ಹ್ಯಾಂಗ್‌ಝೌ (ಚೀನಾ): ಅಥ್ಲೆಟಿಕ್ಸ್ನ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೊದಲ ಪದಕವನ್ನು ಗೆದ್ದುಕೊಂಡಿದೆ. ಕಿರಣ್ ಬಲಿಯಾನ್ ಶುಕ್ರವಾರ ಮಹಿಳೆಯರ ಶಾಟ್‌ಪುಟ್‌ನಲ್ಲಿ (ಗುಂಡು ಎಸೆತ) ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಕಿರಣ್ ಅವರ ಮೂರನೇ ಪ್ರಯತ್ನದಲ್ಲಿ 17.36 ಮೀ. ಎಸೆದು ವೈಯುಕ್ತಿಕ ಶ್ರೇಷ್ಠ ದೂರವನ್ನು ದಾಖಲಿಸಿದರು. 1951ರ ನವದೆಹಲಿಯ ಉದ್ಘಾಟನಾ ಆವೃತ್ತಿಯಲ್ಲಿ ಬಾರ್ಬರಾ ವೆಬ್‌ಸ್ಟರ್ ಕಂಚಿನ ಪದಕ ತಂದು ಕೊಟ್ಟ ನಂತರ ಇದು ಭಾರತದ ಮೊದಲ ಮಹಿಳಾ ಶಾಟ್‌ಪುಟ್ ಏಷ್ಯನ್ ಗೇಮ್ಸ್ ಪದಕವಾಗಿದೆ.
-
1⃣st🏅 in #Athletics for 🇮🇳 at #AsianGames2022
— SAI Media (@Media_SAI) September 29, 2023 " class="align-text-top noRightClick twitterSection" data="
Bronze🥉 triumph for Kiran Baliyan & our hearts swell with pride 🤗
Kiran delivered a mighty throw of 17.36 in her 3⃣rd attempt during the Women's Shot Put Final Event to seize this achievement!
Let's keep those medals rolling in!… pic.twitter.com/riOLozUVLz
">1⃣st🏅 in #Athletics for 🇮🇳 at #AsianGames2022
— SAI Media (@Media_SAI) September 29, 2023
Bronze🥉 triumph for Kiran Baliyan & our hearts swell with pride 🤗
Kiran delivered a mighty throw of 17.36 in her 3⃣rd attempt during the Women's Shot Put Final Event to seize this achievement!
Let's keep those medals rolling in!… pic.twitter.com/riOLozUVLz1⃣st🏅 in #Athletics for 🇮🇳 at #AsianGames2022
— SAI Media (@Media_SAI) September 29, 2023
Bronze🥉 triumph for Kiran Baliyan & our hearts swell with pride 🤗
Kiran delivered a mighty throw of 17.36 in her 3⃣rd attempt during the Women's Shot Put Final Event to seize this achievement!
Let's keep those medals rolling in!… pic.twitter.com/riOLozUVLz
ಚೀನಾದ ಲಿಜಿಯಾವೊ ಗಾಂಗ್ ಮತ್ತು ಜಿಯಾಯುವಾನ್ ಸಾಂಗ್ ಕ್ರಮವಾಗಿ 19.58 ಮೀ ಮತ್ತು 18.92 ಮೀ ಸ್ಕೋರ್‌ಗಳೊಂದಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು. ಭಾರತದ ಮನ್‌ಪ್ರೀತ್ ಕೌರ್ 16.25 ಮೀಟರ್ ದೂರ ಎಸೆದು 5ನೇ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಮಹಿಳೆಯರ ಹ್ಯಾಮರ್ ಥ್ರೋ ಫೈನಲ್‌ನಲ್ಲಿ ಭಾರತದ ತಾನ್ಯಾ ಚೌಧರಿ ಮತ್ತು ರಚನಾ ಕುಮಾರಿ ಕ್ರಮವಾಗಿ ಏಳು ಮತ್ತು ಒಂಬತ್ತನೇ ಸ್ಥಾನ ಪಡೆದರು. ತಾನ್ಯಾ 60.50 ಮೀ ದೂರಕ್ಕೆ ಎಸೆದರೆ, ರಚನಾ 58.13 ಮೀ. ಚೀನಾದ ಜೆಂಗ್ ವಾಂಗ್ ಮತ್ತು ಜೀ ಝಾವೊ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರೆ, ದಕ್ಷಿಣ ಕೊರಿಯಾದ ತಹೂಯಿ ಕಿಮ್ ಕಂಚು ಗೆದ್ದರು. ಝೆಂಗ್ ವಾಂಗ್ 71.53 ಮೀಟರ್ ಎಸೆದರೆ, ಜೀ ಜಾವೊ 69.44 ಮೀಟರ್ ಎಸೆದು ಎರಡನೇ ಸ್ಥಾನ ಪಡೆದುಕೊಂಡರು.
-
Update: Athletics at #AsianGames2022☑️
— SAI Media (@Media_SAI) September 29, 2023 " class="align-text-top noRightClick twitterSection" data="
In Men's 400m Heats, 🇮🇳's Muhammed Ajmal clocked 45.76s to Q for the Finals.
Meanwhile, compatriot Muhammed Anas finished 3⃣rd in his heat with time of 46.29, thus failing to be in the top 8 qualifiers.
💪🏻👏👏#Cheer4India 🇮🇳#HallaBol… pic.twitter.com/d4GPD782k5
">Update: Athletics at #AsianGames2022☑️
— SAI Media (@Media_SAI) September 29, 2023
In Men's 400m Heats, 🇮🇳's Muhammed Ajmal clocked 45.76s to Q for the Finals.
Meanwhile, compatriot Muhammed Anas finished 3⃣rd in his heat with time of 46.29, thus failing to be in the top 8 qualifiers.
💪🏻👏👏#Cheer4India 🇮🇳#HallaBol… pic.twitter.com/d4GPD782k5Update: Athletics at #AsianGames2022☑️
— SAI Media (@Media_SAI) September 29, 2023
In Men's 400m Heats, 🇮🇳's Muhammed Ajmal clocked 45.76s to Q for the Finals.
Meanwhile, compatriot Muhammed Anas finished 3⃣rd in his heat with time of 46.29, thus failing to be in the top 8 qualifiers.
💪🏻👏👏#Cheer4India 🇮🇳#HallaBol… pic.twitter.com/d4GPD782k5
400 ಮೀ ಓಟದಲ್ಲಿ ಫೈನಲ್‌ಗೆ ಭಾರತ: ಐಶ್ವರ್ಯ ಮಿಶ್ರಾ, ಮುಹಮ್ಮದ್ ಅಜ್ಮಲ್ 400ಮೀ ಫೈನಲ್‌ಗೆ ತಲುಪಿದ್ದಾರೆ. 400 ಮೀಟರ್ ರೌಂಡ್ 1 ರಲ್ಲಿ ಭಾರತದ ಓಟಗಾರ್ತಿ ಐಶ್ವರ್ಯಾ ಮಿಶ್ರಾ ತಮ್ಮ ವರ್ಷದ ಅತ್ಯುತ್ತಮ ಸಮಯವನ್ನು ದಾಖಲಿಸಿದ್ದಾರೆ. 52.73 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿದ ಅವರು ಒಟ್ಟಾರೆ ಮೂರನೇ ಸ್ಥಾನ ಪಡೆದು ಫೈನಲ್‌ನಲ್ಲಿ ಸ್ಥಾನ ಪಡೆದರು. ಭಾರತೀಯ ಕಾಲಮಾನ ನಾಳೆ 5:30ಕ್ಕೆ ಫೈನಲ್ ಸ್ಪರ್ಧೆ ನಡೆಯಲಿದೆ. ಹಿಮಾಂಶಿ ಮಲಿಕ್ ಅದೇ ಸ್ಪರ್ಧೆಯಲ್ಲಿ 15ನೇ ಶ್ರೇಯಾಂಕದ ನಂತರ 57.82 ಸೆಕೆಂಡ್‌ಗಳಲ್ಲಿ ಕ್ರಮಿಸಿ ಫೈನಲ್‌ಗೆ ಪ್ರವೇಶಿಸಲು ವಿಫಲರಾದರು. ಪುರುಷರ 400 ಮೀ ಮೊದಲ ಸುತ್ತಿನಲ್ಲಿ, ಮುಹಮ್ಮದ್ ಅಜ್ಮಲ್ 45.76 ಸಮಯದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ.
ಪ್ರಜ್ಞಾನಂದ ಶುಭಾರಂಭ: ಚದುರಂಗದ ವಿಶ್ವಕಪ್ನ ರನ್ನರ್ ಅಪ್ ಆಟಗಾರ ಚತುರ ನಡೆಯ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ರಮೇಶಬಾಬು ಪ್ರಜ್ಞಾನಂದ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾದ ಬಚುಲುನ್ ತ್ಸೆಗ್ಮೆಡ್ ವಿರುದ್ಧ ಜಯಗಳಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಸುತ್ತಿನಲ್ಲಿ 1 ರಲ್ಲಿ ಭಾರತವು 3.5 ಅಂಕಗಳನ್ನು ಗಳಿಸಿದರೆ, ಮಂಗೋಲಿಯಾ 0.5 ಅಂಕ ಪಡೆದುಕೊಂಡಿದೆ.
-
Update: #Squash at #AsianGames2022
— SAI Media (@Media_SAI) September 29, 2023 " class="align-text-top noRightClick twitterSection" data="
SEMI-FINALS: Conquered💪🏻
The men's team comprising of @SauravGhosal , @sandhu_harinder, @maheshmangao and @abhaysinghk98 defeats 🇲🇾 2-0 and advances to the Finals!
All the best for the finals! Go for🥇BOYS 🇮🇳💪🏻#Cheer4India 🇮🇳#HallaBol… pic.twitter.com/912aUU0tWX
">Update: #Squash at #AsianGames2022
— SAI Media (@Media_SAI) September 29, 2023
SEMI-FINALS: Conquered💪🏻
The men's team comprising of @SauravGhosal , @sandhu_harinder, @maheshmangao and @abhaysinghk98 defeats 🇲🇾 2-0 and advances to the Finals!
All the best for the finals! Go for🥇BOYS 🇮🇳💪🏻#Cheer4India 🇮🇳#HallaBol… pic.twitter.com/912aUU0tWXUpdate: #Squash at #AsianGames2022
— SAI Media (@Media_SAI) September 29, 2023
SEMI-FINALS: Conquered💪🏻
The men's team comprising of @SauravGhosal , @sandhu_harinder, @maheshmangao and @abhaysinghk98 defeats 🇲🇾 2-0 and advances to the Finals!
All the best for the finals! Go for🥇BOYS 🇮🇳💪🏻#Cheer4India 🇮🇳#HallaBol… pic.twitter.com/912aUU0tWX
ಮಹಿಳೆಯರ ತಂಡ ಚೆಸ್ ಸ್ಪರ್ಧೆಯಲ್ಲಿ, ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ 1ನೇ ಸುತ್ತಿನಲ್ಲಿ ಫಿಲಿಪೈನ್ಸ್ ವಿರುದ್ಧ 3.5-0.5 ಯಶಸ್ಸಿನಲ್ಲಿ ಮುನ್ನಡೆಸಿದರು. ಪುರುಷರ ಮತ್ತು ಮಹಿಳೆಯರ ಚೆಸ್ ತಂಡಗಳು ಹ್ಯಾಂಗ್‌ಝೌನಲ್ಲಿ ಒಂಬತ್ತು ಸುತ್ತುಗಳನ್ನು ಆಡಲಿವೆ. ಒಂಬತ್ತನೇ ಸುತ್ತಿನ ಕೊನೆಯಲ್ಲಿ ಅಗ್ರ ಮೂರು ತಂಡಗಳಿಗೆ ಪದಕಗಳನ್ನು ನೀಡಲಾಗುತ್ತದೆ.
ಸ್ಕ್ವಾಷ್ ಫೈನಲ್‌ಗೆ ಭಾರತ: ಸ್ಕ್ವಾಷ್ ಫೈನಲ್ ಸೆಮಿಫೈನಲ್‌ನಲ್ಲಿ ಜಯ ದಾಖಲಿಸಿದ ಪುರುಷರ ತಂಡ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಪುರುಷರ ಸ್ಕ್ವಾಷ್ ತಂಡ ಸೆಮಿಫೈನಲ್‌ನಲ್ಲಿ 2-0 ಗೋಲುಗಳಿಂದ ಮಲೇಷ್ಯಾವನ್ನು ಸೋಲಿಸಿತು. ಭಾರತೀಯ ಸ್ಕ್ವಾಷ್ ಆಟಗಾರರಾದ ಅಭಯ್ ಸಿಂಗ್ ಮತ್ತು ಸೌರವ್ ಘೋಸಲ್ ಇಬ್ಬರೂ ತಮ್ಮ ಮಲೇಷಿಯಾದ ಕೌಂಟರ್ಪಾರ್ಟ್ಸ್ ವಿರುದ್ಧ ನಾಲ್ಕು-ಗೇಮ್ ಪಂದ್ಯಗಳನ್ನು ಗೆದ್ದಿದ್ದಾರೆ. ಹೀಗಾಗಿ ಫೈನಲ್‌ನಲ್ಲಿ ಕನಿಷ್ಠ ಬೆಳ್ಳಿ ಪದಕವಾದರೂ ಭಾರತದ ಪಾಲಾಗಲಿದೆ. ಭಾರತ vs ಪಾಕಿಸ್ತಾನ ಪುರುಷರ ತಂಡ ಸ್ಕ್ವಾಷ್ ಫೈನಲ್ ಪಂದ್ಯ ನಾಳೆ ಮಧ್ಯಾಹ್ನ ಭಾರತೀಯ ಕಾಲಮಾನ 1:30ಕ್ಕೆ ನಡೆಯಲಿದೆ.
ಇದನ್ನೂ ಓದಿ: ’ವಿಶ್ವಕಪ್ ತಂಡ ಸಮತೋಲನದಿಂದ ಕೂಡಿದೆ, ಆದರೆ ತಂಡದಲ್ಲಿ ಆ ಸ್ಪಿನ್ನರ್ ಇರಬೇಕಿತ್ತು’: ಯುವಿ ಆಯ್ಕೆಯ ಆಟಗಾರ ಯಾರು?