ETV Bharat / sports

ಟೋಕಿಯೋ ಒಲಿಂಪಿಕ್​ಗೆ ಪೂರ್ವ ತಯಾರಿ ನಡೆಸುತ್ತಿರುವ ಅನ್ಶು ಮಲಿಕ್

ಹರಿಯಾಣದ ಜಿಂದ್ ಜಿಲ್ಲೆಯ ನಿಡಾನಿ ಎಂಬ ಪುಟ್ಟಹಳ್ಳಿಯ ಪ್ರತಿಭೆ, ಈಗ ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಯುವತಿ ಅನ್ಶು ಮಲಿಕ್​​. ಸಣ್ಣ ಹಳ್ಳಿಯಲ್ಲಿ ಆಟ ಶುರು ಮಾಡಿದ ಅನ್ಶು, ಟೋಕಿಯೋ ಒಲಿಂಪಿಕ್ಸ್​​ಗಾಗಿ ಪೋಲೆಂಡ್​ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಅನ್ಶು ಮಲಿಕ್
ಅನ್ಶು ಮಲಿಕ್
author img

By

Published : Jun 17, 2021, 8:01 PM IST

ಜಿಂದ್ (ಹರಿಯಾಣ): ಭಾರತದ ಯುವ ಪ್ರತಿಭೆ ಅನ್ಶು ಮಲಿಕ್ ಏಷ್ಯನ್ ಕ್ವಾಲಿಫೈಯರ್​ನಲ್ಲಿ ಆಕರ್ಷಕ ಪ್ರದರ್ಶನ ತೋರಿ ಜೂನಿಯರ್​ ನಿಂದ ಸೀನಿಯರ್​ಹಂತಕ್ಕೆ ತೇರ್ಗಡೆಯಾಗಿದ್ದಲ್ಲದೆ, ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.

ಹರಿಯಾಣದ ಜಿಂದ್ ಜಿಲ್ಲೆಯ ನಿಡಾನಿ ಎಂಬ ಪುಟ್ಟಹಳ್ಳಿಯ ಪ್ರತಿಭೆ, ಈಗ ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಯುವತಿ ಅನ್ಶು ಮಲಿಕ್​​. ಸಣ್ಣ ಹಳ್ಳಿಯಲ್ಲಿ ಆಟ ಶುರು ಮಾಡಿದ ಅನ್ಶು, ಟೋಕಿಯೋ ಒಲಿಂಪಿಕ್ಸ್​​ಗಾಗಿ ಪೋಲೆಂಡ್​ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಜೂನಿಯರ್ ವಿಭಾಗದಲ್ಲಿದ್ದರೂ ಎರಡು ವರ್ಷಗಳ ಹಿಂದೆ ಹಿರಿಯರ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ. 57 ಕೆಜಿ ತೂಕ ವಿಭಾಗದಲ್ಲಿ ದೇಶದ ನಂಬರ್ ಒನ್ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನ್ಶು ಮಲಿಕ್​​ ಈ ಸಾಧನೆಗೆ ಅವರ ಅಜ್ಜಿಯೇ ಸ್ಫೂರ್ತಿಯಂತೆ. ಅಜ್ಜಿಯಿಂದ ಸ್ಫೂರ್ತಿ ಪಡೆದ ಅನ್ಶು 2013 ರಿಂದ ಆಟ ಆರಂಭಿಸಿದರು. ನಂತರ ಸೋಲು ಎಂಬುದು ಇವರ ಬಳಿ ಸುಳಿಯಲೇ ಇಲ್ಲ.

ಮುಂಜಾನೆ ನಾಲ್ಕು ಗಂಟೆಗೆ ಎದ್ದು, ವ್ಯಾಯಾಮ ಮಾಡಿದ ಬಳಿಕ ಕುಸ್ತಿ ಅಭ್ಯಾಸ ಮಾಡುತ್ತಾರೆ ಅನ್ಶು. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗೆದ್ದು ಬರುವ ಸಂಪೂರ್ಣ ನಿರೀಕ್ಷೆಯಿದೆ. ಅವರ ತಂದೆ, ಚಿಕ್ಕಪ್ಪ ಕೂಡ ಕುಸ್ತಿಪಟುಗಳಾಗಿದ್ದು, ಇವರೇ ಅನ್ಶುಗೆ ತರಬೇತುದಾರರಾಗಿದ್ದಾರೆ.

ಇದನ್ನೂ ಓದಿ:ಟೋಕಿಯೋ ಒಲಿಂಪಿಕ್ಸ್ - ವಿಂಬಲ್ಡನ್ ಚಾಂಪಿಯನ್​ಶಿಪ್​ ಆಡದಿರಲು ರಾಫೆಲ್ ನಡಾಲ್ ನಿರ್ಧಾರ

ಅನ್ಶು 2016 ರಲ್ಲಿ ಸಿಬಿಎಸ್ಎಂ ಕ್ರೀಡಾ ಕಾಲೇಜಿನಿಂದ ಕುಸ್ತಿ ಪ್ರಾರಂಭಿಸಿದ್ದು, 2017 ರಲ್ಲಿ ವಿಶ್ವ ಚಾಂಪಿಯನ್ ಆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.