ಭುವನೇಶ್ವರ್: ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಖೇಲೋ ಇಂಡಿಯಾ ಗೇಮ್ಸ್ನ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದರೂ 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಒಡಿಸ್ಸಾದಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯ ಮಟ್ಟದ ಖೇಲೋ ಇಂಡಿಯಾ ಗೇಮ್ಸ್ನಲ್ಲಿ ದ್ಯುತಿ ಚಾಂದ್ 100 ಮೀಟರ್ ಓಟವನ್ನು 11.49 ಸೆಕೆಂಡ್ಗಳಲ್ಲಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕಳೆದ ವರ್ಷ 11.22 ಸೆಕೆಂಡ್ಗಳಲ್ಲಿ 100 ಮೀಟರ್ ತಲುಪುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿರುವ ಚಾಂದ್, 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಎಡವಿದ್ದಾರೆ.
-
Once an inspiration, always an inspiration! @DuteeChand enthralled us once again by completing her 1st 100mtr race 🏃♀️ in #KIUG2020 in just 11.6 sec. Can she beat her own timing in the finals? #KIUG2020 #KIUGOdisha2020 #KheloIndia @KirenRijiju @RijijuOffice @PMOIndia @IndiaSports pic.twitter.com/OzCiKPMcLK
— Khelo India (@kheloindia) February 29, 2020 " class="align-text-top noRightClick twitterSection" data="
">Once an inspiration, always an inspiration! @DuteeChand enthralled us once again by completing her 1st 100mtr race 🏃♀️ in #KIUG2020 in just 11.6 sec. Can she beat her own timing in the finals? #KIUG2020 #KIUGOdisha2020 #KheloIndia @KirenRijiju @RijijuOffice @PMOIndia @IndiaSports pic.twitter.com/OzCiKPMcLK
— Khelo India (@kheloindia) February 29, 2020Once an inspiration, always an inspiration! @DuteeChand enthralled us once again by completing her 1st 100mtr race 🏃♀️ in #KIUG2020 in just 11.6 sec. Can she beat her own timing in the finals? #KIUG2020 #KIUGOdisha2020 #KheloIndia @KirenRijiju @RijijuOffice @PMOIndia @IndiaSports pic.twitter.com/OzCiKPMcLK
— Khelo India (@kheloindia) February 29, 2020
ಖೇಲೋ ಇಂಡಿಯಾದಲ್ಲಿ ಚಿನ್ನದ ಪದಕ ಗೆದ್ದರೂ ಒಲಿಂಪಿಕ್ಸ್ ಅರ್ಹತೆಗೆ ನಿಗದಿಪಡಿಸಿದ್ದ ಕಾಲಮಿತಿಯೊಳಗೆ ತಲುಪುವಲ್ಲಿ ಚಾಂದ್ ವಿಫಲರಾದರು. ಒಲಿಂಪಿಕ್ಸ್ ಅರ್ಹತೆಗೆ 11.15 ಸೆಕೆಂಡ್ನಲ್ಲಿ ಗುರಿ ತಲುಪಬೇಕಿತ್ತು. ದ್ಯುತಿ 11.49 ಸೆಕೆಂಡ್ಗಳಲ್ಲಿ ಗುರಿ ತಲುಪಿದ್ದರು.
ದ್ಯುತಿ ಕೆಐಐಟಿ(KIIT- Kalinga Institute of Industrial Technology) ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿದ್ದರು.