ETV Bharat / sports

ಬೀಜಿಂಗ್ ಚಳಿಗಾಲದ​ ಒಲಿಂಪಿಕ್ಸ್​: ಭಾರತ ತಂಡದ ಮ್ಯಾನೇಜರ್​ಗೆ ನಿನ್ನೆ ಕೋವಿಡ್​ ಪಾಸಿಟಿವ್, ಇಂದು ನೆಗೆಟಿವ್​​ - Winter Olympics

Beijing Winter Olympic- 2022: ಬುಧವಾರ ಬೀಜಿಂಗ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ನಡೆಸಿದ್ದ ಕೋವಿಡ್ 19​ ಟೆಸ್ಟ್​ನಲ್ಲಿ ಭಾರತ ತಂಡದ ಮ್ಯಾನೇಜರ್​ ಮೊಹಮ್ಮದ ಅಬ್ಬಾಸ್​ಗೆ ಪಾಸಿಟಿವ್ ಬಂದಿತ್ತು. ಇಂದು ನಡೆಸಿದ ಎರಡು ಪರೀಕ್ಷೆಗಳಲ್ಲಿ ಅವರಿಗೆ ನೆಗೆಟಿವ್ ಬಂದಿದೆ ಎಂದು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮಾಹಿತಿ ನೀಡಿದ್ದಾರೆ.

India's Winter Olympic contingent COVID-free
ಬೀಜಿಂಗ್ ವಿಂಟರ್​ ಒಲಿಂಪಿಕ್ಸ್
author img

By

Published : Feb 3, 2022, 4:47 PM IST

ಬೀಜಿಂಗ್(ಚೀನಾ): ಕೋವಿಡ್​ 19 ಪಾಸಿಟಿವ್​ ವರದಿ ಪಡೆದುಕೊಂಡಿದ್ದ ಚಳಿಗಾಲದ ಒಲಿಂಪಿಕ್ಸ್​ನ ಭಾರತ ತಂಡದ ಮ್ಯಾನೇಜರ್​ ಮೊಹಮ್ಮದ್ ಅಬ್ಬಾಸ್ ವಾನಿ​ ಅವರಿಗೆ 24 ಗಂಟೆಗಳ ನಂತರ ನಡೆಸಿದ ಮತ್ತೊಂದು ಟೆಸ್ಟ್​ನಲ್ಲಿ ನೆಗೆಟಿವ್​ ವರದಿ ಬಂದಿದೆ ಎಂದು ಗುರುವಾರ ಭಾರತ ಒಲಿಂಪಿಕ್ ಅಸೋಸಿಯೇಷನ್​ ತಿಳಿಸಿದೆ.

ಬುಧವಾರ ಬೀಜಿಂಗ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ನಡೆಸಿದ್ದ ಕೋವಿಡ್ 19​ ಟೆಸ್ಟ್​ನಲ್ಲಿ ಪಾಸಿಟಿವ್ ಬಂದಿತ್ತು. ಇಂದು ನಡೆಸಿದ ಎರಡು ಪರೀಕ್ಷೆಗಳಲ್ಲಿ ಅವರಿಗೆ ನೆಗೆಟಿವ್ ಬಂದಿದೆ ಎಂದು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮಾಹಿತಿ ನೀಡಿದ್ದಾರೆ.

"ಭಾರತೀಯ ತಂಡದ ಮ್ಯಾನೇಜರ್ ಅಬ್ಬಾಸ್ ವಾನಿ ಅವರಿಗೆ ಕಳೆದ 24 ಗಂಟೆಗಳಲ್ಲಿ ಮಾಡಿದ 2 ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಹಾಗಾಗಿ ಬೀಜಿಂಗ್‌ನಲ್ಲಿರುವ ಇಡೀ ಭಾರತೀಯ ತಂಡವು ಕೋವಿಡ್ ಮುಕ್ತವಾಗಿದೆ. ಪ್ರತಿಯೊಬ್ಬರ ಆರೈಕೆ ಮಾಡಿದ್ದಕ್ಕಾಗಿ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಬಾತ್ರಾ ತಿಳಿಸಿದ್ದಾರೆ.

ಫೆಬ್ರವರಿ 4ರಿಂದ 30ರವರೆಗೆ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್​ನಲ್ಲಿ ಪಾಲ್ಗೊಂಡಿರುವ 6 ಸದಸ್ಯರ ಭಾಗವಾಗಿದ್ದಾರೆ. ಆದರೆ ಆರಿಫ್​ ಏಕಮಾತ್ರ ಕ್ರೀಡಾಪಟುವಾಗಿ ಸ್ಪರ್ಧಿಸಲಿದ್ದಾರೆ. ಅವರು ಸ್ಲಾಲೋಮ್​ ಮತ್ತು ಜೈಂಟ್​ ಸ್ಲಾಸೋಮ್​ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ:ಅನುಷ್ಕಾ ಬೆಂಗಳೂರಿನಲ್ಲಿ ನನಗಿಂತ ಹೆಚ್ಚಿನ ಸಮಯ ಕಳೆದಿದ್ದಾರೆ, ಈ ನಗರದ ಜೊತೆ ವಿಶೇಷ ಬಾಂಧವ್ಯವಿದೆ: ವಿರಾಟ್​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.