ಚಾಂಗ್ವಾನ್ (ದಕ್ಷಿಣ ಕೊರಿಯಾ): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತವು ಗುರುವಾರ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತವು ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಒಟ್ಟು ಎಂಟು ಪದಕಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿತು. ಪದಕಗಳ ಪಟ್ಟಿಯಲ್ಲಿ ಆತಿಥೇಯ ಕೊರಿಯಾ ಮತ್ತು ಸರ್ಬಿಯಾಕ್ಕಿಂತ ಮುಂದಿದೆ.
10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಕೊರಿಯಾವನ್ನು 17-15 ಅಂಕಗಳಿಂದ ಸೋಲಿಸಿದ ಅರ್ಜುನ್ ಬಾಬುತಾ, ಶಾಹು ತುಷಾರ್ ಮಾನೆ ಮತ್ತು ಪಾರ್ಥ್ ಮಖಿಜಾ ಅವರು ದೇಶವು ತನ್ನ ಮೂರನೇ ಚಿನ್ನದ ಪದಕವನ್ನು ಗಳಿಸಲು ಸಹಾಯ ಮಾಡಿದರು. ಅರ್ಜುನ್, ಮಖಿಜಾ ಮತ್ತು ಮಾನೆ ಉತ್ತಮವಾಗಿ ಪ್ರದರ್ಶಿಸಿದರು, ಕೊರಿಯಾದ ಸೆಯುಂಘೋ ಬ್ಯಾಂಗ್, ಸಾಂಗ್ಡೊ ಕಿಮ್ ಮತ್ತು ಹಜುನ್ ಪಾರ್ಕ್‌ನನ್ನು ಸೋಲಿಸಿ ಫೈನಲ್‌ನಲ್ಲಿ ಗೆಲುವು ಸಾಧಿಸಿದರು.
ವಿಶ್ವಕಪ್‌ನಲ್ಲಿ ಅರ್ಜುನ್ ಮತ್ತು ಶಾಹುಗೆ ಇದು ಎರಡನೇ ಚಿನ್ನವಾಗಿದೆ. ಎಲವೆನಿಲ್ ವಲವಿರಾನ್, ಮೆಹುಲಿ ಘೋಷ್ ಮತ್ತು ರಮಿತಾ ಅವರ ಜೋಡಿಯೂ ದೇಶಕ್ಕೆ ಬೆಳ್ಳಿಯನ್ನು ತಂದುಕೊಟ್ಟಿದೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಟೀಮ್ ಈವೆಂಟ್ ಫೈನಲ್‌ನಲ್ಲಿ ಭಾರತ ತಂಡವು ಇಟಲಿಯ ಪಾಲೊ ಮೊನ್ನಾ, ಅಲೆಸ್ಸಿಯೊ ಟೊರಾಚಿ ಮತ್ತು ಲುಕಾ ಟೆಸ್ಕೊನಿ ವಿರುದ್ಧ ಹೋರಾಟ ನಡೆಸಿ 15-17 ರಿಂದ ಸೋಲನ್ನು ಅನುಭವಿಸಿ, ದೇಶಕ್ಕೆ ಮತ್ತೊಂದು ಬೆಳ್ಳಿಯನ್ನು ತಂದುಕೊಟ್ಟರು.
ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲಿ ಇಂಗ್ಲೆಂಡ್ ವಿಂಬಲ್ಡನ್ ಟೂರ್ನಮೆಂಟ್ ಆಡಿದ ಕೊಲ್ಲಾಪುರದ ಪೋರಿ
10 ಮೀಟರ್ ಏರ್ ಪಿಸ್ತೂಲ್ನ ಮಹಿಳೆಯರ ವಿಭಾಗದಲ್ಲಿ ರಿದಮ್ ಸಾಂಗ್ವಾನ್, ಯುವಿಕಾ ತೋಮರ್ ಮತ್ತು ಪಾಲಕ್ ಅವರ ತಂಡವು ಟೋಕಿಯೊದಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಕಿಮ್ ಮಿನ್‌ಜುಂಗ್ ಅವರನ್ನೊಳಗೊಂಡ ಕೊರಿಯಾ ತಂಡದ ವಿರುದ್ಧ 2-10 ಅಂತರದಿಂದ ಸೋತರು.