ETV Bharat / sports

ಪ್ರೊ ಕಬಡ್ಡಿ: ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್‌!

ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.

jaipur-pink-panthers-beat-puneri-paltan-to-win-pkl-title
ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್ ಸೋಲಿಸಿ ಚಾಂಪಿಯನ್​ ಪಟ್ಟಕ್ಕೇರಿದ ಜೈಪುರ ಪಿಂಕ್ ಪ್ಯಾಂಥರ್ಸ್
author img

By

Published : Dec 18, 2022, 11:44 AM IST

ಮುಂಬೈ: ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ರೋಚಕ ಫೈನಲ್​ನಲ್ಲಿ ಪುಣೇರಿ ಪಲ್ಟನ್ ತಂಡವನ್ನು 33-29ರಿಂದ ಮಣಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡನೇ ಬಾರಿಗೆ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಜಯಿಸಿತು.

ಫೈನಲ್​ ಹಣಾಹಣಿಯಲ್ಲಿ ವಿ ಅಜಿತ್, ಸುನಿಲ್ ಕುಮಾರ್ ಮತ್ತು ಅರ್ಜುನ್ ದೇಶ್ವಾಲ್ ಅವರು ತಲಾ 6 ಅಂಕ ಗಳಿಸಿ ಜೈಪುರ ತಂಡದ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಪಂದ್ಯಾರಂಭದ ನಿಮಿಷಗಳಲ್ಲಿ ಪಂಕಜ್ ಮೋಹಿತ್​ ಅದ್ಭುತ ದಾಳಿ ನಡೆಸಿ ಪುಣೇರಿ ಪಲ್ಟನ್ 3-1 ಮುನ್ನಡೆ ನೀಡಿದ್ದರು. ಆದರೆ, ಜೈಪುರ ತಂಡ ಮರುಹೋರಾಟ ನಡೆಸಿ 3-3ರಿಂದ ಸಮಬಲ ಸಾಧಿಸಿತು. ಬಳಿಕ ಒಂಬತ್ತನೇ ನಿಮಿಷದ ವೇಳೆಗೆ ಪುಣೆ ತಂಡವು 5-4ರಲ್ಲಿ ಮುನ್ನಡೆಯಲ್ಲಿತ್ತು.

ಆ ಬಳಿಕ, ವಿ ಅಜಿತ್ ತಮ್ಮ ಪರಾಕ್ರಮ ಪ್ರದರ್ಶಿಸತೊಡಗಿದ್ದರಿಂದ ಜೈಪುರವು 6-6ರಲ್ಲಿ ಸ್ಕೋರ್ ಸಮಗೊಳಿಸಿತು. ಎರಡೂ ಕಡೆಯಿಂದ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ನಬಿಬಕ್ಷ್ ಕ್ಷಿಪ್ರ ದಾಳಿ ಮತ್ತು ಟ್ಯಾಕಲ್ ಪಾಯಿಂಟ್ ಕಬಳಿಸಿ 16ನೇ ನಿಮಿಷದ ವೇಳೆಗೆ ಪುಣೆಗೆ 10-8ರಲ್ಲಿ ಮುನ್ನಡೆಗೆ ನೆರವಾದರು.

ಆದರೆ, 19ನೇ ನಿಮಿಷದಲ್ಲಿ ಪ್ಯಾಂಥರ್ಸ್​ನ ಅಜಿತ್‌ ಅವರು ಸಂಕೇತ್‌ ಸಾವಂತ್‌ ಮತ್ತು ಗೌರವ್‌ ಖತ್ರಿಯನ್ನು ಕ್ಯಾಚ್‌ ಔಟ್‌ ಮಾಡಿದರು. ವಿರಾಮದ ವೇಳೆಗೆ ಪ್ಯಾಂಥರ್ಸ್ 14-12ರಲ್ಲಿ ಮುನ್ನಡೆ ಕಾಯ್ದುಕೊಂಡಿತು.

ಆದಿತ್ಯ ಶಿಂಧೆ ಅವರನ್ನು ಟ್ಯಾಕಲ್​ ಮಾಡಿದ ಪ್ಯಾಂಥರ್ಸ್ 22ನೇ ನಿಮಿಷದಲ್ಲಿ ಪಲ್ಟನ್ ತಂಡವನ್ನು ಆಲೌಟ್ ಮಾಡಿ 18-13 ಮುನ್ನಡೆ ಸಾಧಿಸಿತು. ಆದರೂ ಸಹ ಆಕಾಶ್ ಶಿಂಧೆ ಕೆಲ ಪಾಯಿಂಟ್ ರೈಡ್​ಗಳು ಹಾಗೂ ಅಜಿತ್​ರನ್ನು ಟ್ಯಾಕಲ್​ ಮಾಡಿದ ಪುಣೆ 17-18ರ ಸ್ಕೋರ್‌ನತ್ತ ತಲುಪಿತು.

ಆದರೆ ಅಂಕುಶ್ ಅವರು ಆಕಾಶ್ ಶಿಂಧೆಯನ್ನು ಟ್ಯಾಕಲ್​ ಮಾಡಿ, ಪ್ಯಾಂಥರ್ಸ್ ಮುನ್ನಡೆಯನ್ನು ಹಿಗ್ಗಿಸಿದರು. ಕೆಲ ಹೊತ್ತಲ್ಲೇ ಆದಿತ್ಯ ಶಿಂಧೆ ಅವರು ಅಂಕುಶ್ ಮತ್ತು ಸಾಹುಲ್ ಕುಮಾರ್ ಅವರನ್ನು ಕ್ಯಾಚ್ ಔಟ್ ಮಾಡುವ ಮೂಲಕ ಪುಣೆ ತಂಡವನ್ನು 20-23 ಸ್ಕೋರ್​​ನತ್ತ ಕೊಂಡೊಯ್ದರು.

ಬಳಿಕ 34ನೇ ನಿಮಿಷದಲ್ಲಿ 27-22ರಲ್ಲಿ ಮುನ್ನಡೆ ಕಾಯ್ದುಕೊಂಡ ಜೈಪುರ ತಂಡದ ನಾಯಕ ಸುನಿಲ್ ಕುಮಾರ್ ಒಂದೆರಡು ಅದ್ಭುತ ಟ್ಯಾಕಲ್ ಪಾಯಿಂಟ್‌ ದೋಚಿದರು. ಆದರೂ ಬೆಂಬಿಡದ ಪುಣೆ ತಂಡ 38ನೇ ನಿಮಿಷದಲ್ಲಿ ದೇಶ್ವಾಲ್ ಅವರನ್ನು ಟ್ಯಾಕಲ್ ಮಾಡಿ 25-29ರ ಸ್ಕೋರ್​ ತಲುಪಿತು.

ನಂತರ, ಬಾದಲ್ ಸಿಂಗ್ ಅವರು ವಿ ಅಜಿತ್​​ರನ್ನು ಟ್ಯಾಕಲ್​ ಮಾಡಿದರೆ, ಆದಿತ್ಯ ಶಿಂಧೆ ಅವರು ಅದ್ಭುತ ರೈಡಿಂಗ್​ ಮಾಡಿದರು. ಆದರೆ ಪಂದ್ಯದ ಕೊನೆಯ ನಿಮಿಷಗಳಲ್ಲಿ ಪ್ಯಾಂಥರ್ಸ್ 31-29ರಲ್ಲಿ ಮುನ್ನಡೆ ಹೊಂದಿದ್ದಲ್ಲದೆ, ಪಲ್ಟಾನ್​ಗೆ ಅಂಕ ಗಳಿಸಲು ಕಡಿವಾಣ ಹಾಕುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಪಂದ್ಯದ ಅಂತಿಮ ಸೆಕೆಂಡ್​ಗಳಲ್ಲಿ ಸಮಯೋಚಿತ ಆಟವಾಡಿದ ಪ್ಯಾಂಥರ್ಸ್ ತಂಡ ಎರಡನೇ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿಗೆ ಮುತ್ತಿಕ್ಕಿತು.

ಇದನ್ನೂ ಓದಿ: ಚಿತ್ತಗಾಂಗ್​ ಟೆಸ್ಟ್: ಬಾಂಗ್ಲಾ ವಿರುದ್ಧ ರಾಹುಲ್​ ಪಡೆಗೆ 188 ರನ್​ಗಳ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.