ನವದೆಹಲಿ : ಹಾಲಿ ನಂಬರ್ 1 ಮಾನಸಿ ಜೋಷಿ ಚಿನ್ನ, ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ಪ್ರಮೋದ್ ಭಗತ್ 3 ಪದಕ ಸೇರಿದಂತೆ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ಟೂರ್ನಮೆಂಟ್ನಲ್ಲಿ ಭಾರತ ತಂಡ ಒಟ್ಟು 21 ಪದಕ ತನ್ನದಾಗಿಸಿಕೊಂಡಿದೆ.
ಟೂರ್ನಿಯಲ್ಲಿ ಜೋಷಿ ಸೇರಿದಂತೆ ಭಾರತೀಯ ಪ್ಯಾರಾ ಶಟ್ಲರ್ಗಳು 6 ಚಿನ್ನ , 7 ಬೆಳ್ಳಿ ಮತ್ತು 8 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಮಾನಸಿ ಜೋಷಿ (SL3), ನಿತ್ಯಶ್ರೀ(SH6) ಸಿಂಗಲ್ಸ್ನಲ್ಲಿ ಚಿನ್ನ ಗೆದ್ದರೆ, ರಾಜಾ/ಕೃಷ್ಣ (ಪುರುಷರ ಡಬಲ್ಸ್ SH6), ರಾಜ್/ಪಾರುಲ್ (ಮಿಶ್ರ ಡಬಲ್ಸ್ SL3-SU5), ಚಿರಾಗ್/ರಾಜ್ (ಪುರುಷರ ಡಬಲ್ಸ್ SU5) ಮತ್ತು ನಿತೇಶ್/ತರುಣ್ (ಪುರುಷರ ಡಬಲ್ಸ್ SL3-SL4) ಡಬಲ್ಸ್ ವಿಭಾಗದಲ್ಲಿ ಸ್ವರ್ಣಕ್ಕೆ ಮುತ್ತಿಕ್ಕಿದರು.
ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಭಗತ್(SL3) 2 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದರೆ, 2ನೇ ಶ್ರೇಯಾಂಕಿತ ಸುಕಾಂತ್ ಕಡಮ್(SL4) ಕಂಚಿನ ಪದಕ ಪಡೆದರು. ಅರುಣ್ ಧಿಲ್ಲೋನ್ (ಪುರುಷರ ಸಿಂಗಲ್ಸ್ SL4), ಕೃಷ್ಣ ನಗರ (ಪುರುಷರ ಸಿಂಗಲ್ಸ್ SH6), ಮಂದೀಪ್ ಕೌರ್ (ಮಹಿಳೆಯರ ಸಿಂಗಲ್ಸ್ SL3), ಮಾನಸಿ/ರುತಿಕ್ (ಮಿಶ್ರ ಡಬಲ್ಸ್ SL3-SU5), ಹಾರ್ದಿಕ್/ರುತಿಕ್ (ಪುರುಷರ ಡಬಲ್ಸ್ SU5) ಮತ್ತು ಮನೋಜ್/ಭಗತ್ (ಪುರುಷರ ಡಬಲ್ಸ್ SL3-SL4) ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.
ನಿತೇಶ್ ಕುಮಾರ್ (ಪುರುಷರ ಸಿಂಗಲ್ಸ್ SL 3), ಮನೋಜ್ (ಪುರುಷರ ಸಿಂಗಲ್ಸ್ SL 3), ನೀಲೇಶ್ ಗಾಯಕ್ವಾಡ್ (ಪುರುಷರ ಸಿಂಗಲ್ಸ್ SL 4), ಪಾರುಲ್ ಪರ್ಮಾರ್ (ಮಹಿಳಾ ಸಿಂಗಲ್ಸ್ SL 3), ಭಗತ್/ಕೊಹ್ಲಿ (ಮಿಶ್ರ ಡಬಲ್ಸ್ SL 3-SU5), ಅರ್ವಾಜ್ / ದೀಪ್ (ಪುರುಷರ ಡಬಲ್ಸ್ SL3-SL4), ಮತ್ತು ಪ್ರೇಮ್ ಅಲೆ/ಅಬು ಹುಬೈದಾ (ಪುರುಷರ ಡಬಲ್ಸ್ WH1-WH2) ಕಂಚಿನ ಪದಕಗಳನ್ನು ಗೆದ್ದರು.
ಇದನ್ನೂ ಓದಿ:ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ : 6 ಚಿನ್ನದ ಪದಕ ಕೊರಳಿಗೇರಿಸಿಕೊಂಡ ಭಾರತ