ETV Bharat / sports

ಮಾಲ್ಡೀವ್ಸ್‌, ದುಬೈ ಪ್ರವಾಸದ ಬಳಿಕ ಕ್ರೀಡಾಭ್ಯಾಸ ಶುರುಮಾಡಿದ ಜಾವೆಲಿನ್​ ಹೀರೋ ನೀರಜ್​

ಸಾಲು-ಸಾಲು ಸನ್ಮಾನ, ಮಾಲ್ಡೀವ್ಸ್‌ ಮತ್ತು ದುಬೈ ಪ್ರವಾಸದ ಬಳಿಕ ಜಾವೆಲಿನ್​ ಹೀರೋ ನೀರಜ್​ ಚೋಪ್ರಾ ಕ್ರೀಡಾಭ್ಯಾಸ ಶುರುಮಾಡಿದ್ದಾರೆ.

javelin thrower neeraj chopra, javelin thrower neeraj chopra returns to training, javelin thrower neeraj chopra returns to training in nis patiala, ಕ್ರೀಡಾಭ್ಯಾಸ ಶುರುಮಾಡಿದ ನೀರಜ್,  ಕ್ರೀಡಾಭ್ಯಾಸ ಶುರುಮಾಡಿದ ಜಾವೆಲಿನ್​ ಹೀರೋ ನೀರಜ್​, ಪಟಿಯಾಲದಲ್ಲಿ  ಕ್ರೀಡಾಭ್ಯಾಸ ಶುರುಮಾಡಿದ ಜಾವೆಲಿನ್​ ಹೀರೋ ನೀರಜ್​, ​
ಮಾಲ್ಡೀವ್ಸ್‌, ದುಬೈ ಪ್ರವಾಸದ ಬಳಿಕ ಕ್ರೀಡಾಭ್ಯಾಸ ಶುರುಮಾಡಿದ ಜಾವೆಲಿನ್​ ಹೀರೋ ನೀರಜ್​
author img

By

Published : Oct 23, 2021, 9:41 AM IST

ಪಟಿಯಾಲ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ 2020 ಬಂಗಾರ ಪದಕ ಗೆದ್ದ ಬಳಿಕ ಕ್ರೀಡೆಯಿಂದ ದೂರ ಉಳಿದಿದ್ದ ಜಾವೆಲಿನ್‌ ಹೀರೋ ನೀರಜ್‌ ಚೋಪ್ರಾ ಮತ್ತೆ ಕ್ರೀಡಾಭ್ಯಾಸ ಶುರುಮಾಡಿದ್ದಾರೆ. ಪಂಜಾಬ್​ನ ಎನ್‌ಐಎಸ್‌ ಪಟಿಯಾಲದಲ್ಲಿ ನೀರಜ್‌ ಚೋಪ್ರಾ ತನ್ನ ಕ್ರೀಡಾಭ್ಯಾಸ ಪ್ರಾರಂಭಿಸಿದ್ದಾರೆ.

ಆಗಸ್ಟ್‌ 07ರಂದು ನಡೆದ ಟೋಕಿಯೋ ಒಲಿಂಪಿಕ್ಸ್‌ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ 87.58 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದರು. ಟೋಕಿಯೋದಿಂದ ಹಿಂದಿರುಗಿದ ಬಳಿಕ ಸಾಲು ಸಾಲು ಸನ್ಮಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಚೋಪ್ರಾ, ಬಳಿಕ ಮಾಲ್ಡೀವ್ಸ್‌ ಹಾಗೂ ದುಬೈ ಪ್ರವಾಸ ಕೈಗೊಂಡಿದ್ದರು. ಸುಮಾರು 2 ತಿಂಗಳು ಅಭ್ಯಾಸದಿಂದ ಬಿಡುವು ಪಡೆದಿದ್ದರು. ಈಗಾಗಲೇ 2021ರ ಸ್ಪರ್ಧೆಗಳಿಂದ ಹಿಂದೆ ಸರಿದಿರುವ ಚೋಪ್ರಾ, ಮುಂದಿನ ವರ್ಷ ನಡೆಯುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.

  • Returned to training this week with the same hunger and desire as before. A #throwback to the beginning of the last Olympic cycle is a good place to start! Thank you to everyone for your messages of support. 🙏🏻 pic.twitter.com/gia4fP4SQD

    — Neeraj Chopra (@Neeraj_chopra1) October 20, 2021 " class="align-text-top noRightClick twitterSection" data=" ">

ನೀರಜ್ ಚೋಪ್ರಾ ಅಭ್ಯಾಸ ನಡೆಸುತ್ತಿರುವ ಎರಡು ಫೋಟೋಗಳನ್ನು ಟ್ವೀಟ್‌ ಮಾಡಿದ್ದಾರೆ. ಈ ವಾರದಿಂದ ಅಭ್ಯಾಸ ಆರಂಭವಾಗಿದ್ದು, ಈ ಮೊದಲಿದ್ದಷ್ಟೇ ಪದಕ ಗೆಲ್ಲುವ ಹಸಿವು ಈಗಲೂ ಇದೆ. ಕಳೆದ ಒಲಿಂಪಿಕ್ಸ್‌ಗೂ ಮುನ್ನ ನಡೆಸಿದ ಅಭ್ಯಾಸದಂತೆ ಈ ಬಾರಿಯೂ ಉತ್ತಮವಾಗಿದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು ಎಂದು ನೀರಜ್‌ ಚೋಪ್ರಾ ಟ್ವೀಟ್‌ ಮಾಡಿದ್ದಾರೆ.

ಇನ್ನೊಂದು ಟ್ವೀಟ್​ನಲ್ಲಿ ನೀರಜ್​ ಚೋಪ್ರಾ ಸಂದೇಶವೊಂದರ ಕೆಳಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಭಿನವ ಬಿಂದ್ರ ‘ಒಲಿಂಪಿಕ್ಸ್​ ಎಂಬುದು ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರೀಡೆಯಲ್ಲ, ಅದು ಪ್ರತಿದಿನ ನಡೆಯುತ್ತೆ’ ಎಂದು ಹೇಳಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 1 ಚಿನ್ನ 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕಗಳನ್ನು ಜಯಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.