ETV Bharat / sports

11 ಸೆಕೆಂಡ್​ನಲ್ಲಿ 100 ಮೀಟರ್​ ದೂರವನ್ನು ಬರಿಗಾಲಲ್ಲಿ​ ಓಡಿದ ಹಳ್ಳಿಹೈದನ ನೆರವಿಗೆ ನಿಂತ ಕೇಂದ್ರ ಕ್ರೀಡಾ ಸಚಿವ - ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು

100 ಮೀಟರ್​ ಓಟವನ್ನು 11 ಸೆಕೆಂಡ್​ನಲ್ಲಿ ಪೂರ್ಣಗೊಳಿಸಿದ ಮಧ್ಯಪ್ರದೇಶದ 19 ವರ್ಷದ ಯುವಕನ ನೆರವಿಗೆ ಮಧ್ಯ ಪ್ರದೇಶದ ಮಾಜಿ ಸಿಎಂ ಹಾಗೂ ಕೇಂದ್ರ ಕ್ರೀಡಾ ಸಚಿವರು ಆತನಿಗೆ ಆಥ್ಲೆಟಿಕ್​ ಆಕಾಡೆಮಿಯಲ್ಲಿ ತರಬೇತಿ ನೀಡುವ ಭರವಸೆ ಮೂಡಿಸಿದ್ದಾರೆ.

ರಾಮೇಶ್ವರ್ ಗುರ್ಜಾರ್
author img

By

Published : Aug 17, 2019, 8:57 PM IST

ಭೂಪಾಲ್​: ಮಧ್ಯಪ್ರದೇಶದ 19 ವರ್ಷದ ಯುವಕನೊಬ್ಬ 100 ಮೀಟರ್​ ಓಟವನ್ನು 11 ಸೆಕೆಂಡ್​ನಲ್ಲಿ ಪೂರ್ಣಗೊಳಿಸಿದ್ದು ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಮಾಜಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಈತನಿಗೆ ನೆರೆವನಿ ಹಸ್ತ ಚಾಚಿದ್ದಾರೆ.

ಮಧ್ಯ ಪ್ರದೇಶದ ಶಿವಪುರಿ ಗ್ರಾಮದ 19 ವರ್ಷದ ರಾಮೇಶ್ವರ್ ಗುರ್ಜಾರ್ ಎಂಬ ಯುವಕ 100 ಮೀಟರ್​ ಓಟವನ್ನು ರಸ್ತೆಯಲ್ಲಿ ಬರಿಗಾಲಲ್ಲಿ ಪೂರ್ರಣಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ವಿಡಿಯೋವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದರು.

ಜೊತೆಗೆ ಈ ವಿಡಿಯೋವನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾ ಕಿರಣ್​ ರಿಜಿಜು ಅವರಿಗೆ ಟ್ಯಾಗ್​ ಮಾಡಿ ಇಂತಹ ಸಾಮರ್ಥ್ಯವಿರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಹಾಗೂ ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟರೆ ಅವರು ಇತಿಹಾಸ ನಿರ್ಮಿಸಿಲಿದ್ದಾರೆ ಎಂದು ಬರೆದು ಕೊಂಡಿದ್ದರು.

ಈ ಟ್ವೀಟ್​ಗೆ ತಕ್ಷಣ ಸ್ಪಂಧಿಸಿರುವ ಕ್ರೀಡಾ ಸಚಿವಾ ಕಿರಣ್​ ರಿಜಿಜು ಆ ಯುವಕನನ್ನು ನನ್ನ ಬಳಿ ಕಳುಹಿಸಿಕೊಡಿ. ನಾನು ಆತನಿಗೆ ಅಥ್ಲೆಟಿಕ್​ ಆಕಾಡೆಮಿಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಶಿವರಾಜ್​ ಸಿಂಗ್​ ಚೌಹಾಣ್​ಗೆ ಮರು ಟ್ವೀಟ್​ ಮಾಡಿದ್ದಾರೆ.

ಇನ್ನು ಈ ವಿಡೀಯೋ ವೈರಲ್​ ಆಗುತ್ತಿದ್ದಂತೆ ರಾಜ್ಯ ಸರ್ಕಾರದ ಕ್ರೀಡಾ ಮಂತ್ರಿ ಜಿತು ಪತ್ವಾರಿ ಕೂಡ ಆತನನ್ನು ರಾಜಧಾನಿ ಭೂಪಾಲ್‌ಗೆ ಆಹ್ವಾನಿಸಿ, ಸೂಕ್ತ ತರಬೇತಿ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಆತ ಸೂಕ್ತ ತರಬೇತಿ ಪಡೆದರೆ ಕಂಡಿತ ಕೇವಲ 9 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸಲಿದ್ದಾರೆ ಎಂದು ಗುರ್ಜಾರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • Epaper : खेल मंत्री पटवारी ने ग्रामीण धावक रामेश्वर को बुलाया भोपाल..। pic.twitter.com/dPxtSBPtsR

    — Jitu Patwari Office (@JituP_office) August 14, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.