ETV Bharat / sports

ಕ್ಯಾಪಿಟಲ್ ಫೌಂಡೇಶನ್​ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ನರಿಂದರ್ ಬಾತ್ರಾ

ಖ್ಯಾತ ನ್ಯಾಯಶಾಸ್ತ್ರಜ್ಞ, ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ 106 ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕ್ಯಾಪಿಟಲ್ ಫೌಂಡೇಶನ್ ' ವಾರ್ಷಿಕ ಉಪನ್ಯಾಸ ಮತ್ತು ಪ್ರಶಸ್ತಿ -2020' ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..

author img

By

Published : Nov 15, 2020, 5:43 PM IST

ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ನರಿಂದರ್ ಬಾತ್ರಾ

ನವದೆಹಲಿ : ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷರಾಗಿರುವ ನರಿಂದರ್ ಬಾತ್ರಾ ಅವರು ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗೆ 2020ರ ಕ್ಯಾಪಿಟಲ್ ಫೌಂಡೇಶನ್ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

ಖ್ಯಾತ ನ್ಯಾಯಶಾಸ್ತ್ರಜ್ಞ, ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ 106ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕ್ಯಾಪಿಟಲ್ ಫೌಂಡೇಶನ್ 'ವಾರ್ಷಿಕ ಉಪನ್ಯಾಸ ಮತ್ತು ಪ್ರಶಸ್ತಿ -2020' ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಾತ್ರ ಭಾರತೀಯ ಒಲಿಂಪಿಕ್ಸ್​ ಅಸೋಸಿಯೇಶನ್​ ಅಧ್ಯಕ್ಷರಾಗಿರುವುದರ ಜೊತೆಗೆ ​ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ ಮತ್ತು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್​ನ ಅಧ್ಯಕ್ಷರಾಗಿದ್ದಾರೆ.

ಬಾತ್ರಾ ಈ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರೋ ನಿಂಗೋಂಬಮ್ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತದಲ್ಲಿ ಕ್ರೀಡಾ ಆಡಳಿತವನ್ನು ವೃತ್ತಿಪರಗೊಳಿಸುವುದರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.

ಎಲ್ಲಾ ಕ್ರೀಡೆಗಳ ಉನ್ನತಿಗಾಗಿ ಅವರ ಸಮರ್ಪಣೆಗಾಗಿ ಈ ಪ್ರಶಸ್ತಿ ಅರ್ಹವಾಗಿದೆ ” ಎಂದು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.