ಬರ್ಮಿಂಗ್ಹ್ಯಾಮ್(ಲಂಡನ್): ಟೋಕಿಯೋ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಇದೀಗ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಮಿಂಚು ಹರಿಸಿದ್ದಾರೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೇ ಹಾಗೂ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಮೊದಲ ಸುತ್ತಿನಲ್ಲಿ 88 ಕೆಜಿ ಭಾರ ಎತ್ತಿದ್ದ ಚಾನು, ಎರಡನೇ ಸುತ್ತಿನಲ್ಲಿ113 ಕೆಜಿ ಭಾರತ ಎತ್ತಿ 12 ಕೆಜಿ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯದಾಗಿ ಚಿನ್ನಕ್ಕೆ ಮುತ್ತಿಕ್ಕುವಯಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕದ ಭರವಸೆ ಮೂಡಿಸಿದ್ದ ಮೀರಾಬಾಯಿ ಚಾನು ಇದೀಗ 49 ಕೆಜಿ ವೇಟ್ ಲಿಫ್ಟಿಂಗ್ನಲ್ಲಿ ಮೊದಲ ಸ್ಥಾನ ಗಳಿಸಿದ್ದ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
-
MIRABAI WINS GOLD 🥇@mirabai_chanu wins 1️⃣st Gold & 3️⃣rd Medal for 🇮🇳 at @birminghamcg22 🤩🤩 & her 3rd consecutive medal at CWG: 2 🥇1 🥈
— SAI Media (@Media_SAI) July 30, 2022 " class="align-text-top noRightClick twitterSection" data="
The Confident Mira lifted a total of 201 Kg (GR) in the Women's 49kg Finals🏋♂️ at #B2022
Snatch- 88kg (GR)
Clean & Jerk- 113kg (GR)
1/1 pic.twitter.com/kI56gxxIqg
">MIRABAI WINS GOLD 🥇@mirabai_chanu wins 1️⃣st Gold & 3️⃣rd Medal for 🇮🇳 at @birminghamcg22 🤩🤩 & her 3rd consecutive medal at CWG: 2 🥇1 🥈
— SAI Media (@Media_SAI) July 30, 2022
The Confident Mira lifted a total of 201 Kg (GR) in the Women's 49kg Finals🏋♂️ at #B2022
Snatch- 88kg (GR)
Clean & Jerk- 113kg (GR)
1/1 pic.twitter.com/kI56gxxIqgMIRABAI WINS GOLD 🥇@mirabai_chanu wins 1️⃣st Gold & 3️⃣rd Medal for 🇮🇳 at @birminghamcg22 🤩🤩 & her 3rd consecutive medal at CWG: 2 🥇1 🥈
— SAI Media (@Media_SAI) July 30, 2022
The Confident Mira lifted a total of 201 Kg (GR) in the Women's 49kg Finals🏋♂️ at #B2022
Snatch- 88kg (GR)
Clean & Jerk- 113kg (GR)
1/1 pic.twitter.com/kI56gxxIqg
ಕ್ಲೀನ್ ಅಂಡ್ ಜರ್ಕ್‌ನಲ್ಲಿ ದಾಖಲೆಯ ಓಟ ಮುಂದುವರಿಸಿದ ಅವರು ಮೊದಲ ಪ್ರಯತ್ನದಲ್ಲಿ 88, ಎರಡನೇ ಪ್ರಯತ್ನದಲ್ಲಿ 113 ಕೆ.ಜಿ. ಭಾರ ಎತ್ತಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೂರನೇ ಪ್ರಯತ್ನದಲ್ಲಿ 115 ಕೆಜಿ ಎತ್ತಲು ಚಾನು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಇತರೆ ಅಥ್ಲೀಟ್ಸ್ಗಳಿಗಿಂತಲೂ ಮುನ್ನಡೆ ಪಡೆದು ಚಿನ್ನ ಗೆದ್ದಿದ್ದಾರೆ.
ಇದನ್ನೂ ಓದಿರಿ: ಭಾರತೀಯ ವೀರ ಯೋಧರಿಗೆ 'ಬೆಳ್ಳಿ ಪದಕ' ಅರ್ಪಿಸಿದ ಸಂಕೇತ್.. ನೋವಿನ ನಡುವೆ ಮಿಂಚಿದ ಸರ್ಗರ್
ಇಂದಿನ ಫೈನಲ್ ಪಂದ್ಯದಲ್ಲಿ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದ ಚಾನು, ಕಾಮನ್ವೆಲ್ತ್ ಗೆಮ್ಸ್ನಲ್ಲಿ ತಾವು ನಿರ್ಮಾಣ ಮಾಡಿದ್ದ ದಾಖಲೆ ಬ್ರೇಕ್ ಮಾಡಿದ್ದಾರೆ. 2018ರ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಚಾನು, ಇದೀಗ ಮತ್ತೊಮ್ಮೆ ಸ್ವರ್ಣಕ್ಕೆ ಕೊರಳೊಡಿದ್ದಾರೆ. ವೇಟ್ ಲಿಫ್ಟಿಂಗ್ನಲ್ಲಿ ಈಗಾಗಲೇ ಭಾರತದ ಸಂಕೇತ್ ಸರ್ಗರ್ 55 ಕೆಜಿ ಪುರುಷರ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದು, 61 ಕೆಜಿ ವಿಭಾಗದಲ್ಲಿ ಕನ್ನಡಿಗ ಗಿರಿರಾಜ್ ಪೂಜಾರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಪ್ರಧಾನಿ ಮೋದಿ ಅಭಿನಂದನೆ: ಮೀರಾಬಾಯಿ ಚಾನು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಮತ್ತೊಮ್ಮೆ ಹೆಮ್ಮೆ ಪಡುವ ರೀತಿ ಮಾಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಹೊಸ ದಾಖಲೆ ಬರೆದ ನಿಮಗೆ ಧನ್ಯವಾದಗಳು. ಭಾರತದ ಪ್ರತಿಯೊಬ್ಬರು ಸಂತೋಷ ಪಡುವಂತೆ ಮಾಡಿದ್ದಾರೆ. ನಿಮ್ಮೆ ಯಶಸ್ಸು ಹಲವಾರು ಭಾರತೀಯರು ಪ್ರಮುಖವಾಗಿ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.
-
The exceptional @mirabai_chanu makes India proud once again! Every Indian is delighted that she’s won a Gold and set a new Commonwealth record at the Birmingham Games. Her success inspires several Indians, especially budding athletes. pic.twitter.com/e1vtmKnD65
— Narendra Modi (@narendramodi) July 30, 2022 " class="align-text-top noRightClick twitterSection" data="
">The exceptional @mirabai_chanu makes India proud once again! Every Indian is delighted that she’s won a Gold and set a new Commonwealth record at the Birmingham Games. Her success inspires several Indians, especially budding athletes. pic.twitter.com/e1vtmKnD65
— Narendra Modi (@narendramodi) July 30, 2022The exceptional @mirabai_chanu makes India proud once again! Every Indian is delighted that she’s won a Gold and set a new Commonwealth record at the Birmingham Games. Her success inspires several Indians, especially budding athletes. pic.twitter.com/e1vtmKnD65
— Narendra Modi (@narendramodi) July 30, 2022
ಉಳಿದಂತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಮೀರಾಬಾಯಿ ಚಾನು ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.