ನವದೆಹಲಿ: ಐಎಸ್ಎಸ್ಎಫ್ ವಿಶ್ವಕಪ್ನ ಮಹಿಳೆಯರ ಟ್ರ್ಯಾಪ್ ತಂಡದ ವಿಭಾಗದಲ್ಲಿ ರಾಜೇಶ್ವರಿ ಕುಮಾರಿ, ಮನೀಶಾ ಕೀರ್ ಮತ್ತು ಶ್ರೇಯಸಿ ಸಿಂಗ್ ಒಳಗೊಂಡಿದ್ದ ತಂಡ ಚಿನ್ನದ ಪದಕಕ್ಕೆ ಗುರಿಯಿಟ್ಟಿದೆ.
ಭಾನುವಾರ ನಡೆದ ಫೈನಲ್ನಲ್ಲಿ ಭಾರತದ ವನಿತೆಯರು ಕಜಕಸ್ತಾನ ತಂಡದ ವಿರುದ್ಧ 6-0ಯಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತ ವಿಶ್ವಕಪ್ನಲ್ಲಿ ಚಿನ್ನದ ಬೇಟೆ 14ಕ್ಕೇರಿದೆ.
ಇದಕ್ಕೂ ಮುನ್ನ ನಡೆದ ಪುರುಷರ ಟ್ರ್ಯಾಪ್ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಿನನ್ ಚೆನಾಯ್, ಪೃಥ್ವಿರಾಜ್ ತೊಂಡೈಮನ್ ಮತ್ತು ಲಕ್ಷ್ಯ ಇದ್ದ ತಂಡ ಸ್ಲೊವಾಕಿಯಾ ವಿರುದ್ಧ 6-4ರಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ 15ನೇ ಚಿನ್ನದ ಪದಕದ ತಂದುಕೊಟ್ಟರು.
25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ನಲ್ಲಿ ಬೆಳ್ಳಿ:
ಗುರುಪ್ರೀತ್ ಸಿಂಗ್, ವಿಜಯ್ ವೀರ್ ಸಿಧು ಮತ್ತು ಆದರ್ಶ್ ಸಿಂಗ್ ಅಮೆರಿಕಾ ತಂಡದ ವಿರುದ್ಧ ಸೋಲು ಕಂಡು ಬೆಳ್ಳಿಪದಕ ಪಡೆಯಿತು. ಈ ತಂಡ 2-10ರಲ್ಲಿ ಕೀತ್ ಸ್ಯಾಂಡರ್ಸನ್, ಜ್ಯಾಕ್ ಲೆವೆರೆಟ್ ಮತ್ತು ಹೆನ್ರಿ ಟರ್ನರ್ ಲೆವೆರೆಟ್ ವಿರುದ್ಧ ಪರಾಜಯ ಅನುಭವಿಸಿದರು.
ಭಾರತ ತಂಡ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ 15 ಚಿನ್ನದ ಪದಕಗಳ ಸಹಿತ ಒಟ್ಟು 30 ಪದಕಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ.
ಇದನ್ನೂ ಓದಿ: ಶೂಟಿಂಗ್ ವಿಶ್ವಕಪ್.. ಭಾರತಕ್ಕೆ 13ನೇ ಚಿನ್ನದ ಪದಕ ತಂದುಕೊಟ್ಟ ವಿಜಯವೀರ್-ತೇಜಶ್ವಿನಿ ಜೋಡಿ