ನವದೆಹಲಿ: ಭಾರತದ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಮಂಗಳವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ 10 ಸ್ಥಾನಗಳ ಏರಿಕೆ ಕಂಡು ವೃತ್ತಿಜೀವನ ಶ್ರೇಷ್ಠ 38 ನೇ ಸ್ಥಾನ ಪಡೆದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಜಿ. ಸಥಿಯಾನ್ 34ನೇ ಸ್ಥಾನ ಪಡೆದಿದ್ದಾರೆ.
ಹಿರಿಯ ಆಟಗಾರ ಅಚಂತ ಶರತ್ ಕಮಲ್ 37ನೇ ಸ್ಥಾನ ಪಡೆದುಕೊಂಡು ಭಾರತದ 2ನೇ ಶ್ರೇಷ್ಠ ಪ್ಯಾಡ್ಲರ್ ಎನಿಸಿಕೊಂಡಿದ್ದಾರೆ. ಶರತ್ ಕಮಲ್ ಮತ್ತು ಸಥಿಯಾನ್ ಪುರಷರ ಅಗ್ರ 100 ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದಿರುವ ಭಾರತೀಯರಾಗಿದ್ದಾರೆ. ಆದರೆ, ಮಹಿಳಾ ಶ್ರೇಯಾಂಕದಲ್ಲಿ ಮನಿಕಾ ಜೊತೆ ಇತರೆ ಮೂವರು ಅವಕಾಶ ಪಡೆದಿದ್ದಾರೆ. ಅರ್ಚನಾ ಕಾಮತ್ 92ರಿಂದ 66ನೇ ಸ್ಥಾನಕ್ಕೆ ಬಡ್ತಿ ಪಡೆದರೆ, ಯುವ ಆಟಗಾರ್ತಿ ಶ್ರೀಜಾ ಅಕುಲ 68 ಮತ್ತು ರೀತ್ ಟೆನಿಸನ್ 97ನೇ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಜಾ ಬರೋಬ್ಬರಿ 39 ಸ್ಥಾನ ಬಡ್ತಿ ಪಡೆದರೆ, ರೀತ್ 197 ಸ್ಥಾನ ಬಡ್ತಿ ಪಡೆದಿದ್ದಾರೆ.
ಡಬಲ್ಸ್ ವಿಭಾಗದಲ್ಲಿ ಜಿ ಸಥಿಯನ್ ಮತ್ತು ಹರ್ಮೀತ್ ದೇಸಾಯಿ 28, ಸಥಿಯನ್ - ಶರತ್ 35 ಪುರುಷರ ವಿಭಾಗದಲ್ಲಿ ಟಾಪ್ 40ಯಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಡಬಲ್ಸ್ ವಿಭಾಗದಲ್ಲಿ ಮನಿಕಾ ಮತ್ತು ಅರ್ಚನಾ ಕಾಮತ್ ಜೋಡಿ 4ನೇ ಶ್ರೇಯಾಂಕ ಪಡೆದಿಯುವ ಮೂಲಕ ITTF ರ್ಯಾಂಕಿಂಗ್ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ಆಗ ಸ್ವೀಪರ್, ಆಟೋ ಡ್ರೈವರ್.. 9ನೇ ತರಗತಿ ಫೇಲ್ ಆಗಿದ್ದವ ಈಗ ಕೆಕೆಆರ್ ಸ್ಟಾರ್ ಪ್ಲೇಯರ್..