ETV Bharat / sports

ಮೇರಿಕೋಮ್​ ಲೆಜೆಂಡ್, ನಿಖಾತ್​ ಝರೀನ್​ ಅದ್ಭುತ ಬಾಕ್ಸರ್​: ವಿವಾದವನ್ನು ತಣ್ಣಗಾಗಿಸಿದ ಕ್ರೀಡಾ ಸಚಿವ - ಮೇರಿಕೋಮ್​ ಲೆಜೆಂಡ್ ಬಾಕ್ಸರ್

ಯುವ ಬಾಕ್ಸರ್​ ನಿಖಾತ್​ ಝರೀನ್​ರನ್ನು ಮಣಿಸಿ ಒಲಿಂಪಿಕ್​ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದ 6 ಬಾರಿಯ ವಿಶ್ವ ಚಾಂಪಿಯನ್​ ಮೇರಿಕೋಮ್​ ಹಾಗೂ ನಿಖಾತ್​ ಝರೀನ್​ ಇಬ್ಬರು ಭಾರತದ ಹೆಮ್ಮೆಯ ಬಾಕ್ಸರ್​ಗಳು ಎಂದು ಕ್ರೀಡಾ ಸಚಿವ ಕಿರಣ್​ ರಿಜಿಜು ತಿಳಿಸಿದ್ದಾರೆ.

Mary Kom vs Nikhat Zareen
Mary Kom vs Nikhat Zareen
author img

By

Published : Dec 30, 2019, 2:08 PM IST

ನವದೆಹಲಿ: ಯುವ ಬಾಕ್ಸರ್​ ನಿಖಾತ್​ ಝರೀನ್​ರನ್ನು ಮಣಿಸಿ ಒಲಿಂಪಿಕ್​ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದ 6 ಬಾರಿಯ ವಿಶ್ವ ಚಾಂಪಿಯನ್​ ಮೇರಿಕೋಮ್​ ಹಾಗೂ ನಿಖಾತ್​ ಝರೀನ್​ ಇಬ್ಬರು ಭಾರತದ ಹೆಮ್ಮೆಯ ಬಾಕ್ಸರ್​ಗಳು ಎಂದು ಕ್ರೀಡಾ ಸಚಿವ ಕಿರಣ್​ ರಿಜಿಜು ಟ್ವೀಟ್​ ಮೂಲಕ ತಿಳಿಸಿದ್ದಾರೆ.

"ಮೇರಿಕೋಮ್​ ಲೆಜೆಂಡ್​ ​ಬಾಕ್ಸರ್​, ವಿಶ್ವ ಹವ್ಯಾಸಿ ಬಾಕ್ಸಿಂಗ್​ನಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ. ಅದೇ ರೀತಿ ಯುವ ಬಾಕ್ಸರ್​ ನಿಖಾತ್​ ಝರೀನ್​ ಕೂಡ ಮೇರಿಕೋಮ್​ರನ್ನು ಹಿಂಬಾಲಿಸುತ್ತಿದ್ದಾರೆ, ಭಾರತ ಇಬ್ಬರನ್ನು ಸಮಾನವಾಗಿ ಗೌರವಿಸುತ್ತದೆ" ಎಂದು ಟ್ವೀಟ್​ ಮಾಡಿ ಮೇರಿ ಕೋಮ್​ ಮತ್ತು ನಿಖಾತ್​ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

  • Too much of issues are created on this! Mary Kom is a legend who has achieved what no other boxer has ever achieved in the World Amateur Boxing. Nikhat Zareen is an amazing boxer who has the potential to follow the footsteps of Mary Kom. India is proud of both of them. Period... https://t.co/f5enVqwIaj

    — Kiren Rijiju (@KirenRijiju) December 30, 2019 " class="align-text-top noRightClick twitterSection" data=" ">

ಒಲಿಂಪಿಕ್​ ಟ್ರಯಲ್ಸ್​ನಲ್ಲಿ ಮೇರಿಕೋಮ್​ ನಿಖಾತ್​ರನ್ನು ಮಣಿಸಿದ ನಂತರ ಹಸ್ತಲಾಘವ ಮಾಡದೇ ಹೋಗಿದ್ದರು. ಅಲ್ಲದೆ ಹಿರಯ ಬಾಕ್ಸರ್​ ಎನ್ನುವುದನ್ನು ಮರೆದು ತಮಗೆ ಅಗೌರವ ತೋರಿದ ನಿಖಾತ್​ ನಾನೇಕೆ ಗೌರವ ಕೊಡಲಿ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಪ್ರತಿಕ್ರಿಯೆ ನೀಡಿದ ನಿಖಾತ್​, ನಾನು ಮೇರಿ ಕೋಮ್​ ವಿರುದ್ಧ ಹೋರಾಟ ಮಾಡಲಿಲ್ಲ, ವ್ಯವಸ್ಥೆ ವಿರುದ್ಧ ನನ್ನ ಹೋರಾಟವಾಗಿತ್ತು. ಆದರೆ ಮೇರಿಕೋಮ್​ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ನಾನು ಅದನ್ನು ಊಹೆ ಕೂಡ ಮಾಡಿರಲಿಲ್ಲ. ನನ್ನ ಅವಕಾಶಕ್ಕಾಗಿ ನಾನು ಹೋರಾಟ ಮಾಡಿದೆ ಹೊರೆತು, ಮೇರಿಕೋಮ್​ ಅಥವಾ ಫೆಡರೇಷನ್​ ವಿರುದ್ಧ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.