ETV Bharat / sports

ಗಾಯದ ಕಾರಣ ವಿಶ್ವಚಾಂಪಿಯನ್​ಶಿಪ್​​ನಿಂದ​ ಬಜರಂಗ್ ಪೂನಿಯಾ ದೂರ - ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬಜರಂಗ್ ಪೂನಿಯಾ ಹೊರಕ್ಕೆ

ಒಲಿಂಪಿಕ್ಸ್​ಗೂ ಮುನ್ನ ರಷ್ಯಾದಲ್ಲಿ ನಡೆದ ಸ್ಪರ್ಧೆಯ ವೇಳೆ ಮಂಡಿ ಗಾಯಕ್ಕೆ ಒಳಗಾಗಿದ್ದರು. ನಂತರ ಸಂಪೂರ್ಣ ಚೇತರಿಕೆಯಾಗದಿದ್ದರೂ ಒಲಿಂಪಿಕ್ಸ್​ನಲ್ಲಿ ಹೋರಾಡಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು. ಇದೀಗ ಗಾಯ ಮತ್ತೆ ಉಲ್ಬಣಗೊಂಡಿದ್ದು, 6 ವಾರಗಳ ಕಾಲ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Bajrang out of worlds
ಬಜರಂಗ್ ಪೂನಿಯಾ
author img

By

Published : Aug 23, 2021, 9:04 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಗಾಯದ ಕಾರಣ ಮುಂಬರುವ ವಿಶ್ವಚಾಂಪಿಯನ್​ಶಿಪ್​ನಿಂದ ಹೊರಗುಳಿಯುವುದಾಗಿ ಸೋಮವಾರ ತಿಳಿಸಿದ್ದಾರೆ.

ಒಲಿಂಪಿಕ್ಸ್​ಗೂ ಮುನ್ನ ರಷ್ಯಾದಲ್ಲಿ ನಡೆದ ಸ್ಪರ್ಧೆಯ ವೇಳೆ ಮಂಡಿ ಗಾಯಕ್ಕೆ ಒಳಗಾಗಿದ್ದರು. ನಂತರ ಸಂಪೂರ್ಣ ಚೇತರಿಕೆಯಾಗದಿದ್ದರೂ ಒಲಿಂಪಿಕ್ಸ್​ನಲ್ಲಿ ಹೋರಾಡಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು. ಇದೀಗ ಗಾಯ ಮತ್ತೆ ಉಲ್ಬಣಗೊಂಡಿದ್ದು, 6 ವಾರಗಳ ಕಾಲ ಪುನಶ್ಚೇತನದಲ್ಲಿರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಹಾಗಾಗಿ ಅಕ್ಟೋಬರ್​ 2ರಿಂದ 10ರವರೆಗೆ ನಾರ್ವೆಯ ಒಲ್ಸಾದಲ್ಲಿ ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​​ ನಡೆಯಲಿದೆ. ಬಜರಂಗ್ ಪೂನಿಯಾ ಪುನಶ್ಚೇತನ ಮುಗಿಯುವವರೆಗೆ ಯಾವುದೇ ತರಬೇತಿ ನಡೆಸಲು ಸಾಧ್ಯ ಇಲ್ಲದೇ ಇರುವುದರಿಂದ ಚಾಂಪಿಯನ್​ಶಿಪ್​ನಿಂದ ಅನಿವಾರ್ಯವಾಗಿ ಹೊರ ಬಂದಿದ್ದಾರೆ.

ಇದು ಮಂಡಿ ಮೂಳೆಗೆ ಸಂಬಂಧಿಸಿದ ಗಾಯವಾಗಿದ್ದು, ನನಗೆ 6 ವಾರಗಳ ವಿಶ್ರಾಂತಿ ತೆಗೆದುಕೊಳ್ಳಲು ಡಾ ದಿನ್ಶಾ ಅವರು ಸೂಚಿಸಿದ್ದಾರೆ. ಹಾಗಾಗಿ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ನಾನು ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಈ ವರ್ಷ ಯಾವುದೇ ರ‍್ಯಾಂಕಿಂಗ್​​ ಸ್ಪರ್ಧೆ ಇಲ್ಲದಿರುವುದರಿಂದ ತಮ್ಮ ವರ್ಷದ ಆವೃತ್ತಿ ಕೂಡ ಮುಗಿದಿದೆ . " ವಿಶ್ವಚಾಂಪಿಯನ್​ಶಿಪ್​ ಮಾತ್ರ ಈ ವರ್ಷದ ಪ್ರಮುಖ ಈವೆಂಟ್​. ಆದ್ದರಿಂದ ನಾನು ಮುಂದಿನ ಯಾವುದೇ ಟೂರ್ನಮೆಂಟ್​ಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಜರಂಗ್ ಹೇಳಿದ್ದಾರೆ.

ಇದನ್ನು ಓದಿ: ಪ್ಯಾರಾ ಅಥ್ಲೀಟ್​ಗಳು ನಿಜ ಜೀವನದ ಹೀರೋಗಳು, ದಯವಿಟ್ಟು ಬೆಂಬಲಿಸಿ: ತೆಂಡೂಲ್ಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.