (@VishalGhandat) August 25, 2021 " class="align-text-top noRightClick twitterSection" data="
">Here we can see Neeraj asking for his Javelin to Arshad #NeerajChopra #Tokyo2020 #ArshadNadeem pic.twitter.com/FTqfGyjlrI
— vishal ghandat (@VishalGhandat) August 25, 2021Here we can see Neeraj asking for his Javelin to Arshad #NeerajChopra #Tokyo2020 #ArshadNadeem pic.twitter.com/FTqfGyjlrI
— vishal ghandat (@VishalGhandat) August 25, 2021
ಫೈನಲ್ ಆರಂಭವಾಗುತ್ತಿದ್ದಂತೆ ನಾನು ನನ್ನ ಜಾವಲಿನ್ ಹುಡುಕುತ್ತಿದ್ದೆ. ನನಗೆ ಅದನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ ಅರ್ಷದ್ ನದೀಮ್ ನನ್ನ ಜಾವಲಿನ್ ಜೊತೆ ತಿರುಗಾಡುತ್ತಿರುವುದನ್ನು ನೋಡಿದೆ.
ತಕ್ಷಣ, "ಭಾಯ್ ಈ ಜಾವಲಿನ್ ನನಗೆ ಕೊಡು, ಅದು ನನ್ನ ಜಾವಲಿನ್. ನಾನು ಅದನ್ನೇ ಎಸೆಯಬೇಕು ಎಂದೆ, ನಂತರ ಆತ ನನಗೆ ಹಿಂತಿರುಗಿಸಿದ. ಹಾಗಾಗಿ, ನಾನು ನನ್ನ ಮೊದಲ ಪ್ರಯತ್ನವನ್ನು ತುಂಬಾ ಆತುರದಿಂದ ಮುಗಿಸಿದ್ದನ್ನು ನೀವು ನೋಡಿರಬಹುದು ಎಂದು ನೀರಜ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಬಹಿರಂಗಪಡಿಸಿದ್ದಾರೆ.
ಇದನ್ನು ಓದಿ : ಕೊನೆಗೂ ಟಾಸ್ ಗೆದ್ದ ಕೊಹ್ಲಿ.. ಇಂಗ್ಲೆಂಡ್ ನೆಲದಲ್ಲಿ ಸತತ ಟಾಸ್ ಸೋಲಿನ ಸರಪಳಿಗೆ ಬ್ರೇಕ್