ETV Bharat / sports

WTT Contender​: ಮಹಿಳಾ ಡಬಲ್ಸ್​ನಲ್ಲಿ ಚಿನ್ನ ಗೆದ್ದ ಮನಿಕಾ ಬಾತ್ರಾ-ಅರ್ಚನಾ ಕಾಮತ್​ - ಚೀನಾದ ಲಿಯು ವೈಶನ್ ಮತ್ತು ವಾಂಗ್ ಯಿದಿ

ಫೈನಲ್​ನಲ್ಲಿ ಭಾರತೀಯ ಜೋಡಿ ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಪೋರ್ಟೋ ರಿಕಾದ ಮೆಲಾನಿಯಾ ಡಿಯಾಜ್​ ಮತ್ತು ಆ್ಯಂಡ್ರಿಯಾನ ಡಿಯಾಜ್​ ಸಹೋದರಿಯರ ವಿರುದ್ಧ 3-0 ಯಲ್ಲಿ ಮಣಿಸುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದರು.

WTT Contender
ಚಿನ್ನ ಗೆದ್ದ ಮನಿಕಾ ಬಾತ್ರಾ-ಅರ್ಚನಾ ಕಾಮತ್​
author img

By

Published : Nov 7, 2021, 9:12 PM IST

ಲಾಸ್ಕೊ(ಸ್ಲೋವೇನಿಯಾ): ಭಾರತದ ಮಹಿಳಾ ಡಬಲ್ಸ್​ ಜೋಡಿ ಮನಿಕಾ ಬಾತ್ರಾ ಮತ್ತು ಅರ್ಚನಾ ಕಾಮತ್ ಲಾಸ್ಕೋದಲ್ಲಿ ನಡೆಯುತ್ತಿರುವ ವರ್ಲ್ಡ್​ ಟೇಬಲ್​ ಟೆನ್ನಿಸ್ ​(WTT) ಕಂಟೆಂಡರ್​ 2021ರಲ್ಲಿ ಚಾಂಪಿನ್​ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ಫೈನಲ್​ನಲ್ಲಿ ಭಾರತೀಯ ಜೋಡಿ ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಪೋರ್ಟೋ ರಿಕಾದ ಮೆಲಾನಿಯಾ ಡಿಯಾಜ್​ ಮತ್ತು ಆ್ಯಂಡ್ರಿಯಾನ ಡಿಯಾಜ್​ ಸಹೋದರಿಯರ ವಿರುದ್ಧ 3-0 ಯಲ್ಲಿ ಮಣಿಸುವ ಮೂಲಕ ಚಾಂಪಿಯನ್​ ಆದರು.

ಮನಿಕಾ-ಅರ್ಚನಾ ಜೋಡಿ ಸೆಮಿಫೈನಲ್​ನಲ್ಲಿ ಚೀನಾದ ಲಿಯು ವೈಶನ್ ಮತ್ತು ವಾಂಗ್ ಯಿದಿ ಅವರನ್ನು 3-2 ರಿಂದ ಸೋಲಿಸಿ ಫೈನಲ್​ ಪ್ರವೇಶಿಸಿದ್ದರು.

ಶನಿವಾರ ಸಿಂಗಲ್ಸ್​ನಲ್ಲಿ ಸೆಮಿಫೈನಲ್ಸ್​ನಲ್ಲಿ ಸೋಲುವ ಮೂಲಕ ಮನಿಕಾ ಬಾತ್ರ ಕಂಚಿನ ಪದಕ ಪದಕ ಪಡೆದುಕೊಂಡಿದ್ದರು. ಅವರು ಚೀನಾದ ವಾಂಗ್ ಯಿದಿ ವಿರುದ್ಧ 2-4ರಲ್ಲಿ ಸೋಲು ಕಂಡಿದ್ದರು. ಇದೀಗ ಡಬಲ್ಸ್​ನಲ್ಲಿ ಚಿನ್ನದ ಪದಕ ಪಡೆಯುವಲ್ಲಿ ಸಫಲರಾಗಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ಐಸಿಸಿ ಟೂರ್ನಮೆಂಟ್​ನಲ್ಲಿ ನಾಕೌಟ್ ಪ್ರವೇಶಿಸಲು ಭಾರತ ವಿಫಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.