ಟೋಕಿಯೋ: ಭಾರತದ ಉದಯೋನ್ಮುಖ ಟೆನಿಸ್ ಪ್ಲೇಯರ್ ಸುಮಿತ್ ನಗಾಲ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಶುಭಾರಂಭ ಮಾಡಿದ್ದಾರೆ. 3 ಸೆಟ್ಗಳ ಪಂದ್ಯದಲ್ಲಿ ಡೇನಿಸ್ ಇಸ್ಟೊಮಿನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಪುರುಷರ ಸಿಂಗಲ್ಸ್ನಲ್ಲಿ 25 ವರ್ಷಗಳ ನಂತರ ಗೆಲುವು ಪಡೆದ ಭಾರತೀಯ ಎನಿಸಿಕೊಂಡಿದ್ದಾರೆ.
ನಗಾಲ್ ಉಜ್ಬೆಕಿಸ್ತಾನ ಆಟಗಾರನ ವಿರುದ್ಧ 6-4, 6-7 ಮತ್ತು 6-4ರಲ್ಲಿ ಗೆಲುವು ಪಡೆದರು. ಮೊದಲ ಮತ್ತು 3ನೇ ಸೆಟ್ನಲ್ಲಿ ಸುಲಭ ಜಯ ಪಡೆದರಾದರೂ 2ನೇ ಸೆಟ್ನಲ್ಲಿ ಪೈಪೋಟಿ ನೀಡಿ 6-7ರಲ್ಲಿ ಸೋಲು ಕಂಡಿದ್ದರು.
ಭಾರತೀಯ ಸ್ಟಾರ್ ತಮ್ಮ 2ನೇ ಪಂದ್ಯದಲ್ಲಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಷ್ಯಾದ ಡೇನಿಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ.
1988ರಲ್ಲಿ ಜೀಶಾನ್ ಅಲಿ ಪರುಗ್ವೆ ವಿರುದ್ಧ , 1996ರ ಒಲಿಂಪಿಕ್ಸ್ನಲ್ಲಿ ಭಾರತದ ಲೆಜೆಂಡರಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಒಲಿಂಪಿಕ್ಸ್ ಸಿಂಗಲ್ಸ್ನಲ್ಲಿ ಗೆಲುವು ಸಾಧಿಸಿದ್ದರು. ಪೇಸ್ ಟೆನಿಸ್ನಲ್ಲಿ ಪದಕ(ಕಂಚು) ಗೆದ್ದಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ಪೇಸ್ ಐತಿಹಾಸಿಕ ಪದಕ ಗೆದ್ದನಂತರ ಭಾರತದ ಯಾವೊಬ್ಬ ಆಟಗಾರ ಒಂದು ಜಯ ಸಾಧಿಸಲು ಸಾಧ್ಯವಾಗಿಲ್ಲ.
2012ರಲ್ಲಿ ಸೋಮದೇವ್ ದೇವವರ್ಮನ್ ಮತ್ತು ವಿಷ್ಣು ವರ್ಧನ್ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರಾದರೂ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಲು ವಿಫಲರಾಗಿದ್ದರು.