ಟೋಕಿಯೊ: ಕೆನಡಾ ಓಪನ್ 2023 ವಿಜೇತ ಲಕ್ಷ್ಯ ಸೇನ್ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಮ್ಮ ಪ್ರಯಾಣ ಅಂತ್ಯಗೊಳಿಸಿದ್ದಾರೆ. ಭಾರತಕ್ಕೆ ಸೇನ್ ಅವರಿಂದ ಒಂದು ಪ್ರಶಸ್ತಿಯ ನಿರೀಕ್ಷೆ ಇತ್ತು. ಆದರೆ, ಸೆಮಿಸ್ನಲ್ಲಿ ಸೋಲು ಕಂಡ ಸೇನ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಎಡವಿದರು.
-
Indian badminton player #LakshyaSen out of #JapanOpen2023 badminton tournament after losing to world No. 9 Jonatan Christie of #Indonesia in the men's singles semi finals. pic.twitter.com/DZzpkEfYZP
— IANS (@ians_india) July 29, 2023 " class="align-text-top noRightClick twitterSection" data="
">Indian badminton player #LakshyaSen out of #JapanOpen2023 badminton tournament after losing to world No. 9 Jonatan Christie of #Indonesia in the men's singles semi finals. pic.twitter.com/DZzpkEfYZP
— IANS (@ians_india) July 29, 2023Indian badminton player #LakshyaSen out of #JapanOpen2023 badminton tournament after losing to world No. 9 Jonatan Christie of #Indonesia in the men's singles semi finals. pic.twitter.com/DZzpkEfYZP
— IANS (@ians_india) July 29, 2023
ಶನಿವಾರ ನಡೆದ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ವಿಶ್ವದ 9 ನೇ ಶ್ರೇಯಾಂಕಿತ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಜೊನಾಟನ್ ಕ್ರಿಸ್ಟಿ ವಿರುದ್ಧ 15-21, 21-13, 16-21 ರಿಂದ ಸೋಲನುಭವಿಸಿದರು. ಇಬ್ಬರ ನಡುವೆ 68 ನಿಮಿಷಗಳ ಕಾಲ ರೋಚಕ ಸ್ಪರ್ಧೆ ಏರ್ಪಟ್ಟಿತು. ಸೇನ್ ಸೋಲು ಕಂಡರೂ ಸುಲಭವಾಗಿ ಸ್ಪರ್ಧೆಯನ್ನು ಬಿಟ್ಟುಕೊಡಲಿಲ್ಲ.
21 ವರ್ಷದ ಯುವ ಸ್ಟಾರ್ ಆಟಗಾರ ಸೇನ್ ತಮ್ಮ ಎದುರಾಳಿಯ ಮೇಲೆ ಮೊದಲ ಸೆಟ್ನಲ್ಲಿ ಪ್ರತಿರೋಧ ಒಡ್ಡುವಲ್ಲಿ ವಿಫಲರಾದರು. ವಿಶ್ವದ 9 ನೇ ಶ್ರೇಯಾಂಕಿತ ಜೊನಾಟನ್ ಕ್ರಿಸ್ಟಿ ಮುನ್ನಡೆಯನ್ನು ಕಾಯ್ದುಕೊಂಡು 15-21 ರಿಂದ ಮೊದಲ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್ನಲ್ಲಿ ಪುಟಿದೆದ್ದ ಸೇನ್, ಕ್ರಿಸ್ಟಿ ವಿರುದ್ಧ ಬಲಿಷ್ಟ ಹೋರಾಟವನ್ನು ತೋರಿದರು. ಮೊದಲ ಸೆಟ್ನ ವೈಫಲ್ಯಗಳನ್ನು ತಿದ್ದಿಕೊಂಡ ಲಕ್ಷ್ಯ ಎರಡನೇ ಗೇಮ್‌ನಲ್ಲಿ ಉತ್ತಮ ಮುನ್ನಡೆ ಪಡೆದುಕೊಂಡರು.
1-1ರ ಸಮಬಲ ಸಾಧಿಸಿದ ಸೇನ್: ಮೊದಲ ಗೇಮ್ನ ನಂತರ ಪಟ್ಟುಬಿಡದೇ ಎದುರಾಳಿಗೆ ಒತ್ತಡವನ್ನು ಹಾಕಲು ಆರಂಭಿಸಿದರು. ಕ್ರಿಸ್ಟಿ ಅವರ ರಕ್ಷಣಾ ಮತ್ತು ಗುಣಮಟ್ಟದ ಹೊಡೆತಗಳ ಹೊರತಾಗಿಯೂ ಲಕ್ಷ್ಯ ಅವರು ಕಠಿಣ ಹೋರಾಟ ನಡೆಸಿದರು. ಮೊದಲ ಗೇಮ್‌ನಲ್ಲಿ ಕ್ರಿಸ್ಟಿಯ ಆರಂಭಿಕ ತಪ್ಪುಗಳ ಲಾಭ ಪಡೆದು ಲಕ್ಷ್ಯ 7-4ರ ಮುನ್ನಡೆಯೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿದರು. ಇಂಡೋನೇಷ್ಯಾದ ಆಟಗಾರನು ಮತ್ತೆ ಲಯಕ್ಕೆ ಮರಳುವಷ್ಟರಲ್ಲಿ ಸೇನ್ ಅಂತಿಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಸೆಟ್ನ್ನು 21-13 ಅಂತರದಲ್ಲಿ ಗೆದ್ದು ಕೊಂಡರು. ಇದರಿಂದ 1-1ರ ಸಮಬಲ ಸಾಧಿಸಿದರು.
ಗೆಲುವಿಗಾಗಿ ನಡೆದ ಮೂರನೇ ಸೆಟ್ನ ಪೈಪೋಟಿ ಜೋರಾಗಿಯೆ ಇತ್ತು. ಇಬ್ಬರು ಆಟಗಾರರು ಮಾಡುತ್ತಿದ್ದ ಸಣ್ಣ ಪುಟ್ಟ ತಪ್ಪುಗಳೇ ಅಂಕಕ್ಕೆ ಕಾರಣವಾಗಿತ್ತು. ಲಕ್ಷ್ಯ ಸೇನ್ ಅವರ ಕೆಲ ತಪ್ಪು ಹೊಡೆತಗಳು ಕ್ರಿಸ್ಟಿಗೆ ಅಂಕವನ್ನು ತಂದುಕೊಟ್ಟಿತು. ಮೂರನೇ ಸೆಟ್ನ್ನು 16-21 ರಿಂದ ಕ್ರಿಸ್ಟಿ ವಶಪಡಿಸಿಕೊಂಡು ಫೈನಲ್ ಪ್ರವೇಶ ಪಡೆದರು. ಇದು ಲಕ್ಷ್ಯ ಸೇನ್ಗೆ ಕ್ರಿಸ್ಟಿ ವಿರುದ್ಧ ಮೂರನೇ ಹೆಡ್-ಟು-ಹೆಡ್ ಪಂದ್ಯವಾಗಿದ್ದು, ಸೇನ್ ಎರಡರಲ್ಲಿ ಸೋಲು ಕಂಡಿದ್ದಾರೆ.
ಇದನ್ನೂ ಓದಿ: ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್: ಕ್ವಾರ್ಟರ್‌ಫೈನಲ್‌ನಲ್ಲಿ ಎಡವಿದ ಪ್ರಣಯ್, ಸಾತ್ವಿಕ್, ಚಿರಾಗ್