ಮುಂಬೈ : 2020ನೇ ಸಾಲಿನ ಟೋಕಿಯೋ ಒಲಿಂಪಿಕ್ಸ್ಗಾಗಿ ಈಗಾಗಲೇ ದಿನಗಣನೇ ಆರಂಭಗೊಂಡಿದೆ. ಭಾರತದಿಂದಲೂ ಅನೇಕ ಕ್ರೀಡಾಪಟುಗಳು ಇದರಲ್ಲಿ ಭಾಗಿಯಾಗಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಉದ್ಘಾಟನಾ ಸಮಾರಂಭದಲ್ಲಿ ಭಾರತದ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಮೇರಿ ಕೋಮ್ ಹಾಗೂ ಮನ್ಪ್ರೀತ್ ಮೇಲೆ ಬಿದ್ದಿದೆ.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಹಾಗೂ ಪುರುಷರ ಹಾಕಿ ತಂಡದ ಕ್ಯಾಪ್ಟನ್ ಮನ್ಪ್ರೀತ್ ಸಿಂಗ್ ಭಾರತದ ಧ್ವಜ ಹಿಡಿಯುವ ಅವಕಾಶ ಒದಗಿ ಬಂದಿದೆ.
-
Boxer MC Mary Kom & hockey player Manpreet Singh to be flag bearers of Indian contingent at Tokyo Olympics opening ceremony; wrestler Bajrang Punia to be flag bearer of the contingent at the closing ceremony
— ANI (@ANI) July 5, 2021 " class="align-text-top noRightClick twitterSection" data="
(file photos) pic.twitter.com/dciT4EBS0U
">Boxer MC Mary Kom & hockey player Manpreet Singh to be flag bearers of Indian contingent at Tokyo Olympics opening ceremony; wrestler Bajrang Punia to be flag bearer of the contingent at the closing ceremony
— ANI (@ANI) July 5, 2021
(file photos) pic.twitter.com/dciT4EBS0UBoxer MC Mary Kom & hockey player Manpreet Singh to be flag bearers of Indian contingent at Tokyo Olympics opening ceremony; wrestler Bajrang Punia to be flag bearer of the contingent at the closing ceremony
— ANI (@ANI) July 5, 2021
(file photos) pic.twitter.com/dciT4EBS0U
ಸಮಾರೋಪ ಸಮಾರಂಭಕ್ಕೆ ಕುಸ್ತಿಪಟು ಬಜರಂಗ್ ಪೂನಿಯಾ ಧ್ವಜಧಾರಿಯಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್ಸ್ ಅಸೋಷಿಯೇಷನ್ ಮಾಹಿತಿ ಹಂಚಿಕೊಂಡಿದೆ. ಈ ಹಿಂದೆ 2016ರ ರಿಯೋ ಒಲಿಂಪಿಕ್ಸ್ ವೇಳೆ ಶೂಟರ್ ಅಭಿನವ್ ಬಿಂದ್ರಾ ಭಾರತದ ಧ್ವಜ ಹಿಡಿದುಕೊಂಡಿದ್ದರು.
ಇದನ್ನೂ ಓದಿರಿ: ಪಕ್ಷಿಯ ಕಳೇಬರದ ಅಂತ್ಯಕ್ರಿಯೆ ನಡೆಸುತ್ತಿದೆ ಶ್ವಾನ! ಈ ವಿಡಿಯೋ ನೋಡಿ
ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಗೊಳ್ಳಲಿದೆ. ಇದರಲ್ಲಿ ಭಾರತದ 100ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗಿಯಾಗುತ್ತಿದ್ದು, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.