ETV Bharat / sports

ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಮೆಸ್ಸಿ ಮೋಡಿ; ಪೆರು ವಿರುದ್ಧ ಗೆದ್ದ ಅರ್ಜೆಂಟೀನಾ - ಅರ್ಜೆಂಟೀನಾ ತಂಡ

ಅರ್ಜೆಂಟೀನಾದ ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಪೆರು ವಿರುದ್ಧ ಎರಡು ಗೋಲು ಗಳಿಸುವ ಮೂಲಕ ಬಾರ್ಸಿಲೋನಾದ ಮಾಜಿ ಸಹ ಆಟಗಾರ ಲೂಯಿಸ್ ಸೌರೆಜ್ ಅವರ ದಾಖಲೆಯನ್ನು ಹಿಂದಿಕ್ಕಿದರು.

Lionel Messi strikes twice in Argentina's 2-0 victory over Peru in 2026 World Cup qualifiying match
FIFA ವಿಶ್ವಕಪ್ ಅರ್ಹತಾ ಪಂದ್ಯ
author img

By ETV Bharat Karnataka Team

Published : Oct 18, 2023, 3:54 PM IST

ಪೆರು: ಅರ್ಜೆಂಟೀನಾ ತಂಡವು ಎರಡು ಗೋಲುಗಳ ನೆರವಿನಿಂದ 2026ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪೆರು ವಿರುದ್ಧ ವಿಜಯ ಸಾಧಿಸಿತು. ಲಿಮಾದ ಎಸ್ಟಾಡಿಯೊ ನ್ಯಾಶನಲ್ ಡಿ ಲಿಮಾದಲ್ಲಿ ಮಂಗಳವಾರ ಪಂದ್ಯ ನಡೆಯಿತು. ಅರ್ಜೆಟೀನಾ 2-0 ಗೋಲುಗಳ ಅಂತರದ ಜಯ ಸಾಧಿಸಿತು. ಸ್ಟಾರ್ ಫುಟ್‌ಬಾಲಿಗ ಲಿಯೋನೆಲ್ ಮೆಸ್ಸಿ ಅವರ ಆಕ್ರಮಣಕಾರಿ ಆಟದ ಫಲವಾಗಿ ತಂಡ ಗೆಲುವಿನ ನಗೆ ಬೀರಿತು.

ಬಲಗಾಲಿನ ಸ್ನಾಯು ಸೆಳೆತದ ಹೊರತಾಗಿಯೂ ಕ್ರೀಡಾಂಗಣಕ್ಕೆ ಇಳಿದಿದ್ದ 36 ವರ್ಷದ ಮೆಸ್ಸಿ, ಎರಡು ಗೋಲು ಗಳಿಸುವ ಮೂಲಕ ಮತ್ತೆ ಹೀರೋ ಆದರು. ತಮ್ಮ ಎಂದಿನ ಆಟದಂತೆ ಆರಂಭದಿಂದ ಕೊನೆಯವರೆಗೂ ಮೈದಾನದಲ್ಲೆಲ್ಲ ಓಡಾಡಿ ಫುಟ್‌ಬಾಲ್ ಅಭಿಮಾನಿಗಳನ್ನು ರಂಜಿಸಿದರು. ಸ್ನಾಯು ಸೆಳೆತದಿಂದ ಮೈದಾನದಿಂದ ದೂರವಿದ್ದ ಮೆಸ್ಸಿ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದರು. ಇದೀಗ ಪೆರು ವಿರುದ್ಧದ ಅವರ ಆಟ ಅಭಿಮಾನಿಗಳನ್ನು ಮತ್ತೆ ಮೋಡಿ ಮಾಡಿತು.

ಮೈದಾನದಲ್ಲಿ ಪಾದರಸದಂತೆ ಚುರುಕಾಗಿ ಓಡಾಡಿದ ಮೆಸ್ಸಿ, ಮಿಡ್‌ಫೀಲ್ಡ್ ದಾಟುವ ಮುನ್ನ ಗೋಲ್ ಲೈನ್‌ನಲ್ಲಿ ಡ್ರಿಬ್ಲಿಂಗ್ ಮಾಡುವಾಗ ಪೆರುವಿನ ಡಿಫೆಂಡರ್ ಎರಡು ಬಾರಿ ಕೆಳಗೆ ಬೀಳುವಂತೆ ಮಾಡಿದರು. ಮೆಸ್ಸಿ ಅದ್ಭುತ ಆಟದ ವೈಖರಿಯನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಪೆರುವಿನ ಡಿಫೆಂಡರ್ ಎರಡು ಗೋಲ್​ಗಳನ್ನು ಬಿಟ್ಟುಕೊಟ್ಟರು. ಅರ್ಜೆಂಟೀನಾ ಗೆಲುವಿಗೆ ಕಾರಣವಾದ ಈ ಎರಡು ಗೋಲುಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

32ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಮೆಸ್ಸಿ, ಕೇವಲ 10 ನಿಮಿಷಗಳ ನಂತರದಲ್ಲಿ ಮತ್ತೊಂದು ಗೋಲು ಹೊಡೆದು ಎದುರಾಳಿ ತಂಡಕ್ಕೆ ಆಘಾತ​ ನೀಡಿದರು. ಕ್ರಮವಾಗಿ 32ನೇ ಮತ್ತು 42ನೇ ನಿಮಿಷಗಳಲ್ಲಿ ಉತ್ತಮ ಸ್ಟ್ರೈಕ್‌ಗಳೊಂದಿಗೆ ತಮ್ಮ ಅಂತರರಾಷ್ಟ್ರೀಯ ಗೋಲುಗಳ ಸಂಖ್ಯೆಯನ್ನು 106ಕ್ಕೆ ತಲುಪಿಸಿದರು.

"ನಮ್ಮ ತಂಡ ಬಲಿಷ್ಠ ಮತ್ತು ಉತ್ಕೃಷ್ಟ ಆಟಗಾರರನ್ನು ಹೊಂದಿದೆ. ಆಟದ ಶೈಲಿ ಕೂಡ ನಮ್ಮ ಇಷ್ಟದಂತೆಯೇ ಇದೆ. ಇದೇ ಹಾದಿಯಲ್ಲಿ ಮುಂದುವರೆಯುತ್ತೇವೆ. ವಿಶ್ವಕಪ್ ಗೆದ್ದ ಬಳಿಕ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಒಗ್ಗಟ್ಟು ಇಮ್ಮಡಿಗೊಂಡಿದೆ. ತಂಡ ಮತ್ತಷ್ಟು ಸದೃಢವಾಗಿದೆ. ನಮ್ಮ ಬೆಳವಣಿಗೆ ಹೀಗೆಯೇ ಮುಂದುವರೆಯುತ್ತದೆ" ಎಂದು ಮೆಸ್ಸಿ ಹೇಳಿದರು.

ಪೆರು ವಿರುದ್ಧದ ಗೆಲುವಿನೊಂದಿಗೆ ಲಿಯೋನೆಲ್ ಮೆಸ್ಸಿ ಮುಂದಾಳತ್ವದ ಅರ್ಜೆಂಟೀನಾ ತಂಡ, ನಾಲ್ಕು ಪಂದ್ಯಗಳ ನಂತರ 12 ಅಂಕಗಳೊಂದಿಗೆ CONMEBOL FIFA ವರ್ಲ್ಡ್ ಕಪ್ 2026ರ ಅರ್ಹತಾ ಪಂದ್ಯದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಿಗಿ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.