ETV Bharat / sports

ಬಾಕ್ಸರ್​ಗಳಿಗೆ ವೇದಿಕೆ ಕಲ್ಪಿಸಲು ಲಾಸ್​ ವೇಗಾಸ್​ ಬಾಕ್ಸಿಂಗ್​ ಜೊತೆಗೆ ಕೈಜೋಡಿಸಿದ ಮಿಜೋರಾಂ ಸರ್ಕಾರ - ಮಿಜೋರಾಂ ಬಾಕ್ಸರ್ ಲಾಲ್ರಿನ್ಸಂಗ ತ್ಲೌ

8 ಸುತ್ತುಗಳ WBC ಯೂತ್​ ವರ್ಲ್ಡ್​ ಸೂಪರ್​ ಹೆವಿವೇಟ್​ ಟೈಟಲ್​ ಅನ್ನು ಮಿಜೋರಾಮ್​ನ 21 ವರ್ಷದ ಬಾಕ್ಸರ್​ ಲಾಲ್ರಿನ್ಸಂಗ ತ್ಲೌ ಗೆದ್ದ ಮೇಲೆ ಮಿಜೋರಾಂ ಕ್ರೀಡಾ ಸಚಿವಾಲಯ ಬಾಕ್ಸಿಂಗ್ ಕ್ರೀಡೆಯನ್ನು ಉತ್ತೇಜಿಸಲು ಮುಂದಾಗಿದೆ.

Mizoram to linkup Las Vegas with State boxers
ಲಾಸ್​ ವೇಗಾಸ್​ ಬಾಕ್ಸಿಂಗ್​ ಜೊತೆಗೆ ಕೈಜೋಡಿಸಿದ ಮಿಜೋರಾಂ ಸರ್ಕಾರ
author img

By

Published : Aug 10, 2021, 9:01 PM IST

ನವದೆಹಲಿ: ಮಿಜೋರಾಂ ಸರ್ಕಾರ ಬಾಕ್ಸಿಂಗ್​ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಲಾಸ್ ವೇಗಾಸ್ ವೃತ್ತಿಪರ ಬಾಕ್ಸಿಂಗ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಈಶಾನ್ಯ ಭಾಗದ ಪ್ರತಿಭಾವಂತ ಬಾಕ್ಸರ್‌ಗಳು ವಿಶ್ವವಿಖ್ಯಾತ ಲಾಸ್ ವೇಗಾಸ್ ಬಾಕ್ಸಿಂಗ್ ಕ್ಲಬ್‌ಗಳಲ್ಲಿ ತಮ್ಮ ಕೌಶಲ್ಯ ತೋರಿಸಲು ಉತ್ತಮ ಅವಕಾಶ ದೊರೆಯುವ ಸಾಧ್ಯತೆಯಿದೆ.

ನಾನು ವೃತ್ತಿಪರ ಬಾಕ್ಸಿಂಗ್ ಅನ್ನು ಪ್ರೋತ್ಸಾಹಿಸುತ್ತೇನೆ. ನಾವು ಲಾಸ್ ವೇಗಾಸ್ ವೃತ್ತಿಪರ ಬಾಕ್ಸಿಂಗ್ ಜೊತೆಯಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದೇವೆ ಎಂದು ರಾಜ್ಯದ ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಲಾಸ್ ವೇಗಾಸ್ ಕ್ಲಬ್​ಗಳಲ್ಲಿ ಬಾಕ್ಸಿಂಗ್ ಆಡಬೇಕು ಎಂಬುದು ಪ್ರತಿಯೊಬ್ಬ ಬಾಕ್ಸರ್​ನ ಕನಸು. ಎಲ್ಲ ಇತರ ಕ್ರೀಡೆಗಳಿಗೆ ಒಂದೊಂದು ದೇಶವೂ ತವರಾಗಿದೆ. ಹಾಗೆಯೇ ಜಗತ್ತಿನಾದ್ಯಂತ ಬಾಕ್ಸಿಂಗ್‌ ಕ್ರೀಡೆಗೆ ಲಾಸ್ ವೇಗಾಸ್ ಪ್ರಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಾಕ್ಸಿಂಗ್‌ನ ಪ್ರಚಾರ ಮಾಡುವುದು ಮಿಜೋರಾಂ ಸರ್ಕಾರದ ಏಕೈಕ ಗುರಿಯಲ್ಲ. ರಾಜ್ಯ ಸರ್ಕಾರವು ಕ್ರೀಡೆಯನ್ನು ಒಂದು ಉದ್ಯಮವಾಗಿ ಉತ್ತೇಜಿಸುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರವು ಕ್ರೀಡೆಯನ್ನು ಉದ್ಯಮವನ್ನಾಗಿಸುವ ಬಗ್ಗೆ ಮಾತನಾಡುತ್ತಿತ್ತು. ಆದರೆ, ಮಿಜೋರಾಂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಏಕೆಂದರೆ ನಾವು ಈಗಾಗಲೇ ಕ್ರೀಡೆಯನ್ನು ಉದ್ಯಮವಾಗಿ ಘೋಷಿಸಿದ್ದೇವೆ. ಪ್ರಸ್ತುತ, ನಾವು ಕ್ರೀಡಾ ಉದ್ಯಮ ಉತ್ತೇಜಿಸುವ ಯೋಜನೆಗಳನ್ನು ಅನುಸರಿಸುತ್ತಿದ್ದೇವೆ " ಎಂದು ರಾಯ್ಟೆ ಹೇಳಿದ್ದಾರೆ.

8 ಸುತ್ತುಗಳ WBC ಯೂತ್​ ವರ್ಲ್ಡ್​ ಸೂಪರ್​ ಹೆವಿವೇಟ್​ ಟೈಟಲ್​ ಅನ್ನು ಮಿಜೋರಾಂ 21 ವರ್ಷದ ಬಾಕ್ಸರ್​ ಲಾಲ್ರಿನ್ಸಂಗ ತ್ಲೌ ಗೆದ್ದ ಮೇಲೆ ಮಿಜೋರಾಮ್ ಕ್ರೀಡಾ ಸಚಿವಾಲಯ ಬಾಕ್ಸಿಂಗ್ ಕ್ರೀಡೆ ಉತ್ತೇಜಿಸಲು ಮುಂದಾಗಿದೆ.

ಇದನ್ನು ಓದಿ: ಒಲಿಂಪಿಕ್ಸ್​ ವೇಳೆ ಅಶಿಸ್ತಿನ ವರ್ತನೆ : ವಿನೇಶ್ ಫೋಗಟ್​ರನ್ನು ಅಮಾನತು ಮಾಡಿದ Wfi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.