ನವದೆಹಲಿ: ಕಾಲ್ಚೆಂಡಿನ ಆಟದಲ್ಲಿ ಸೂಪರ್ ಸ್ಟಾರ್ ಆಗಿರುವ ಲಿಯೋನೆಲ್ ಮೆಸ್ಸಿ ನಿನ್ನೆ ನಡೆದ ಪಂದ್ಯದಲ್ಲಿ ತಮ್ಮ ಕಾಲ್ಚೆಳಕವನ್ನು ತೋರಿದ್ದಾರೆ. ಇಂಟರ್ ಮಿಯಾಮಿಗಾಗಿ ಅಡುತ್ತಿರುವ ಅವರು ಎಫ್‌ಸಿ ಡಲ್ಲಾಸ್ ವಿರುದ್ಧದ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನ ಫುಟ್ಬಾಲ್ ಪ್ರಿಯರಿಗೆ ಅಷ್ಟೇ ಅಲ್ಲದೇ ಆಟವನ್ನು ನೋಡಿದ ಇತರರಿಗೂ ಒಮ್ಮೆಗೆ ರೋಮಾಂಚನವನ್ನು ಉಂಟುಮಾಡಿದೆ.
ಲೀಗ್ ಕಪ್ನಲ್ಲಿ ಇಂಟರ್ ಮಿಯಾಮಿ ಪರ ಆಡುತ್ತಿರುವ ಮೆಸ್ಸಿ ಪೆನಾಲ್ಟಿ ಕಿಕ್‌ನಲ್ಲಿ ಎಫ್‌ಸಿ ಡಲ್ಲಾಸ್ ವಿರುದ್ಧ ನಾಲ್ಕನೇ ಗೋಲು ಗಳಿಸಿದ್ದು ಈಗ ವೈರಲ್ ಆಗುತ್ತಿದೆ. ಮೆಸ್ಸಿ ಗೋಲ್ ಗಳಿಸಿದ್ದರಿಂದಾಗ 4-4 ಸಮಬಲವನ್ನು ಇಂಟರ್ ಮಿಯಾಮಿ ಸಾಧಿಸಿತು. ಇದರಿಂದ ಅಂತಿಮವಾಗಿ ಪಂದ್ಯದಲ್ಲಿ 5-4ರಿಂದ ಗೆಲುವು ಸಹ ದಾಖಲಿಸಿತು.
85ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಮೆಸ್ಸಿ ಕರಾರುವಕ್ಕಾಗಿ ಬಳಸಿಕೊಂಡಿದ್ದಾರೆ. ಎಫ್‌ಸಿ ಡಲ್ಲಾಸ್ನ ಗೋಲ್ ಕೀಪರನ್ನು ವಂಚಿಸಿ ಗಳಿಸಿದ ಗೋಲ್ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಘಾರಕ್ಕೆ ಕಾರಣವಾಯಿತು. ನೆಟ್ನ ಕಾರ್ನರ್ಗೆ ಗುರಿಯಾಗಿಸಿ ಮೆಸ್ಸಿ ಒದ್ದಿದ್ದ ಚೆಂಡು ನೇರವಾಗಿ ನೆಟ್ನ್ನು ಸೇರಿತ್ತು. ಗೋಲ್ ಕೀಪರ್ಗೆ ಅದನ್ನು ತಡೆಯಲೂ ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ಮಿಯಾಮಿ ನಂತರ ಕಮ್ಬ್ಯಾಕ್ ಮಾಡಿ ಗೆಲುವು ದಾಖಲಿಸಿತು.
-
HE DID IT AGAIN. 🤯
— Major League Soccer (@MLS) August 7, 2023 " class="align-text-top noRightClick twitterSection" data="
LEO MESSI. FREE KICK. EQUALIZER. 4-4. pic.twitter.com/Yh1TXFDENH
">HE DID IT AGAIN. 🤯
— Major League Soccer (@MLS) August 7, 2023
LEO MESSI. FREE KICK. EQUALIZER. 4-4. pic.twitter.com/Yh1TXFDENHHE DID IT AGAIN. 🤯
— Major League Soccer (@MLS) August 7, 2023
LEO MESSI. FREE KICK. EQUALIZER. 4-4. pic.twitter.com/Yh1TXFDENH
ಪಂದ್ಯ ಹೀಗಿತ್ತು: ಇಂಟರ್ ಮಿಯಾಮಿ ಆರಂಭದ 6ನೇ ನಿಮಿಷದಲ್ಲೇ ಒಂದು ಗೋಲ್ ಗಳಿಸಿತು. ಆದರೆ ನಂತರ ಡಲ್ಲಾಸ್ ಮುನ್ನಡೆಯನ್ನು ಸಾಧಿಸಿತು. ಮೆಸ್ಸಿ ತಂಡ 1-2 ರಿಂದ ಹಿನ್ನಡೆ ಅನುಭವಿಸಿತು. ನಂತರವೂ ಡೆಲ್ಲಾಸ್ ಗೋಲ್ ಪಡೆದು 3-1 ರಿಂದ ಮುನ್ನಡೆಯನ್ನು ಪಡೆದುಕೊಂಡಿತ್ತು. 68 ನೇ ನಿಮಿಷದಲ್ಲಿ ಮಿಯಾಮಿಯ ಅಟಗಾರ ರಾಬರ್ಟ್ ಟೇಲರ್ ಅವರು ಗಳಿಸಿ ಗೋಲ್ನಿಂದ ಅಂತರ ಸ್ಪಲ್ಪ ಕಡಿಮೆ ಆಯಿತು. ನಂತರ ಮೆಸ್ಸಿಗೆ ಸಿಕ್ಕೆ ಫ್ರೀ ಕಿಕ್ ನಿಂದ ಸಮಬಲ ಸಾದಿಸಿತು. ಪಂದ್ಯದ ಕೊನೆಯಲ್ಲಿ ಸಿಕ್ಕ ಫೆನಾಲ್ಟಿ ಶೂಟೌಟ್ನಲ್ಲಿ ಮಿಯಾಮಿ ಗೋಲ್ ಪಡೆದುಕೊಂಡು ಲೀಗ್ ಕಪ್‌ನ ಕ್ವಾರ್ಟರ್-ಫೈನಲ್‌ಗೆ ಸ್ಥಾನವನ್ನು ಪಡೆದುಕೊಂಡಿದೆ.
ಹೆಚ್ಚು ಗೋಲ್ ಗಳಿಸಿದ ಆಟಗಾರ: ಮೇಜರ್ ಲೀಗ್ ಸಾಕರ್ (ಎಮ್ಎಲ್ಎಸ್) ಕ್ಲಬ್‌ಗಾಗಿ ಆಡುತ್ತಿರುವ ಮೆಸ್ಸಿ ಲೀಗ್‌ಗಳ ಕಪ್ ಪಂದ್ಯಗಳಲ್ಲಿ ಏಳು ಗೋಲುಗಳನ್ನು ಗಳಿಸಿದರು. ನಿನ್ನೆ ನಡೆದ ಪಂದ್ಯದಲ್ಲಿ ಮಿಯಾಮಿ ಪರ ಎರಡು ಗೋಲ್ ಗಳಿಸಿದ ನಂತರ 2023 ರಲ್ಲಿ ಇಂಟರ್ ಮಿಯಾಮಿಯ ಟಾಪ್ ಸ್ಕೋರರ್ ಆಗಿದ್ದಾರೆ.
ಇದನ್ನೂ ಓದಿ: Archery Championships: ಚಿನ್ನ ಗೆದ್ದ ಅದಿತಿ, ಓಜಸ್; ವಿಶ್ವ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಐತಿಹಾಸಿಕ ಸಾಧನೆ