ಉಲಾನ್ ಉದೆ(ರಷ್ಯಾ):ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಂಜುರಾಣಿ ಫೈನಲ್ ಪ್ರವೇಶಿಸುವ ಮೂಲಕ ಬೆಳ್ಳಿಪದಕ ಖಚಿತಪಡಿಸಿದ್ದಾರೆ.
48ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಬಾಕ್ಸರ್ ಮಂಜು ರಾಣಿ ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡಿನ ಚುತಮಾತ್ ರಾಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದಾರ. ಈ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.
ಇದಕ್ಕೂ ಮುನ್ನ ನಡೆದ 51 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಟರ್ಕಿ ಬಾಕ್ಸರ್ ಎದುರು ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ, ಹರಿಯಾಣ ಮೂಲದ ಮಂಜುರಾಣಿ ಥಾಯ್ ಬಾಕ್ಸರ್‌ಗೆ ಪಂಚ್ ನೀಡಿ ಫೈನಲ್ ಪ್ರವೇಶಿಸಿದ್ದಾರೆ.
-
Manju scripts HISTORY!🔥
— Boxing Federation (@BFI_official) October 12, 2019 " class="align-text-top noRightClick twitterSection" data="
First 🇮🇳 women boxer after 18 years to reach the finals of #AIBAWorldBoxingChampionship on debut. @MangteC in 2001 had reached the finals.
Defeated 🇹🇭 WC 🥉medallist Chuthamat Raksat 4⃣-1⃣ to seal her berth in the 48kg. #PunchMeinHiaDum#GoforGold pic.twitter.com/86eREkMAtt
">Manju scripts HISTORY!🔥
— Boxing Federation (@BFI_official) October 12, 2019
First 🇮🇳 women boxer after 18 years to reach the finals of #AIBAWorldBoxingChampionship on debut. @MangteC in 2001 had reached the finals.
Defeated 🇹🇭 WC 🥉medallist Chuthamat Raksat 4⃣-1⃣ to seal her berth in the 48kg. #PunchMeinHiaDum#GoforGold pic.twitter.com/86eREkMAttManju scripts HISTORY!🔥
— Boxing Federation (@BFI_official) October 12, 2019
First 🇮🇳 women boxer after 18 years to reach the finals of #AIBAWorldBoxingChampionship on debut. @MangteC in 2001 had reached the finals.
Defeated 🇹🇭 WC 🥉medallist Chuthamat Raksat 4⃣-1⃣ to seal her berth in the 48kg. #PunchMeinHiaDum#GoforGold pic.twitter.com/86eREkMAtt
ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ಶಿಪ್ ಸ್ಪರ್ಧಿಸಿರುವ ಮಂಜು ರಾಣಿ ಭಾನುವಾರ ನಡೆಯುವ ಫೈನಲ್ಸ್ ಪಂದ್ಯದಲ್ಲಿ ರಷ್ಯಾದ ಎರಡನೇ ಶ್ರೇಯಾಂಕದ ಎಕಟೆರಿನಾ ಪಾಲ್ಟ್ಸೆವಾ ಅವರನ್ನು ಎದುರಿಸಲಿದ್ದಾರೆ. ಮಂಜುರಾಣಿ ಪದಾರ್ಪಣೆ ಟೂರ್ನಿಯಲ್ಲಿ 18 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 2001ರಲ್ಲಿ 6 ಬಾರಿಯ ವಿಶ್ವಚಾಂಪಿಯನ್ ಆಗಿರುವ ಮೇರಿ ಕೋಮ್ ಕೂಡ ಪದಾರ್ಪಣೆ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು.