ನವದೆಹಲಿ: ಬೀಜಿಂಗ್ನಲ್ಲಿ ನಡೆದ 2008ರ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ನಾನು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೆ ಎಂದು ಭಾರತದ ಶ್ರೇಷ್ಠ ಒಲಿಂಪಿಯನ್ ಅಭಿನವ್ ಬಿಂದ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
-
In conversation with India’s ace shooter, @Abhinav_Bindra, who shares that the path to glory is never easy on both physical and mental health. Catch him in an exclusive interview with @samirkochhar only on Mind Matters #HealthInsideOut.
— @Future_Generali (@Future_Generali) May 10, 2021 " class="align-text-top noRightClick twitterSection" data="
Watch now - https://t.co/rfw9XBQNX6
">In conversation with India’s ace shooter, @Abhinav_Bindra, who shares that the path to glory is never easy on both physical and mental health. Catch him in an exclusive interview with @samirkochhar only on Mind Matters #HealthInsideOut.
— @Future_Generali (@Future_Generali) May 10, 2021
Watch now - https://t.co/rfw9XBQNX6In conversation with India’s ace shooter, @Abhinav_Bindra, who shares that the path to glory is never easy on both physical and mental health. Catch him in an exclusive interview with @samirkochhar only on Mind Matters #HealthInsideOut.
— @Future_Generali (@Future_Generali) May 10, 2021
Watch now - https://t.co/rfw9XBQNX6
ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ವೈಯಕ್ತಿಕ ಚಿನ್ನ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಬಿಂದ್ರಾ ಅವರು ಪಾತ್ರರಾಗಿದ್ದಾರೆ.
ನೀವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೀರಾ? ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬಿಂದ್ರಾ, ನಾನು ಕ್ರೀಡಾ ಕ್ಷೇತ್ರದಲ್ಲಿ ಸುದೀರ್ಘ ಜೀವನ ಕಳೆದಿದ್ದೇನೆ. ಈ ನಡುವೆ ಆನೇಕ ಏರಿಳಿತಗಳನ್ನೂ ಅನುಭವಿಸಿದ್ದೇನೆ. ಜೀವನದ ಅತಿದೊಡ್ಡ ಸಂಭ್ರಮ ನನ್ನ ಪಾಲಿಗೆ ಒದಗಿ ಬಂದ ಬಳಿಕ ಮಾನಸಿಕವಾಗಿ ಕುಗ್ಗಿ ಹೋದೆ. ಈ ವೇಳೆ ನನ್ನನ್ನು ಹಲವರು ಟೀಕಿಸಿದರು. ಗೆದ್ದಾಗ ಮಾನಸಿಕವಾಗಿ ಕುಗ್ಗುವ ಈತ ವೈಫಲ್ಯಗಳನ್ನು ಹೇಗೆ ಎದುರಿಸಬಹುದು? ಎಂದು ಮಾತನಾಡಿದರು. ಬಹುಶಃ ಯಶಸ್ಸನ್ನು ನಿರ್ವಹಿಸುವುದು ನನ್ನ ಜೀವನದಲ್ಲಿ ಅತ್ಯಂತ ಕಠಿಣ ಸಮಯ ಎಂದೆನಿಸುತ್ತದೆ ಎಂದು ಮನದಾಳ ಬಿಚ್ಚಿಟ್ಟರು.
ಇದನ್ನೂ ಓದಿ : ಧೋನಿ ಭಾಯ್ ಮಾರ್ಗದರ್ಶನ ಮಿಸ್ ಮಾಡ್ಕೊಳ್ತಿದೀನಿ: ಕುಲ್ದೀಪ್ ಯಾದವ್
ಬೀಜಿಂಗ್ನಲ್ಲಿ ನಾನು ಜೀವನದ ದೊಡ್ಡ ವಿಜಯವನ್ನು ಪಡೆದಿದ್ದೇನೆ. ಚಿನ್ನದ ಪದಕ ಪಡೆಯಲೇಬೇಕೆಂಬ ಉದ್ದೇಶದಿಂದ ಸುಮಾರು 16 ವರ್ಷಗಳ ಕಾಲ ಒಂದೇ ಗುರಿ, ಒಂದೇ ಚಲದಿಂದ ತರಬೇತಿ ಪಡೆದಿದ್ದೆ ಎಂದು ಹಳೆಯ ದಿನಗಳನ್ನು ಬಿಂದ್ರಾ ನೆನಪಿಸಿಕೊಂಡರು.
ಒಂದು ಸುಂದರ ದಿನ, ನಾನು ನನ್ನ ಗುರಿಯನ್ನು ಯಶಸ್ವಿಯಾಗಿ ತಲುಪಿಸಿತು. ಅದಾದ ಬಳಿಕ, ನಾನು ಮಾನಸಿಕವಾಗಿ ಕುಗ್ಗಿಹೋದೆ, ಖಿನ್ನತೆಗೆ ಒಳಗಾಗಿದೆ. ಅದರಿಂದ ಹೊರ ಬರುವುದು ನನಗೆ ದೊಡ್ಡ ಸವಾಲೇ ಆಗಿತ್ತು. ಮುಂದೇನು ಮಾಡಬೇಕೆಂದು ಆಗ ನನಗೆ ಗೊತ್ತಾಗಿರಲಿಲ್ಲ ಎಂದು ಬಿಂದ್ರಾ ಹೇಳುತ್ತಾರೆ.